Views: 2
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 17
ಕೃಷಿ ಇಲಾಖೆಯಲ್ಲಿ 2024-25ನೇ ಸಾಲಿನ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಬೆಂಗಳೂರು ಜಿಲ್ಲೆಯಲ್ಲಿ ನೇರಗುತ್ತಿಗೆ ಆಧಾರದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಸದಾಗಿ ಸೃಜಿಸಿರುವ ಯೋಜನಾ ನಿರ್ವಹಣಾ ತಂಡದಲ್ಲಿ (PMT) – ಜಿಲ್ಲಾ ಮಟ್ಟದ ಸಲಹೆಗಾರರು 01(ಒಂದು) ಹೊರಗುತ್ತಿಗೆ ಹುದ್ದೆ. ಇದಕ್ಕೆ ಬಿ.ಎಸ್ಸಿ ಕೃಷಿ ಪದವಿ , ಆಗ್ರೋನಮಿ / ಸಾಯಿಲ್ ಸೈನ್ಸ್/ ಪ್ಲಾಂಟ್ ಪ್ರೊಟೆಕ್ಷನ್ ಅಥವಾ ಇತರೆ ಕೃಷಿ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಪಡೆದು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 02 ತಾಂತ್ರಿಕ ಸಹಾಯಕರು ಹುದ್ದೆಗೆ ಬಿ.ಎಸ್ಸಿ ಕೃಷಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯ ದಿನವಾಗಿದ್ದು, ಅರ್ಜಿಯನ್ನು ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೃಷಿ ಸಂಕೀರ್ಣ, ಎಸ್.ಕರಿಯಪ್ಪ ರಸ್ತೆ (ಕನಕಪುರ ರಸ್ತೆ) ಬನಶಂಕರಿ, ಬೆಂಗಳೂರು-560070 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.