Views: 0
ಧಾರವಾಡ ಮೇ.31:
ದೇಶದ ವಿವಿಧ ಜಿಲ್ಲೆಗಳ ಒಟ್ಟಾರೆ ಮಣ್ಣು ಪರೀಕ್ಷೆಗಳ ಸಮೀಕ್ಷೆ ವರದಿ ಪ್ರಕಾರ ಒಟ್ಟು ಮಣ್ಣು ಮಾದರಿಗಳ ಪೈಕಿ ಶೇ.46% ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ರಂಜಕದ ಅಂಶ, ಶೇ 52 ರಷ್ಟು ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದ ರಂಜಕದ ಅಂಶ ಮತ್ತು ಶೇ 2 ರಷ್ಟು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ರಂಜಕದ ಅಂಶ ಇರುವುದು ಕಂಡು ಬಂದಿದೆ. ಈ ಅಂಕಿ ಅಂಶವು ಧಾರವಾಡ ಜಿಲ್ಲೆಯನ್ನು ಸಹ ಒಳಗೊಂಡಿದೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಕೃಷಿ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ಕೃಷಿ ಜಮೀಮಗಳಿಗೆ ಒದಗಿಸುವ ರಂಜಕವು ಸಾರಜನಕ ಪೂರೈಸುವ ಗೊಬ್ಬರಗಳಿಗೆ ಹೋಲಿಸಿದರೆ ಯೂರಿಯಾ ಬಹಳ ದಿನಗಳ ಸಮಯ ಮಣ್ಣಿನಲ್ಲಿ ಸ್ಥಿರವಾಗಿ ಉಳಿಯುತ್ತದೆ ಮತ್ತು ಬೆಳೆಗಳಿಗೆ ಸಾವಕಾಶವಾಗಿ ಪೂರೈಕೆ ಆಗುತ್ತದೆ. ಬೆಳೆ ಪದ್ಧತಿ ಮತ್ತು ವಾರ್ಷಿಕ ಬದಲಿ ಬೆಳೆ ಪದ್ಧತಿಗಳಲ್ಲಿ ಭೂಮಿಯಲ್ಲಿ ಇರುವ ರಂಜಕ ಒದಗಿಸಿದ ಬೆಳೆಗೆ ಇದು ಸಂಪೂರ್ಣವಾಗಿ ಲಭ್ಯವಾಗದೇ ಹೋದರೂ ತದನಂತರದ ಬೆಳೆಗೂ ಲಭ್ಯವಾಗುತ್ತದೆ.
ರಂಜಕ ಒದಗಿಸುವ ಗೊಬ್ಬರಗಳಲ್ಲಿ ಅತಿಯಾಗಿ ಬಳಕೆಯಾಗುವ ಗೊಬ್ಬರವೆಂದರೆ ಡಿ.ಎ.ಪಿ. ಇದರಲ್ಲಿ ಪೋಷಕಾಂಶ ಪ್ರಮಾಣ ಶೇ. 18 ರಷ್ಟು ಸಾರಜನಕ ಮತ್ತು ಶೇ 46 ರಷ್ಟು ರಂಜಕ ಇದೆ. ಈ ಒಂದು ಕಾರಣಕ್ಕೆ ಮತ್ತು ಬೆಳೆಗೆ ಪೂರೈಕೆ ಮಾಡುವಲ್ಲಿ ಸುಲಭವಾಗಿ ಕೂರಿಗೆಯಲ್ಲಿ ಬೀಳುವುದರಿಂದ ಡಿ.ಎ.ಪಿ ರಸಗೊಬ್ಬರಕ್ಕೆ ಅತಿ ಹೆಚ್ಚಿನ ಬೇಡಿಕೆ ಹೊಂದಿದೆ.
ಶೇ. 52 ರಷ್ಟು ಜಿಲ್ಲೆಗಳಲ್ಲಿ ಕಂಡು ಬಂದಿರುವ ಮಧ್ಯಮ ಪ್ರಮಾಣದ ರಂಜಕಕ್ಕೆ ನಿರಂತರವಾಗಿ ಬಳಸುತ್ತಿರುವ ಡಿ.ಎ.ಪಿ ಗೊಬ್ಬರವೂ ಒಂದು ಕಾರಣವಾಗಿದೆ. ಜಮೀನುಗಳಲ್ಲಿ ಬೆಳೆಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ರಂಜಕಕ್ಕೆ ಪ್ರತಿಕ್ರಿಯೆ ದೊರೆಯುವುದಿಲ್ಲ ಆದಕಾರಣ ಡಿ.ಎ.ಪಿ ಗೊಬ್ಬರದ ಬದಲಾಗಿ ಹಲವಾರು ಪರ್ಯಾಯ ರಂಜಕ ಒದಗಿಸುವ ಗೊಬ್ಬರಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ಅವರು ತಿಳಿಸಿದ್ದಾರೆ.
ಸಾರಜನಕ ಮತ್ತು ಪೆÇಟ್ಯಾμï ಪೆÇೀಷಕಾಂಶಗಳ ಜೊತೆ ಸಂಯುಕ್ತ ಹೊಂದಿದ ಸಂಯುಕ್ತ ಅಥವಾ ಮಿಶ್ರಣ ರೂಪದಲ್ಲಿ ಲಭ್ಯವಿರುವ ಗೊಬ್ಬರಗಳೆಂದರೆ ಸೂಪರ್ ಫಾಸ್ಪೆಟ್ 17:17:17, 15:15:15, 19:19:19, 10:26:26. 20:20:00, 28:28:00 ಮತ್ತು ಎಣ್ಣೆಕಾಳು ಮತ್ತು ದ್ವಿದಳ ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ಸಂಯೋಜಿಸಿದ 12:32:16 ರಾಸಾಯನಿಕ ರಸಗೊಬ್ಬರ ಜೊತೆಗೆ ನೀರಿನಲ್ಲಿ ಸಂಪೂರ್ಣವಾಗಿ ಕರಗುವ ಮೊನೋ ಅಮೋನಿಯಂ ಫಾಸ್ಪೆಟ್ 12:61:00 ಮತ್ತು ಮೊನೋ ಪೆÇಟ್ಯಾಸಿಯಂ ಫಾಸ್ಪೆಟ್ 00:52:34 ಸಹ ಲಭ್ಯವಿದೆ. ಈ ಗೊಬ್ಬರಗಳನ್ನು ಬೆಳೆಯ ಬೆಳವಣಿಗೆಯ ಹಂತದಲ್ಲಿ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.
ಆಮ್ಲಿಯ ಮಣ್ಣುಗಳಲ್ಲಿ ನೈಸರ್ಗಿಕವಾಗಿ ದೊರೆಯುವ ಶಿಲಾ ರಂಜಕವನ್ನು ವಿಶೇಷವಾಗಿ ಬಹುವಾರ್ಷಿಕ ಬೆಳೆಗಳಲ್ಲಿ ಮತ್ತು ಭತ್ತದಲ್ಲಿ ಬಳಸಬಹುದು. ಧಾರವಾಡ ಜಿಲ್ಲೆಯಲ್ಲಿನ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರಸ್ತುತ 20:20:00, 10:26:26, 12:32:16 ಮತ್ತು 15:15:15 ಲಭ್ಯ ಇವೆ. ರಂಜಕಯುಕ್ತ ರಸಗೊಬ್ಬರಕ್ಕೆ ಪರ್ಯಾಯವಾಗಿದ್ದು, ರೈತರು ಡಿ.ಎ.ಪಿ ಯೇ ಬೇಕೆಂದು ಬಯಸದೇ ಉಳಿದ ಗೊಬ್ಬರಗಳನ್ನು ಸಹ ಬಳಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2447517 ಅಥವಾ ತಾಂತ್ರಿಕ ಮಾಹಿತಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ. ಎಸ್.ಎ. ಗದ್ದಾನಕೇರಿ ಮತ್ತು ಡಾ. ಬಸವರಾಜ ಶಿ. ಏಣಗಿ ಅವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.