Views: 1
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ ಇನ್ನಿತರೆ ಜಾಹೀರಾತುಗಳ ತೆರವು ಹಾಗೂ ಅವುಗಳನ್ನು ನಿಯಂತ್ರಿಸಲು “ಜಾಹೀರಾತು ಮುಕ್ತ ಅಭಿಯಾನ” ವನ್ನು ಆರಂಭಿಸಿದೆ.
ನಗರದ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ, ಅನಧಿಕೃತ ವಾಣಿಜ್ಯ ಜಾಹೀರಾತುಗಳು, ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು, ಇನ್ನಿತರೆ ಮುದ್ರಣ ಪ್ರಕಟಣೆ/ಜಾಹೀರಾತು ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತುಗಳು, ಬೃಹತ್ ಎಲ್.ಇ.ಡಿ ಜಾಹೀರಾತುಗಳು, ಸೈಕಲ್ ಜಾಹೀರಾತುಗಳು, ವಾಣಿಜ್ಯ ಜಾಹೀರಾತುಗಳು, ವಾಹನ ಜಾಹೀರಾತುಗಳು ಇತರೇ ಜಾಹೀರಾತುಗಳು ಕಂಡು ಬಂದಲ್ಲಿ ಕೇಂದ್ರ ಕಛೇರಿ ಹಾಗೂ ಆಯಾ ವಲಯಗಳ ಕಛೇರಿಗಳಿಗೆ ಮಾಹಿತಿ ನೀಡಲು ನಾಗರೀಕರಲ್ಲಿ ಮನವಿ ಮಾಡಿದೆ.
ಅನಧಿಕೃತ ಜಾಹೀರಾತುಗಳ ಕುರಿತು ದೂರುಗಳನ್ನು ನೊಂದಾಯಿಸುವ ದೂರವಾಣಿ ಸಂಖ್ಯೆಯ ವಿವರದ ಪ್ರತಿ ಲಗತ್ತಿಸಿದೆ.