ಬೆಂಗಳೂರು, ಸೆಪ್ಟೆಂಬರ್ 26
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಿರುವಂತೆ ವಿವಿಧ ಪತ್ರಕರ್ತರ ಸಂಘಟನೆಗಳ ಪ್ರತಿನಿಧಿಗಳನ್ನು, ಅವುಗಳ ಪ್ರಾತಿನಿಧ್ಯದ ಸಂಖ್ಯೆಗೆ ಅನುಗುಣವಾಗಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನ ಶಿವಾನಂದ ತಗಡೂರು, ದಾವಣಗೆರೆ ಜಿಲ್ಲೆಯ ಜನತಾವಾಣಿಯ ಇ.ಎಂ. ಮಂಜುನಾಥ್, ವಿಜಯಪುರ ಜಿಲ್ಲೆಯ ವಿಜಯ ಕರ್ನಾಟಕ ವರದಿಗಾರ ಸಂಗಮೇಶ ಚೂರಿ, ಬೆಂಗಳೂರಿನ ಸುವರ್ಣ ಟಿ.ವಿಯ ಇನ್‍ಪುಟ್ ಮುಖ್ಯಸ್ಥೆ ಶೋಭಾ ಎಂ.ಸಿ. ಹುಬ್ಬಳ್ಳಿಯ ಪತ್ರಕರ್ತ ಜೆ.ಅಬ್ಬಾಸ್ ಮುಲ್ಲಾ, ಟಿವಿ 9 ಹಿರಿಯ ಪತ್ರಕರ್ತ ಹೆಚ್.ವಿ.ಕಿರಣ್ ಬೆಂಗಳೂರಿನ ಟೈಮ್ಸ್ ಆಫ್ ಇಂಡಿಯಾದ ಹಿರಿಯ ಪತ್ರಕರ್ತ ಅನಿಲ್ ವಿ. ಗೆಜ್ಜಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಪತ್ರಕರ್ತ ಕೆಂಚೇಗೌಡ, ಉಡುಪಿ ಜಿಲ್ಲೆ ಕುಂದಾಪುರದ ಕುಂದಪ್ರಭ ಸಂಪಾದಕ ಯು. ಸುರೇಂದ್ರ ಶೆಣೈ, ಮೈಸೂರಿನ ಆಂದೋಲನ ದಿನಪತ್ರಿಕೆಯ ಸಂಪಾದಕ ರವಿ ಕೋಟಿ, ಪ್ರಜಾವಾಣಿಯ ರಶ್ಮಿ ಎಸ್ ಇವರನ್ನು ಸದಸ್ಯರನ್ನಾಗಿ ನೇಮಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ ನಿಯಮಾಳಿಗಳ ಪ್ರಕಾರ ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ದಾವಣಗೆರೆ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಬೆಂಗಳೂರಿನ ಆಕಾಶವಾಣಿಯ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.