Views: 0
ಶಿವಮೊಗ್ಗ, ಮೇ 28;
ಅರ್ಜಿದಾರರಾದ ಶ್ರೀಮತಿ ಹೆಚ್. ಪ್ರೇಮಾ ಮತ್ತು ಹುಚ್ಚರಾಯಪ್ಪ ಬಿ.ಎಸ್. ದಂಪತಿಗಳು ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್ ಕಂ.ಲಿ., ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಶ್ರೀಮತಿ ಹೇಮ ಇವರು ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಸುಮಾರು 3 ಲಕ್ಷದ ವರೆಗೆ ವೈದ್ಯಕೀಯ ವೆಚ್ಚ ಭರಿಸಿರುತ್ತಾರೆ ಮತ್ತು ವೈದ್ಯಕೀಯ ವೆಚ್ಚವನ್ನು ಪಾಲಿಸಿ ನಿಯಮಗಳ ಪ್ರಕಾರ ಮರು ಪಾವತಿಸುವಂತೆ ಕೋರಿರುತ್ತಾರೆ. ವಿಮಾ ಕಂಪನಿಯು ಅರ್ಜಿದಾರರು ವಿಮಾ ಪಾಲಿಸಿ ಪಡೆಯುವ ಪೂರ್ವ 5 ವರ್ಷಗಳಿಂದ ಸಕ್ಕರೆ ಖಾಯಿಲೆ ಮತ್ತು ಅಧಿಕ ರಕ್ತದ ಒತ್ತಡ ಖಾಯಿಲೆಗಳು ಇರುವ ಸಂಗತಿ ಮಾರೆಮಾಚಿರುತ್ತಾರೆ. ಇದು ವಿಮಾ ಪಾಲಿಸಿಯಾ ನಿಬಂಧನೆಗಳ ಉಲ್ಲಂಘನೆಯಾಗಿರುವುದರಿಂದ, ಪಿರ್ಯಾದಿದಾರರು ವೈದ್ಯಕೀಯ ಪರಿಹಾರ ಪಡೆಯಲು ಅರ್ಹ ಆಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಸಂಬಂಧ ಆಯೋಗವು ಅರ್ಜಿದಾರರು ಹಾಜರುಪಡಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಎದುರುದಾರರು ಕೇವಲ ತಾಂತ್ರಿಕ ಕಾರಣಗಳ ಆಧಾರದ ಮೇಲೆ ಫಿರ್ಯಾದುದಾರರಿಗೆ ವೈದ್ಯಕೀಯ ವೆಚ್ಚವನ್ನು ಮರುಪಾವತಿಸದಿರುವುದು ಸೇವಾನ್ಯೂನ್ಯತೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರರು ರೂ.1,76,951/- ಗಳ ವೈದ್ಯಕೀಯ ವೆಚ್ಚವನ್ನು ಶೇ.9% ಬಡ್ಡಿ ಸಮೇತ ಮರುಪಾವತಿಸ ಬೇಕು, ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.30,000/- ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. 10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಶ್ರೀಮತಿ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಮೇ.16 ರಂದು ಆದೇಶಿಸಿದೆ.