ಬಳ್ಳಾರಿ,ಜೂ.06:
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣದ ಸಂಸ್ಥೆಗಳ ಸಂಘದ ವಸತಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ಸತೀಶ್ ಅವರು ತಿಳಿಸಿದ್ದಾರೆ.
ಕನ್ನಡ ವಿಷಯ-8, ಇಂಗ್ಲೀಷ್ ವಿಷಯ-7, ಹಿಂದಿ-5, ಗಣಿತ-9, ವಿಜ್ಞಾನ-7, ಸಮಾಜ ವಿಜ್ಞಾನ-2, ದೈಹಿಕ ಶಿಕ್ಷಕರು-7, ಗಣಕಯಂತ್ರ ಶಿಕ್ಷಕರು-7, ಒಟ್ಟು 52 ಅತಿಥಿ ಶಿಕ್ಷಕರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ (B.A., B.ED., B.SC, B.ED, TET, BPED, BCA) ಬಿ.ಎ, ಬಿ.ಇಡಿ., ಬಿ.ಎಸ್‍ಸಿ ಬಿ.ಇಡಿ., ಟಿ.ಇ.ಟಿ., ಬಿ.ಪಿ.ಇಡಿ, ಬಿ.ಎಸ್.ಸಿ ಕಂಪ್ಯೂಟರ್, ಬಿ.ಸಿ.ಎ ಅರ್ಹತೆ ಹೊಂದಿರುವ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಜೂ.15 ರೊಳಗಾಗಿ ನಗರದ ವಾಲ್ಮೀಕಿ ಭವನದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ.7760167576, 9844969858, 8310558003, 9886297280 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.