ಸಂಚಾರ ನಿಯಮ ಪಾಲನೆ ಪ್ರಜ್ಞಾವಂತ ನಾಗರಿಕರ ಮೊದಲ ಕರ್ತವ್ಯ: ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ

0
45
Share this Article
0
(0)
Views: 0
ಧಾರವಾಡ ಮೇ.29:
 
ಪ್ರತಿ ವರ್ಷ ಅನೇಕ ವಾಹನ ಸವಾರರು ಹಾಗೂ ಸಂಚಾರಿಗಳು ಸಂಚಾರಿ ನಿಯಮ ಉಲಂಘನೆಯಿಂದ ಅಮಾಯಕವಾಗಿ ಜೀವ ಕಳೆದುಕೊಳ್ಳುತ್ತಾರೆ. ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರಜ್ಞಾವಂತ ನಾಗರಿಕರ ಮೊದಲ ಕರ್ತವ್ಯವಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಹೇಳಿದರು.
ಅವರು ಇಂದು (ಮೇ.29) ಸಂಜೆ ಧಾರವಾಡ ನಗರದ ಆಲೂರು ವೆಂಕಟರಾವ್ (ಜುಬ್ಲಿ ಸರ್ಕಲ್) ವೃತ್ತದಲ್ಲಿ ಸಂಚಾರ ನಿಯಮಗಳ ಸಾರ್ವಜನಿಕ ಜಾಗೃತಿ ಹಾಗೂ ದೋಷಪೂರಿತ ಸೈಲೆನ್ಸರ್ಗಳ ನಾಶಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ, ಮಾತನಾಡಿದರು.
ಸಂಚಾರ ನಿಯಮಗಳ ಕುರಿತು ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳ ಮೂಲಕ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೂ ವಾಹನ ಸವಾರರು ಸರಿಯಾಗಿ ಹೆಲ್ಮೆಟ್ ಧರಿಸುವುದಿಲ್ಲ, ಸೀಟ್ ಬೆಲ್ಟ್ ಧರಿಸುವುದಿಲ್ಲ, ಸಿಗ್ನಲ್ ಜಂಪ್ ಮಾಡುವುದು, ಸಂಚಾರಿ ಸಾಮಾನ್ಯ ನಿಯಮಗಳನ್ನು ಸಹ ಪಾಲಿಸುವುದಿಲ್ಲ. ಇದರಿಂದಾಗಿ ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಅವಳಿ ನಗರದಲ್ಲಿ ವಾಹನ ದಟ್ಟಣೆ ಮಾರ್ಗಗಳನ್ನು ಗುರುತಿಸಲಾಗಿದೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಪರಿಶೀಲಿಸಲಾಗುತ್ತಿದೆ. ಪಾಲಕರು 18 ವರ್ಷ ದೊಳಗಿನ ಮಕ್ಕಳಿಗೆ ವಾಹನ ಚಾಲನೆಗೆ ನೀಡಬಾರದು. ಇದು ಅಪರಾಧವಾಗಿದ್ದು, ಅಂತ ಪಾಲಕರಿಗೆ ರೂ. 25 ಸಾವಿರ ದಂಡ ಮತ್ತು ಜೈಲುವಾಸದ ಶಿಕ್ಷೆ ಇದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಸುಗಮ ಮತ್ತು ಸುಸೂತ್ರ ಸಂಚಾರ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಟಾರ್ ಸೈಕಲ್ ಸವಾರರು ತಮ್ಮ ವಾಹನಗಳಿಗೆ ಅನಧೀಕೃತವಾಗಿ ದೋಷಪೂರಿತ ಕರ್ಕಶ ಶಬ್ದವನ್ನು ಉಂಟು ಮಾಡುವ ಸೈಲೆನ್ಸರ್ಗಳನ್ನು ಹಾಕಿಕೊಂಡು, ಸಂಚರಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿ ಜಾಗೃತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
 
ಮಾರ್ಚ್ 1, 2024 ರಿಂದ ಮೇ 29, 2024 ರವರೆಗಿನ ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಚರಣೆ ನಡೆಸಿ ಒಟ್ಟು 240 ಸೈಲೇನ್ಸರ್ಗಳನ್ನು ವಶಪರಿಸಿಕೊಳ್ಳಲಾಗಿದೆ. ಮತ್ತು ಇವುಗಳ ಮೌಲ್ಯ ಸುಮಾರು ರೂ. 12 ಲಕ್ಷಗಳಾಗಿದೆ. ದೋಷಪೂರಿತ ಕರ್ಕಶ ಸೈಲೇನ್ಸರ್ಗಳನ್ನು ವಶಪಡಿಸಿಕೊಂಡು ವಾಹನ ಸವಾರರಿಗೆ ತಲಾ 500 ರೂ ದಂಡ ವಿಧಿಸಿ, ವಾಹನಗಳನ್ನು ಬಿಡುಗಡೆ ಮಾಡಲಾಗಿದೆ.
 
ಮುಂದಿನ ದಿನಗಳಲ್ಲಿ ಯಾವುದಾದರೂ ದೋಷಪೂರಿತ ಸೈಲೇನ್ಸರ್ ಸೈಕಲ್ ಮೋಟಾರ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಮೋಟಾರ್ ಸೈಕಲ್ ನಂಬರ ಸಮೇತ ಫೆÇೀಟೋ, ವಿಡಿಯೋ ಮೂಲಕ ಸಂಚಾರ ಪೆÇಲೀಸ್ ಠಾಣೆಯ ದೂರವಾಣಿ ಸಂಖ್ಯೆ: 9480802037 ಗೆ ವಾಟ್ಸಪ್ ಮೂಲಕ ಕಳುಹಿಸಬಹುದು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಈ ಸಂದರ್ಭದಲ್ಲಿ ತಿಳಿಸಿದರು.
 
3 ವರ್ಷಗಳ ರಸ್ತೆ ಅಪಘಾತದ ವಿವರ:
 
2022 ರ ರಸ್ತೆ ಅಪಘಾತದಲ್ಲಿ 97 ಪುರುಷರು, 14 ಮಹಿಳೆಯರು ಸೇರಿ ಒಟ್ಟು 111 ಜನ ಮರಣ ಹೊಂದಿದ್ದು, 419 ಪುರುಷರು, 87 ಮಹಿಳೆಯರು ಸೇರಿ ಒಟ್ಟು 506 ಜನ ತೀವ್ರ ಗಾಯಗೊಂಡಿದ್ದಾರೆ. 2023 ರ ರಸ್ತೆ ಅಪಘಾತದಲ್ಲಿ 100 ಪುರುಷರು, 17 ಮಹಿಳೆಯರು ಸೇರಿ ಒಟ್ಟು 117 ಜನ ಮರಣ ಹೊಂದಿದ್ದು, 454 ಪುರುಷರು, 105 ಮಹಿಳೆಯರು ಸೇರಿ ಒಟ್ಟು 559 ಜನ ತೀವ್ರ ಗಾಯಗೊಂಡಿದ್ದಾರೆ. 2024 ರ ಜನವರಿಯಿಂದ ಇಂದಿನ ವರೆಗೆ ರಸ್ತೆ ಅಪಘಾತದಲ್ಲಿ 30 ಪುರುಷರು, 4 ಮಹಿಳೆಯರು ಸೇರಿ ಒಟ್ಟು 34 ಜನ ಮರಣ ಹೊಂದಿದ್ದು, 113 ಪುರುಷರು, 15 ಮಹಿಳೆಯರು ಸೇರಿ ಒಟ್ಟು 128 ಜನ ತೀವ್ರ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು.
 
3 ವರ್ಷದ ಎಂ.ವಿ ಆಯಾಕ್ಟ್ ಮತ್ತು ನ್ಯಾಯಾಲದಿಂದ ಸಂಚಾರ ನಿಯಮ ಉಲ್ಲಘನೆ ಅಡಿಯಲ್ಲಿ ವಸೂಲಿ ಮಾಡಲಾದ ದಂಡದ ವಿವರ:
 
2022 ರಲ್ಲಿ ಸಂಚಾರ ನಿಯಮ ಉಲ್ಲಘಿಸಿದ 1,40,416 ಅಪರಾಧಗಳು ದಾಖಲಾಗಿವೆ. 66,167,100 ರೂ.ಗಳ ದಂಡವನ್ನು ಸ್ಥಳದಲ್ಲಿಯೇ ವಸೂಲಿ ಮಾಡಲಾಗಿದ್ದು, 1,28,64,100 ರೂ.ಗಳ ದಂಡವನ್ನು ನ್ಯಾಯಾಲಯದಿಂದ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ 7,90,31,200 ರೂ.ಗಳ ದಂಡ ವಸೂಲಿ ಮಾಡಲಾಗಿದೆ. 2023 ರಲ್ಲಿ ಸಂಚಾರ ನಿಯಮ ಉಲ್ಲಘಿಸಿದ 1,91,883 ಅಪರಾಧಗಳು ದಾಖಲಾಗಿವೆ. 7,52,65,125 ರೂ.ಗಳ ದಂಡವನ್ನು ಸ್ಥಳದಲ್ಲಿಯೇ ವಸೂಲಿ ಮಾಡಲಾಗಿದ್ದು, 1,83,61,000 ರೂ.ಗಳ ದಂಡವನ್ನು ನ್ಯಾಯಾಲಯದಿಂದ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ 9,36,26,125 ರೂ.ಗಳ ದಂಡ ವಸೂಲಿ ಮಾಡಲಾಗಿದೆ. 2024 ರ ಜನವರಿಯಿಂದ ಇಂದಿನ ವರೆಗೆ ಸಂಚಾರ ನಿಯಮ ಉಲ್ಲಘಿಸಿದ 54,468 ಅಪರಾಧಗಳು ದಾಖಲಾಗಿವೆ. 2,60,54,400 ರೂ.ಗಳ ದಂಡವನ್ನು ಸ್ಥಳದಲ್ಲಿಯೇ ವಸೂಲಿ ಮಾಡಲಾಗಿದ್ದು, 69,51,500 ರೂ.ಗಳ ದಂಡವನ್ನು ನ್ಯಾಯಾಲಯದಿಂದ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ 3,30,05,900 ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
 
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತರಾದ ಕುಶಲ್ ಚೌಕ್ಸೆ, ರವೀಶ ಸಿ.ಆರ್., ಸಂಚಾರ ಸಹಾಯಕ ಪೊಲೀಸ್
ಆಯುಕ್ತ ವಿನೋದ ಮುಕ್ತೆದಾರ, ಸಂಚಾರಿ ಪೊಲೀಸ್ ಇನಸ್ಪೆಕ್ಟರ್ ಶ್ರೀನಿವಾಸ ಮೇಟಿ, ಪಿಎಸ್ಐ ನಾರಾಯಣ ಪಟವರ್ಧನ, ಶೋಭಾ ಕಂಬಿ, ಸೇರಿದಂತೆ ಇತರ ಪೊಲೀಸ್
ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯಮಕಿಂಕರ ರೂಪಕದ ಮೂಲಕ ಸಂಚಾರ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
 
 
 
 
 
 
 
 
 
 
 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here