ರಾಯಚೂರು,ಆ.01
ಜಿಲ್ಲೆಯ ಮುದಗಲ್ ಪಿ.ಎಮ್ ಶ್ರೀ ಜವಾಹರ್ ನವೋದಯ ವಿದ್ಯಾಲಯದ ವತಿಯಿಂದ 2025-26ನೇ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರಿಂದ 3,4 ಮತ್ತು 5ನೇ ತರಗತಿಯ ನಿಗದಿತ ವ್ಯಾಸಂಗ ಪ್ರಮಾಣ ಪತ್ರ, ಛಾಯಾಚಿತ್ರ, ಪೋಷಕರ ಸಹಿ, ಅಭ್ಯರ್ಥಿಯ ಸಹಿ, ಆಧಾರ್ ವಿವರಗಳು ಹಾಗೂ ತಹಶೀಲ್ದಾರರಿಂದ ಪಡೆದ ನಿವಾಸ ಪ್ರಮಾಣ ಪತ್ರಗಳೊಂದಿಗೆ ನವೋದಯ ವಿದ್ಯಾಲಯ ಸಮಿತಿ ವೆಬ್‌ಸೈಟ್ www.navodaya.gov.in ಗೆ ಭೇಟಿ ನೀಡಿ, ಇದೇ 2024ರ ಸೆಪ್ಟಂಬರ್ 16ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ; 9448571580, 7204109046 ಹಾಗೂ 9703473495ಗೆ ಸಂಪರ್ಕಿಸುವAತೆ ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.