ಬೆಂಗಳೂರು, ಜುಲೈ 27
ಕರ್ನಾಟಕ ಜಾನಪದ ಪರಿಷತ್ತುರವರು ಕೃಷಿ ಮೇಳ ಮೈದಾನದಲ್ಲಿ ಆಯೋಜಿಸಿದ್ದ “34ನೇ ರಾಜ್ಯಮಟ್ಟದ ಗಾಳಿಪಟ ಉತ್ಸವ ಮತ್ತು ಸ್ಪರ್ಧೆ-2024” ಅನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವರು 34 ವರ್ಷಗಳ ಹಿಂದೆ ಹೆಚ್.ಎಲ್.ನಾಗೇಗೌಡರು ಪ್ರಾರಂಭಿಸಿದ ನಮ್ಮ ಪರಂಪರೆಯ ಸಾಂಸ್ಕೃತಿಕ ಸ್ಪರ್ಧೆಯ ಪ್ರತೀಕವಾದ ಈ ಗಾಳಿಪಟ ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿಸಿದ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ತುರವರು ಮುಂದುವರೆಸಿಕೊoಡು ಹೋಗುತ್ತಿರುವುದು ಸಂತಸದ ವಿಷಯ. ಈ ವರ್ಷ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಆಚರಿಸುತ್ತಿರುವುದು ಮತ್ತೊಂದು ವಿಶೇಷ, ಈ ಗಾಳಿ ಪಟ ಉತ್ಸವವನ್ನು ಮುಂದುವರೆಸಿಕೊoಡು ಹೋಗುತ್ತಿರುವುದರಿಂದ ಯುವಜನತೆಗೆ ನಮ್ಮ ಸಾಂಸ್ಕೃತಿಕ ಪರಂಪರೆ ಅರಿವಾಗುತ್ತದೆ. ಇಂತಹ ಪ್ರಾಚೀನ ಕ್ರೀಡೆಗಳನ್ನು ಮುಂದುವರೆಸಿಕೊoಡು ಹೋಗುವುದು ನಮ್ಮೆಲ್ಲ ಆದ್ಯಕರ್ತವ್ಯವಾಗಿದೆ. ಈ ವರ್ಷದ ಉತ್ಸವದಲ್ಲಿ ಕೃಷಿ ಕುರಿತ ಸಂದೇಶಕ್ಕೆ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಗಾಳಿಪಟ ಉತ್ಸವದಲ್ಲಿ 36 ತಂಡಗಳು ಮತ್ತು 12 ರಾಜ್ಯ ಮಟ್ಟದ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ. ಸುರೇಶ, ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ, ಮತ್ತು ಮ್ಯಾನೇಜಿಂಗ್ ಟ್ರಸ್ಟಿಗಳಾದ ಆದಿತ್ಯ ನಂಜರಾಜ್‌ರವರು ಭಾಗವಹಿಸಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.