ರಾಯಚೂರು,ಆ.08
ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ 2024-25ನೇ ಸಾಲಿಗೆ ಮಂಜೂರಾಗಿ ಖಾಲಿ ಇರುವ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ; ಸ್ತ್ರೀ ರೋಗ ತಜ್ಞರು-03 ಹುದ್ದೆಗಳು, ಮಕ್ಕಳ ತಜ್ಞರು-02 ಹುದ್ದೆಗಳು, ಎಂ.ಬಿ.ಬಿ.ಎಸ್. ಎಸ್.ಎನ್.ಸಿ.ಯು. ವಿಭಾಗ-03 ಹುದ್ದೆಗಳು, ಎಂ.ಬಿ.ಬಿ.ಎಸ್. ಹೆಚ್.ಡಿ.ಯು. ವಿಭಾಗ-04, ಎಂ.ಬಿ.ಬಿ.ಎಸ್. ಐ.ಸಿ.ಯು./ಹೆಚ್.ಡಿ.ಯು.-11 ಹುದ್ದೆಗಳು, ಎಂ.ಬಿ.ಬಿ.ಎಸ್. ಎನ್.ಯು.ಹೆಚ್.ಎಂ.-01 ಹುದ್ದೆ, ಎಂ.ಬಿ.ಬಿ.ಎಸ್. ನಮ್ಮ ಕ್ಲೀನಿಕ್-04 ಹುದ್ದೆಗಳು, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕರು-01 ಹುದ್ದೆ, ತಾಲೂಕಾ ಆಶಾ ಮೇಲ್ವಿಚಾರಕರು-01 ಹುದ್ದೆ, ಶುಶ್ರೂಷಕರು-32 ಹುದ್ದೆಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ-03 ಹುದ್ದೆಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು-10 ಹುದ್ದೆಗಳು, ತಾಲೂಕ ವಿ.ಬಿ.ಡಿ. ತಾಂತ್ರಿಕ ಮೇಲ್ವಿಚಾರಕರು-01.
ಈ ಗುತ್ತಿಗೆ ಆಧಾರದ ನೇಮಕಾತಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಗುತ್ತಿಗೆ ಆಧಾರದ ಮೇಲೆ ಮೇರಿಟ್ ಕಮ್ ರೋಷ್ಟರ್ ಆಧಾರದ ಮೇಲೆ ಮಾಡಿಕೊಳ್ಳಲಾಗುವುದು, ಆಸಕ್ತರು ಇದೇ 2024ರ ಆಗಸ್ಟ್ 29ರೊಳಗಾಗಿ ವೆಬ್‌ಸೈಟ್: https://raichur.nic.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಗುತ್ತಿಗೆ ಆಧಾರದ ನೇಮಕಾತಿಯು ಎನ್.ಹೆಚ್.ಎಂ. ಅಥವಾ ಎನ್.ಯು.ಹೆಚ್.ಎಂ. ನಿಯಮಾವಳಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯದ ಜಿಲ್ಲಾ ಯೋಜನಾ ನಿರ್ವಹಣಾ ಘಟಕಕ್ಕೆ ಕಚೇರಿಯ ಸಮಯದಲ್ಲಿ ಭೇಟಿ ನೀಡಿ, ಮಾಹಿತಿ ಪಡೆಯಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.