ಶಿವಮೊಗ್ಗ : ಆಗಸ್ಟ್ 06
ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯಕೀಯ ಆಮ್ಲಜನಕ ವ್ಯವಸ್ಥೆಯ ನಿರ್ವಹಣೆ ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆ. 12 ರಂದು ಬೆಳಗ್ಗೆ 11.00 ರಿಂದ ಮ. 1.00 ರವರೆಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನವನ್ನು ನಡೆಸಲಾಗುವುದು.
ಡಿಪ್ಲೋಮಾ/ ಐಟಿಐ ಇನ್ ಬಯೋ ಮೆಡಿಕಲ್/ಎಲೆಕ್ಟಿçಕಲ್/ ಎಲೆಕ್ಟಾçನಿಕ್ಸ್/ ಇನ್‌ಸ್ಟುçಮೆಂಟೇಶನ್/ ಮೆಕಾನಿಕಲ್/ ಇನ್‌ಸ್ಟುçಮೆಂಟ್ ಮ್ಯಾಕಾನಿಕ್/ ಮೈಂಟೆನೆನ್ಸ್ ಮ್ಯಾಕಾನಿಕ್ ವಿದ್ಯಾರ್ಹತೆ ಹೊಂದಿದವರಿಗೆ ಹಾಗೂ ಅನುಭವವುಳ್ಳ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಮೂಲ ದಾಖಲಾತಿಗಳು ಮತ್ತು ಪ್ರಮಾಣ ಪತ್ರ ಹಾಗೂ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಆಡಳಿತ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.