Views: 0
ಧಾರವಾಡ ಮೇ.29:
ಧಾರವಾಡ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಸತಿ ಶಾಲೆ, ಸೈದಾಪೂರ, ಇಲ್ಲಿನ ಖಾಲಿ ಇರುವ ಸ್ಥಾನಗಳಿಗೆ ಅನುಗುಣವಾಗಿ ಭರ್ತಿ ಮಾಡಲು 01 ನೇ ತರಗತಿಯಿಂದ 05 ನೇ ತರಗತಿವರೆಗಿನ ಅರ್ಹ ಪ.ಜಾತಿ, ಪ.ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗಧಿತ ಅರ್ಜಿ ಫಾರ್ಮಗಳನ್ನು ಧಾರವಾಡ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಅಥವಾ ಸರ್ಕಾರಿ ವಸತಿ ಶಾಲೆ. ಸೈದಾಪೂರ ಧಾರವಾಡದಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು. ಪ್ರವೇಶ ಬಯಸುವ ವಿದ್ಯಾರ್ಥಿಗಳು ನಿಗಧಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಸ್ಪಷ್ಟವಾಗಿ ಭರ್ತಿ ಮಾಡಿ, ಸಂಬಂಧಿಸಿದ ದಾಖಲಾತಿಗಳೊಂದಿಗೆ ಧಾರವಾಡ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಾರ್ಯಾಲಯಕ್ಕೆ ಜೂನ್ 15, 2024 ರ ಸಂಜೆ: 5.30 ರೊಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.