ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ *ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಿ.ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯ ಸಹಯೋಗದೊಂದಿಗೆ ಆಡಳಿತ ವೈಧ್ಯಾದಿಕಾರಿಗಳಾದ *ಡಾ. ಬಾಬು ಮಹೇಂದ್ರ ಪ್ರಸಾದ್* ರವರ ನಿರ್ದೇಶನದಂತೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಗುರುರಾಜ್* ರವರ ನೇತೃತ್ವದಲ್ಲಿ ಪ್ರೌಢಶಾಲಾ ಮಕ್ಕಳ ನೆರವಿನಿಂದ ಜನ- ಜಾಗೃತಿ-ಜಾಥಾ ದೊಂದಿಗೆ ಲಾರ್ವ ಸಮೀಕ್ಷೆ ಮತ್ತು ನಿರ್ಮೂಲನ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಮಾದರಿ ಹಾಗೂ ವಿಶಿಷ್ಟ ಕಾರ್ಯಾಚರಣೆಯಲ್ಲಿ ಸುಮಾರು *60 ವಿದ್ಯಾರ್ಥಿಗಳು* ಸಕ್ರಿಯವಾಗಿ ಪಾಲ್ಗೊಂಡು *ತಲಾ 20 ಮನೆಗಳಂತೆ* ಗುಣಾತ್ಮಕವಾಗಿ *ಸುಮಾರು1200 ಹೆಚ್ಚು ಮನೆ* ಗಳಿಗೆ ಆಶ್ರಿತ ರೋಗವಾಹಕ ರೋಗಗಳ ಕುರಿತ *ಕರಪತ್ರ* ಗಳನ್ನು ಹಂಚಿ, ಜನತೆಗೆ *ಆರೋಗ್ಯ ಶಿಕ್ಷಣ* ನೀಡುವುದರೊಂದಿಗೆ *ಲಾರ್ವ ಸಮೀಕ್ಷೆ* ಮತ್ತು ನಿರ್ಮೂಲನ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀಶೈಲ್ ಕನ್ನಾಳ್* ರವರು ಡೆಂಗ್ಯೂ ಚಿಕನ್ ಗುನ್ಯಾ ಕುರಿತಾದ ಆರೋಗ್ಯ ಶಿಕ್ಷಣವನ್ನು ನೀಡಿದರು.
ಆರೋಗ್ಯನಿರೀಕ್ಷಣಾಧಿಕಾರಿಗಳಾದ *ಶ್ರೀ ಮಂಜುನಾಥ, ಶ್ರೀ ಕಿರಣ್, ಶ್ರೀ ಶರತ್, ಶ್ರೀ ಶಿವಣ್ಣ* ಸೇರಿದಂತೆ ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳ ಲಾರ್ವ ಸಮೀಕ್ಷೆ ಮತ್ತು ನಿರ್ಮೂಲನ ತಂಡದ ಕಾರ್ಯವೈಖರಿಯ ಮೇಲ್ವಿಚಾರಣೆಯನ್ನು ಮಾಡಿದರು.