ಪಾಲಿಕೆಯ ಎಂಟು ವಲಯಗಳ ಪೈಕಿ ಮಹದೇವಪುರ ವಲಯವು ಅತಿ ಹೆಚ್ಚು ಆಸ್ತಿ-ತೆರಿಗೆಯನ್ನು ಸಂಗ್ರಹಿಸಿರುತ್ತದೆ: ವಲಯ ಆಯುಕ್ತರು

0
38
Share this Article
0
(0)
Views: 8

ಡಿಸೆಂಬರ್ 10 2024: ಬಿಬಿಎಂಪಿ ಮಹದೇವಪುರ ವಲಯ 

ಪಸಕ್ತ ಆರ್ಥಿಕ ಸಾಲಿನಲ್ಲಿ ಮಹದೇವಪುರ ವಲಯಕ್ಕೆ ನಿಗದಿಪಡಿಸಿದ ಆಸ್ತಿ ತೆರಿಗೆ ಮೊತ್ತ ರೂ 1309.04 ಕೋಟಿಗಳಾಗಿದ್ದು, ಈ ಪೈಕಿ ನವೆಂಬರ್ ಮಾಸಾಂತ್ಯಕ್ಕೆ ರೂ 1154.49 ಕೋಟಿಗಳನ್ನು ಸಂಗ್ರಹಿಸುವ ಮೂಲಕ ಮಹದೇವಪುರ ವಲಯವು ಅತಿ ಹೆಚ್ಚು ಆಸ್ತಿ ತೆರಿಗೆಯನ್ನು ಸಂಗ್ರಹಿಸಿರುತ್ತದೆ. 

ಸರಕಾರ ಮತ್ತು ಪಾಲಿಕೆಯಿಂದ ಜಾರಿಗೆ ತರಲಾದ ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಸಲುವಾಗಿ ಉಪ-ವಿಭಾಗ ಮತ್ತು ವಾರ್ಡ್ಗಳ ಮಟ್ಟದಲ್ಲಿ ಆಸ್ತಿ ಮಾಲೀಕರೊಂದಿಗೆ ನಿರಂತರ ಜನ ಸಂಪರ್ಕ ಸಭೆಯನ್ನು ನಡೆಸಲಾಗಿರುತ್ತದೆ. 

ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದ್ದ ಸುಸ್ತಿದಾರರು, ಆಸ್ತಿ-ತೆರಿಗೆ ಪರಿಷ್ಕರಣೆಗೊಂಡಿರುವ ಪ್ರಕರಣಗಳು ಹಾಗೂ ತೆರಿಗೆ ಜಾಲಕ್ಕೆ ಒಳಪಡೆ ಇದ್ದಂತಹ ಆಸ್ತಿ ಮಾಲೀಕರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಜನರಿಗೆ ಓಟಿಸ್ ಬಗ್ಗೆ ಮಾಹಿತಿಯನ್ನು ನೀಡಿ ಅತಿ ಹೆಚ್ಚು ಆಸ್ತಿ-ತೆರಿಗೆ ಸಂಗ್ರಹಿಸಲು ಸಾಧ್ಯವಾಗಿರುತ್ತದೆ.

ಮಹದೇವಪುರ ವಲಯ ವ್ಯಾಪ್ತಿಯ ಕೆ.ಆರ್ ಪುರ ಉಪ-ವಿಭಾಗ ಹಾಗೂ ಹೂಡಿ ಉಪ-ವಿಭಾಗಗಳೆರಡೂ ಆಸ್ತಿ-ತೆರಿಗೆ ವಸೂಲಾತಿಯಲ್ಲಿ ಶೇಕಡಾ 90ರಷ್ಟು ಪ್ರಗತಿ ಸಾಧಿಸಿದ್ದು, ಒಟ್ಟಾರೆಯಾಗಿ ಮಹದೇವಪುರ ವಲಯವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇಕಡಾ 88.19 ರಷ್ಟು ಗುರಿ ಸಾಧಿಸಿರುತ್ತದೆ.

ವಲಯ ಮಟ್ಟದಲ್ಲಿ ವಲಯ ಆಯುಕ್ತರು, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಕಂದಾಯ ವಿಭಾಗದ ಅಧಿಕಾರಿ ಮತ್ತು ನೌಕರರುಗಳು ಓಟಿಎಸ್ ಯೋಜನೆಯನ್ನು ಜನರಿಗೆ ತಲುಪಿಸುವ ಮೂಲಕ ನಿಗದಿ ಪಡಿಸಿದ ಗುರಿ ಸಾಧಿಸಲು ಶ್ರಮಿಸಿರುತ್ತಾರೆ.

ಇ-ಖಾತಾ ತ್ವರಿತಗತಿಯಲ್ಲಿ ವಿತರಣೆಗೆ ಕ್ರಮ ವಹಿಸಲಾಗಿದೆ: ವಲಯ ಆಯುಕ್ತ

ಪಾಲಿಕೆಯ ಕಂದಾಯ ವಿಭಾಗದಿಂದ ಸ್ವತ್ತಿನ ಮಾಲೀಕರಿಗೆ ಇ-ಆಸ್ತಿ ತಂತ್ರಾಂಶದ ಮೂಲಕ ತ್ವರಿತಗತಿಯಲ್ಲಿ ಇ-ಖಾತಾ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿರುತ್ತದೆ.

ವಿಶೇಷ ಆಯುಕ್ತರು (ಕಂದಾಯ)ರವರ ಸೂಚನೆಯಂತೆ 3-ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿ ಮತ್ತು 47-ಹೆಚ್ಚುವರಿ ವಿಷಯ ನಿರ್ವಾಹಕರ ಲಾಗಿನ್ಗಳನ್ನು ಸೃಜಿಸುವ ಮೂಲಕ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಜನರಿಗೆ ಅತಿ ಶೀಘ್ರದಲ್ಲಿ ಅಂತಿಮ ಇ-ಖಾತಾ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು 4.29 ಲಕ್ಷ ಸ್ವತ್ತುಗಳಿದ್ದು, ಅಂತಿಮ ಇ-ಖಾತಾ ಕೋರಿ 6012 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 3851 ಸ್ವತ್ತುಗಳು ಇ-ಖಾತಾ ಅನುಮೋದಿಸಿ ಅಂತಿಮ –ಖಾತಾ ವಿತರಿಸಲಾಗಿರುತ್ತದೆ. ಕಳೆದ 24 ಘಂಟೆಗಳಲ್ಲಿ 445 ಸ್ವತ್ತುಗಳ ಅಂತಿಮ ಇ-ಖಾತಾ ವಿತರಿಸಲಾಗಿರುತ್ತದೆ.

ಮಹದೇವಪುರ ವಲಯ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಖಾತಾ ವಿತರಿಸುವ ಸಂಬಂಧ ಮುಂದಿನ ದಿನಗಳಲ್ಲಿ ವಸತಿ ಸಮುಚ್ಚಯಗಳು, ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಬಡಾವಣೆಗಳಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಬೃಹತ್ ಪ್ರಮಾಣದಲ್ಲಿ ಇ-ಖಾತಾ ವಿತರಣೆಗೆ ಕ್ರಮ ವಹಿಸಲಾಗುವುದು.

ಪಾಲಿಕೆಯಿಂದ ಇ-ಖಾತಾ ಕುರಿತಾಗಿ ನಾಗರೀಕ ಸಹಾಯವಾಣಿಯನ್ನು ಆರಂಭಿಸಿದ್ದು, ಇ-ಖಾತಾ ಪಡೆಯಲು ಯಾವೂದಾದರೂ ಸಮಸ್ಯೆ ಎದುರಿಸುತ್ತಿದಲ್ಲಿ ಅಥವಾ ಕಂದಾಯ ವಿಭಾಗ ಯಾವುದೇ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ನಾಗರೀಕ ಸಹಾಯವಾಣಿ ಸಂಖ್ಯೆ: 94806-83695ನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ವಲಯ ಆಯುಕ್ತರಾದ ಶ್ರೀ. ಕೆ.ಎನ್.ರಮೇಶ್, ಭಾ.ಆ.ಸೇ ರವರು ತಿಳಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here