ಬೆಂಗಳೂರು, ಮೇ 29:
ಮಾನವ ಹಾಲನ್ನು ಸಂಸ್ಕರಿಸಲು/ಮಾರಾಟ ಮಾಡುವ ಮತ್ತು ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಆಹಾರ ಉದ್ದಿಮೆದಾರರಿಗೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಆಹಾರ ಉದ್ದಿಮೆದಾರರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011ರನ್ವಯ ಕಾನೂನು ಕ್ರಮಜರುಗಿಸಲಾಗುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಎಫ್‍ಎಸ್‍ಎಸ್‍ಎಐ ರವರು ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣದ ಕುರಿತು ವಿವಿಧ ನೊಂದಾಯಿತ ಸಮಾಜಗಳಿಂದ ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾದ ಹಿನ್ನೆಲೆಯಲ್ಲಿAdvisory : RCD-02005/1/2023-Regulatoty-FSSAI, E-8065, 30:24.05.2024 ಅನ್ನು ಹೊರಡಿಸಿದ್ದು, ಸದರಿ Advisory ಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011ರಡಿಯಲ್ಲಿ ಮಾನವ ಹಾಲನ್ನು ಸಂಸ್ಕರಿಸಲು/ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿರುತ್ತಾರೆ.