ಬೆಂಗಳೂರು ಗ್ರಾಮಾಂತರ ಜಿಲ್ಲೆ,ಆಗಸ್ಟ್ 13
ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಭೇತಿ ಕೇಂದ್ರವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇವನಹಳ್ಳಿ ಜಿ.ಟಿ.ಟಿ.ಸಿ. ಕೇಂದ್ರದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಕೋರ್ಸ್ಗಳ ದಾಖಲಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಡಿಪ್ಲೊಮಾ ಕೋರ್ಸ್ ಗಳ ಪ್ರವೇಶಾತಿಗೆ, ಸಂಬಂಧಿಸಿದಂತೆ. ಬಾಕಿ ಉಳಿದಿರುವ ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31ರ ವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ & ಡೈಮೇಕಿಂಗ್ (DTDM), ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ (DMCH), ಡಿಪ್ಲೋಮಾ ಇನ್ ಎಲೆಕ್ನಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (DEEE), ಡಿಪ್ಲೋಮಾ ಇನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮಿಷೀನ್ ಲರ್ನಿಂಗ್ (DAI & ML) ಈ 04 ವಿಭಾಗದ ಡಿಪ್ಲೋಮಾ ಕೋರ್ಸ್ ಗಳಿಗೆ ಈ ಕೋರ್ಸ್ ಗಳಿಗೆ ಎಸ್. ಎಸ್. ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆ. ಪಿಯುಸಿ ಮತ್ತು ಐಟಿಐ ಪಾಸಾದ ವಿದ್ಯಾರ್ಥಿಗಳು ಡಿಪ್ಲೋಮಾ ತರಬೇತಿಗಳಿಗೆ ದಾಖಲಾತಿ ಪಡೆಯಬಹುದಾಗಿದೆ. ಈ ಡಿಪ್ಲೋಮಾ ಕೋರ್ಸ್ಗಳ ಅವಧಿ 3+1. ಈ ಕೋರ್ಸ್ ಗಳು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದ್ದು, ಶೇ. 30% ಥಿಯರಿ, ಶೇ. 70% ಪ್ರಾಕ್ಟಿಕಲ್ ಹೊಂದಿರುವ ಕೋರ್ಸ್ ಗಳಾಗಿವೆ. ಈ ಕೋರ್ಸ್ ಅಧ್ಯಯನ ಮಾಡುವಾಗ 3 ವರ್ಷ ಡಿಪ್ಲೊಮಾ ತರಬೇತಿ ನಂತರ ಕಡ್ಡಾಯ ಒಂದು ವರ್ಷದ ಇಂಟರ್ನ್ ಶಿಪ್ ತರಬೇತಿ ನೀಡಲಾಗುತ್ತದೆ. ಈ ಇಂಟರ್ನ್ ಶಿಪ್ ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 20,000 ವರೆಗೆ ಶಿಷ್ಯ ವೇತನ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 080-26607666, 9036144417, 9242952017, 9980956422 ಅಥವಾ ಜಿಟಿಟಿಸಿ ದೇವನಹಳ್ಳಿ ಕಾಲೇಜಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ಅರ್ಜಿ ಸಲ್ಲಿಸಲು ಕಾಲೇಜಿಗೆ ಭೇಟಿ ನೀಡಬಹುದು ಎಂದು ದೇವನಹಳ್ಳಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿ.ಟಿ.ಟಿ.ಸಿ) ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.