Views: 0
ದಾವಣಗೆರೆ.ಮೇ.27;
ಮುಂಗಾರು ಮಳೆಗಾಲದ ಅವಧಿಯಲ್ಲಿ ಜೂನ್.1 ರಿಂದ ಜುಲೈ 31 ರವರೆಗೆ ಚನ್ನಗಿರಿ ತಾಲ್ಲೂಕು ಶಾಂತಿಸಾಗರ ಜಲಾಶಯದಲ್ಲಿ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮಳೆಗಾಲದ ಅವಧಿಯಲ್ಲಿ ಮೀನುಗಳು ವಂಶಾಭಿವೃದ್ಧಿ ಚಟುವಟಿಕೆ ನಡೆಸುವುದರಿಂದ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಈ ನಿಷೇಧವನ್ನು ಉಲ್ಲಂಘಿಸಿ ಮೀನು ಹಿಡುವಳಿ ಮಾಡಿದ್ದಲ್ಲಿ ನಿಯಮಾನುಸಾರ ಕಾನೂನು ಜರುಗಿಸಲಾಗುವುದೆಂದು ಶಾಂತಿಸಾಗರದ ಮೀನುಮರಿಪಾಲನ ಕೇಂದ್ರದ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.