ಪಿಎಂಇಜಿಪಿ ಯೋಜನೆಯಡಿ ಆರ್ಥಿಕ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ

0
47
Share this Article
0
(0)
Views: 1

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 06:- ಜಿಲ್ಲೆಯ 2024-25 ನೇ ಸಾಲಿಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ)ಯಡಿ ನಿರುದ್ಯೋಗ ಯುವಕ-ಯುವತಿಯರಿಗೆ ಆರ್ಥಿಕ ಸಾಲ ಸೌಲಭ್ಯ ನೀಡುವ ಯೋಜನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯೋಜನೆಯ ವಿವರಗಳು:

1) 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು(ಪುರುಷರು/ಮಹಿಳೆಯರು/ಪ.ಜಾ/ ಪ.ಪಂ/ಹಿಂದುಳಿದ ವರ್ಗ/ಅಲ್ಪಸಂಖ್ಯಾತರು/ಮಾಜಿ ಸೈನಿಕರು/ಅಂಗವಿಕಲರು).

2) ರೂ. 50.00 ಲಕ್ಷ ಮೇಲ್ಪಟ್ಟ ಯೋಜನಾ ವೆಚ್ಚದ ಉತ್ಪಾದನಾ ಚಟುವಟಿಕೆಗಳಿಗೆ ಹಾಗೂ ರೂ.20.00 ಲಕ್ಷಗಳ ವರೆಗೆ ಯೋಜನಾ ವೆಚ್ಚದ ಸೇವಾ ಚಟುವಟಿಕೆಗಳಿಗೆ. ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿರಬೇಕು. ವಿವಿಧ ಹಣಕಾಸು ಸಂಸ್ಥೆಗಳು (ಬ್ಯಾಂಕ್‌ಗಳ) ಮೂಲಕ ಸಾಲ ಸೌಲಭ್ಯ ನೀಡಲಾಗುವುದು.

3) ಯಾವುದೇ ಆದಾಯದ ಮಿತಿ ಇರುವುದಿಲ್ಲ.

4) ಸಾಮಾನ್ಯ ವರ್ಗದ ಪುರುಷ ಉದ್ಯಮಶೀಲರಿಗೆ ಗ್ರಾಮೀಣ ಪ್ರದೇಶದಲ್ಲಿ ಯೋಜನಾ ವೆಚ್ಚದ ಶೇ.25 ರಷ್ಟು ಹಾಗೂ ವಿಶೇಷ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ.35 ರಷ್ಟು ಸಹಾಯಧನ ಪಡೆಯಬಹುದಾಗಿದೆ.

5)ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ ನಂತರ ತಮ್ಮ ದಾಖಲಾತಿಗಳನ್ನು ಈ ಕಛೇರಿಗೆ ಸಲ್ಲಿಸುವುದು.

ಈ ಯೋಜನೆಯ ಬಗ್ಗೆ ಆಸಕ್ತಿ ಹೊಂದಿರುವ ಉದ್ಯಮಶೀಲರು www.kviconline.gov.in ವೆಬ್‌ಸೈಟ್ ನಲ್ಲಿ kvib ಏಜೆನ್ಸಿ ಲಾಗಿನ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ ಖಾದಿ ಭವನ ನಂ. 10 ಜಸ್ಮಾ ಭವನ ರಸ್ತೆ ಬೆಂಗಳೂರು ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ. 94808 25612 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here