ಬೆಂಗಳೂರು ನಗರ ಜಿಲ್ಲೆ, ಮೇ.28: ಪ್ರಾದೇಶಿಕ ಸಾರಿಗೆ ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಪ್ರರ್ವತನಾ ಸಿಬ್ಬಂದಿಯವರು ವಾಹನಗಳ ತಪಾಸಣೆ ನಡೆಸಿದ ವೇಳೆ ವಾಹನಗಳ ನೋಂದಣಿ ದಾಖಲಾತಿ ಮತ್ತು ತೆರಿಗೆ ಪಾವತಿ ಪುರಾವೆಗಳನ್ನು ಹಾಜರುಪಡಿಸದ ವಾಹನ ಸಂಖ್ಯೆ KA03D7683, KA03D7684, KA03D691, KA03D7696, KA03D7701, KA03AB9867, KA52 3568, KA06B9188, KA05C4670 9 ವಾಹನಗಳ ವಿರುದ್ದ ಪ್ರಕರಣ ದಾಖಲಿಸಿ ವಾಹನಗಳನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯ್ದೆ 1957ರ ಕಲಂ 11-ಎ ಅಡಿಯಲ್ಲಿ ಮುಟ್ಟುಗೊಲು ಹಾಕಿಕೊಂಡು ಕಚೇರಿಯ ಆವರಣದಲ್ಲಿ ನಿಲುಗಡೆಗೊಳಿಸಲಾಗಿದ್ದು, ನೋಂದಾಯಿತ ಮಾಲೀಕರಿಗೆ ಅಥವಾ ವಾಹನಗಳ ಆರ್ಥಿಕ ನೆರವುದಾರರಿಗೆ ನೋಟಿಸ್ ನೀಡಲಾಗಿದ್ದು 15 ದಿನಗಳ ಒಳಗಾಗಿ ನೋಂದಾಯಿತ ಮಾಲೀಕರು ಅಥವಾ ವಾಹನಗಳ ಆರ್ಥಿಕ ನೆರವುದಾರರು ಕಚೇರಿಗೆ ಭೇಟಿ ನೀಡಿ ಪ್ರಕರಣಗಳನ್ನು ಮುಕ್ತಾಯಗೊಳಿಸಿ ವಾಹನಗಳನ್ನು ತಮ್ಮ ಸುಪರ್ದಿಗೆ ಪಡೆಯಲು ತಿಳಿಸಲಾಗಿದೆ. ತಪ್ಪಿದ್ದಲ್ಲಿ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಟ್ಟುಗೊಲು ಹಾಕಿಕೊಂಡಿರುವ ವಾಹನಗಳ ಮಾಲೀಕರು ಪ್ರಕರಣಗಳನ್ನು ಮುಕ್ತಾಯಗೊಳಿಸುವಂತೆ ಮನವಿ
Views: 0