ಪಾಲಿಕೆಯ ಶಾಲಾ/ಕಾಲೇಜುಗಳನ್ನು ಶೈಕ್ಷಣಿಕವಾಗಿ ಉತ್ತಮಗೊಳಿಸುವ ಹಾಗೂ ಇತರೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಆಸಕ್ತ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳು ಪಸ್ತಾವನೆ ಸಲ್ಲಿಸುವ ಕುರಿತು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶಿಶುವಿಹಾರ-93, ಪ್ರಾಥಮಿಕ-16, ಪ್ರೌಢಶಾಲೆ-33, ಪದವಿ ಪೂರ್ವ ಕಾಲೇಜು-18, ಪ್ರಥಮ ದರ್ಜೆ ಕಾಲೇಜು-04 ಹಾಗೂ ಸ್ನಾತಕೋತ್ತರ ಕೇಂದ್ರ-2 ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು 25,500ಕ್ಕೂ ಹೆಚ್ಚು ಬಡ ಹಾಗೂ ಎಲ್ಲಾ ವರ್ಗದ ಮಕ್ಕಳು ಉಚಿತ ವಿದ್ಯಾಭ್ಯಾಸವನ್ನು ಪಡೆಯುತ್ತಿರುತ್ತದೆ.
ಎಲ್ಲಾ ವಿದ್ಯಾರ್ಥಿಗಳಿಗೂ ಪಾಲಿಕೆ ವತಿಯಿಂದ ಉಚಿತ ಸಮವಸ್ತ್ರ, ನೋಟ್ ಪುಸ್ತಕ, ಪಠ್ಯ ಪುಸ್ತಕ, ಬ್ಯಾಗ್, ಶೂ ಮತ್ತು ಕಾಲು ಚೀಲ ಬಿಸಿಯೂಟ ಹಾಗೂ ಇತರೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಾಲಿಕೆಯ ವತಿಯಿಂದ ಉಚಿತವಾಗಿ ಒದಗಿಸಲಾಗುತ್ತಿರುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ/ಕಾಲೇಜುಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಸಂಬಂಧ ಹಲವಾರು ಸಂಘ-ಸಂಸ್ಥೆಗಳು ಸಿ.ಎಸ್.ಆರ್ ಅಡಿಯಲ್ಲಿ ಅನುದಾನವನ್ನು ಒದಗಿಸಲು ಮುಂದೆ ಬರುತ್ತಿದ್ದು, ಮೂಲಭೂತ ಸೌಕರ್ಯಗಳನ್ನು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಆಸಕ್ತ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳು ಹಾಗೂ ಸಾರ್ವಜನಿಕರಿಂದ 03 ಮಾದರಿಯಲ್ಲಿ ಅನುದಾನವನ್ನು ಒದಗಿಸಲು ಹಾಗೂ ಪಾಲಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಾಮಾಜಿಕ ಸೇವೆಯನ್ನು ಒದಗಿಸಲು ಮುಖ್ಯ ಆಯುಕ್ತರು ಸೂತ್ತೋಲೆಯನ್ನು ಹೊರಡಿಸಿರುತ್ತಾರೆ.
ಸದರಿ ಸುತ್ತೋಲೆಯಂತೆ ಪಾಲಿಕೆಯ ಶಾಲಾ/ಕಾಲೇಜುಗಳನ್ನು ಶೈಕ್ಷಣಿಕವಾಗಿ ಉತ್ತಮಗೊಳಿಸುವ ಹಾಗೂ ಇತರೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಆಸಕ್ತ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳು ಹಾಗೂ ಸಾರ್ವಜನಿಕರು *ಹಿರಿಯ ಸಹಾಯಕ ನಿರ್ದೇಶಕರು(ಶಿಕ್ಷಣ) ಅನೆಕ್ಸ್-03 1ನೇ ಮಹಡಿ, ಬಿಬಿಎಂಪಿ ಕೇಂದ್ರ ಕಛೇರಿ, (PH:-9480180152) ಇ-ಮೇಲ್ eoeducation@yahoo.in ಅಥವಾ specialcommissionereducation@gmail.com R ಪ್ರಸ್ತಾವನೆಯನ್ನು ಸಲ್ಲಿಸಿ ಸಾಮಾಜಿಕ ಸೇವೆಯನ್ನು ಒದಗಿಸಬಹುದಾಗಿರುತ್ತದೆ* ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಣೆಯ ವಿಶೇಷ ಆಯುಕ್ತರಾದ *ಪ್ರೀತಿ ಗೆಹ್ಲೋಟ್* ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
*ಹೆಚ್ಚಿನ ಮಾಹಿತಿಗಾಗಿ ಪತ್ರಿಕಾ ಪ್ರಕಟಣೆ ಹಾಗೂ ಮುಖ್ಯ ಆಯುಕ್ತರು ಹೊರಡಿಸಿರುವ ಸುತ್ತೋಲೆ ಪ್ರತಿಯನ್ನು ಲಗತ್ತಿಸಲಾಗಿದೆ.*