Views: 7
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 17
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ 1. ನಾವೀನ್ಯತೆ (Innovation), 2. ತಾರ್ಕಿಕ ಸಾಧನೆ (Scholastic) (ಉದಾ: ಎರಡು ಅನುಕ್ರಮ ವರ್ಷಗಳಲ್ಲಿ ಗಣಿತ ಶಾಸ್ತ್ರದಲ್ಲಿ ಮೊದಲನೆ ಸ್ಥಾನ) 3. ಕ್ರೀಡೆ, (Sports) ಮತ್ತು 4. ಕಲೆ, ಸಾಂಸ್ಕೃತಿಕ, ಸಂಗೀತ (Art, Cultural, Music) ಕ್ಷೇತ್ರಗಳಲ್ಲಿ ಅಸಾಧಾರಣಾ ಸಾಧನೆ ಮಾಡಿದ ಮಕ್ಕಳಿಗೆ ಒಂದು ಕೇತ್ರದಿಂದ 02 ಮಕ್ಕಳನ್ನು ಜಿಲ್ಲಾ ಸಮಿತಿಯಿಂದ ಆಯ್ಕೆ ಮಾಡಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪತ್ರ ಹಾಗೂ ರೂ. 10,000/-ಗಳ ನಗದು ಬಹುಮಾನ ನೀಡಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕೆಳಕಂಡ ಮಾನದಂಡ ನಿಗದಿ ಪಡಿಸಲಾಗಿದೆ.
1. 05 ರಿಂದ 18 ವರ್ಷ ಒಳಗಿನ ವಯೋಮಿತಿ ಮಕ್ಕಳು (ಜುಲೈ 31ರಂತೆ)
2. ವಯಸ್ಸಿನ ಬಗ್ಗೆ ಜನನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿದ ಪ್ರತಿ ಲಗತ್ತಿಸಬೇಕು.
3. ಪ್ರತಿಭೆಯನ್ನು ಹೊಂದಿರುವ ಬಗ್ಗೆ ಪ್ರಮುಖ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಪತ್ರಿಕೆ ತುಣುಕು/ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.
4. ಅಂತರ ರಾಷ್ಟ್ರೀಯ/ರಾಷ್ಟ್ರೀಯ/ರಾಜ್ಯ ಮಟ್ಟದಲ್ಲಿ ಭಾಗವಹಿಸಿರುವ ಪ್ರಶಸ್ತಿ ಪಡೆದಿರುವ ಬಗ್ಗೆ ಮಾಹಿತಿ ಲಗತ್ತಿಸಬೇಕು.
5. ಅರ್ಜಿದಾರರು, ಕರ್ನಾಟಕ ರಾಜ್ಯದಲ್ಲಿ ನೆಲಸಿರತಕ್ಕದ್ದು.
6. ಸಾಧಿಸಿರುವ ಪ್ರತಿಭೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.
7. ಹಿಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಪುನ: ಪ್ರಶಸ್ತಿ ನೀಡಲು ಅವಕಾಶವಿರುವುದಿಲ್ಲ.
ಈ ಮೇಲಿನ ಮಾನದಂಡದನ್ವಯ ಆಸಕ್ತಿಯುಳ್ಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಮಕ್ಕಳು ಅರ್ಜಿಯನ್ನು ಪಡೆಯಲು ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಛೇರಿ, ಕೊಠಡಿ ಸಂಖ್ಯೆ:206, 2 ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂ ಸಂ: 080-29787445, ದೇವನಹಳ್ಳಿ ತಾಲೂಕು ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಕಛೇರಿ- 080-27682268, ದೊಡ್ಡಬಳ್ಳಾಪುರ ತಾಲೂಕು ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಕಛೇರಿ- 08027625228, ಹೊಸಕೋಟೆ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಕಛೇರಿ- 080-27931493,
ನೆಲಮಂಗಲ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಕಛೇರಿ- 080-27722177 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 23 ರ ಒಳಗೆ ಕಛೇರಿಗೆ ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.