ಬೆಂಗಳೂರು, ಸೆಪ್ಟೆಂಬರ್ 10
ಆಕಾಶವಾಣಿ ಬೆಂಗಳೂರು ವತಿಯಿಂದ ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್) ಮತ್ತು ಶಾರದಾ ವಿಕಾಸ ಟ್ರಸ್ಟ್,ಬೆಂಗಳೂರು ಸಹಯೋಗದಲ್ಲಿ ‘ಸೈಬರ್ ಜಾಗೃತಿ’ ವಿಚಾರ ಸಂಕಿರಣ ಸೆಪ್ಟೆಂಬರ್ 12ರಂದು ಬನ್ನೇರುಘಟ್ಟ ರಸ್ತೆಯ ಬಸವನಪುರದ ರಾಕ್‍ವುಡ್ ಗ್ರೀನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯಲಿದೆ.
ಅಂತರ್ಜಾಲ ಮಾಧ್ಯಮದ ಮೂಲಕ ನಡೆಯುವ ಅಪರಾಧಗಳು ಮತ್ತು ಅವುಗಳನ್ನು ಹತ್ತಿಕ್ಕುವ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮ ಅಂದು ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಕಾಶವಾಣಿ ಬೆಂಗಳೂರಿನ ಸಹಾಯಕ ನಿರ್ದೇಶಕ ಡಾ.ಎ.ಎಸ್. ಶಂಕರನಾರಾಯಣ, ಶಾರದಾ ವಿಕಾಸ ಟ್ರಸ್ಟ್ ಅಧ್ಯಕ್ಷ ಡಿ.ವಿ. ವೆಂಕಟಾಚಲಪತಿ ಮತ್ತು ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಷಯ ಪರಿಣತರು: ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ. ವೆಂಕಟೇಶ ಮೂರ್ತಿ, ಬೆಂಗಳೂರು ಉತ್ತರ ಸೆನ್ (ಸೈಬರ್, ಎಕಾನಿಕಲ್ ಅಫೆನ್ಸಸ್ ಮತ್ತು ನಾರ್ಕೋಟಿಕ್ಸ್) ಪೆÇಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವರತ್ನ ಎಸ್. ಮತ್ತು ಆನ್ಜೆನ್ ಟೆಕ್ನಾಲಜೀಸ್‍ನ ಆಡಳಿತ ನಿರ್ದೇಶಕ ತರುಣ್ ಕೃಷ್ಣಮೂರ್ತಿ ಅವರು ಸೈಬರ್ ಅಪರಾಧ ಮತ್ತು ತಡೆ ಸಂಬಂಧ ವಿವಿಧ ಆಯಾಮಗಳು ಮತ್ತು ಪರಿಹಾರಗಳ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಪ್ಲೋರಿನ್ ರೋಚ್ (ಮೊಬೈಲ್: 9980184886) ಅವರನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಆಕಾಶವಾಣಿ ಪ್ರಕಟಣೆ ತಿಳಿಸಿದೆ.