ವಿಜಯಪುರ:
ಆಯುಷ್ಮಾನ್ ಭಾರತ್ ಯೋಜನೆ ಒಂದು ದೊಡ್ಡ ವಂಚನೆ. ನೂರಾರು ನಕಲಿ ರೋಗಿಗಳನ್ನು ತೋರಿಸುವ ಮೂಲಕ ಬಿಜೆಪಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದೆ. ಆಮ್ ಆದ್ಮಿ ಪಕ್ಷದ ಆಡಳಿತದ ದೆಹಲಿಯಲ್ಲಿ ಈಗಾಗಲೇ ಅರವಿಂದ್ ಕೇಜ್ರಿವಾಲ್ ರವರು ಆರೋಗ್ಯಕ್ರಾಂತಿಯನ್ನೇ ಮಾಡಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಲಕ್ಷಾಂತರ ರೋಗಿಗಳಿಗೆ 50 ಲಕ್ಷ ರೂಪಾಯಿಗಳವರೆಗಿನ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಿದ್ದಾರೆ. ದೇಶದ ಪ್ರಧಾನಿ ಸುಳ್ಳು ಸುಳ್ಳು ಆರೋಪ ಮಾಡುವ ಮೂಲಕ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆರೋಪಿಸಿದರು.
ಆಯುಷ್ಮಾನ್ ಭಾರತ್ ಯೋಜನೆ ಸಂಪೂರ್ಣ ಫ್ಲಾಪ್ ಸ್ಕೀಮ್ ಆಗಿದೆ. ಇದರಲ್ಲಿ, 5 ಲಕ್ಷ ಮಿತಿಯವರೆಗೆ ಮಾತ್ರ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯನ್ನು ದಾಖಲಿಸಿದರೆ ಮಾತ್ರ ಔಷಧಿಯೂ ಉಚಿತವಾಗಿರುತ್ತದೆ. ಒಪಿಡಿ ಸೌಲಭ್ಯವಿಲ್ಲ. ಇದು ಎಷ್ಟು ಕೆಟ್ಟ ಯೋಜನೆಯೆಂದರೆ, ಇಂದು ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಜನರು ಉತ್ತರ ಪ್ರದೇಶ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಜನತೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಏಕೆಂದರೆ ದೆಹಲಿ ಸರ್ಕಾರವು ಎಲ್ಲಾ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತದೆ. ಎಲ್ಲಾ ಪರೀಕ್ಷೆಗಳು ಮತ್ತು ಔಷಧಿಗಳು ಉಚಿತ. ಚಿಕಿತ್ಸೆಗೆ 5 ಲಕ್ಷ ಅಥವಾ 50 ಲಕ್ಷ ವೆಚ್ಚವಾಗಲಿ, ಎಲ್ಲವೂ ಉಚಿತವಾಗಿ ಸಿಗುತ್ತಿದೆ.
ನಿಮ್ಮ ಮನೆಯಲ್ಲಿ ಲ್ಯಾಂಡ್ ಲೈನ್ ಫೋನ್ ಅಥವಾ ರೆಫ್ರಿಜರೇಟರ್ ಇದ್ದರೆ, ನೀವು ಆಯುಷ್ಮಾನ್ ಭಾರತ್ ಯೋಜನೆಯಿಂದ ವಂಚಿತರಾಗುತ್ತೀರಿ. ಇದರ ಅಡಿಯಲ್ಲಿ, ವಾರ್ಷಿಕ ಆದಾಯ 1.8 ಲಕ್ಷಕ್ಕಿಂತ ಕಡಿಮೆ ಇರುವವರು ಮಾತ್ರ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ದೆಹಲಿ ಸರ್ಕಾರದ ಯೋಜನೆಯಡಿ ಅಂತಹ ಯಾವುದೇ ನಿರ್ಬಂಧಗಳಿಲ್ಲ. ಆಯುಷ್ಮಾನ್ ಭಾರತ್ ಯೋಜನೆ ಅಥವಾ ದೆಹಲಿ ಸರ್ಕಾರದ ಆರೋಗ್ಯ ಯೋಜನೆ ದೆಹಲಿಯಲ್ಲಿ ಕೇವಲ ಒಂದು ಯೋಜನೆಯನ್ನು ಮಾತ್ರ ನಡೆಸಬಹುದು ಎಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. ವಂಚನೆ ಇರುವ ಅಥವಾ 99% ದೆಹಲಿ ಜನರು ಚಿಕಿತ್ಸೆಯಿಂದ ವಂಚಿತರಾಗುವಂತಹ ಪರಿಸ್ಥಿತಿ ಇರುವ ಯೋಜನೆಯನ್ನು ದೆಹಲಿ ಸರ್ಕಾರ ಏಕೆ ಹೊಂದಿರಬೇಕು ಎಂದು ಭೋಗೇಶ್ ಸೋಲಾಪುರ್ ಪ್ರಶ್ನಿಸಿದರು.
ನಿಮ್ಮ ಸಂಬಳ ತಿಂಗಳಿಗೆ 10,000ಕ್ಕಿಂತಲೂ ಹೆಚ್ಚು ಆಗಿದ್ದರೆ, ನೀವು ಫ್ರಿಡ್ಜ್ ಹೊಂದಿದ್ದರೆ, ನೀವು ಬೈಕ್ ಅಥವಾ ಕಾರು ಹೊಂದಿದ್ದರೆ ನಿಮಗೆ ಈ ಆಯುಶ್ಮಾನ್ ಯೋಜನೆಯ ಪ್ರಯೋಜನ ಸಿಗುವುದಿಲ್ಲ.ಈ ಯೋಜನೆಯ ಹೆಸರಿನಲ್ಲಿ ತಾವು ನಕಲಿ ರೋಗಿಗಳೆಂದು ತೋರಿಸಿಕೊಂಡು ದೊಡ್ಡ ಹಗರಣ ಮಾಡುತ್ತಿರುವ ಬಿಜೆಪಿಯವರಿಗೆ ಮಾತ್ರ ಅದರ ಲಾಭವಾಗುತ್ತಿದೆ. ಇದು ನಾವಲ್ಲ , ‘ಆಯುಷ್ಮಾನ್ ಭಾರತ್ ಯೋಜನೆ’ಯಲ್ಲಿ ಹಲವು ಹಗರಣಗಳಿವೆ ಎಂದು ಸಿಎಜಿ ವರದಿ ಹೇಳುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ, ರೋಗಿಯನ್ನು ಆಸ್ಪತ್ರೆಗೆ ದಾಖಲಾದಾಗ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ ಆದರೆ ದೆಹಲಿ ಸರ್ಕಾರದ ಆಸ್ಪತ್ರೆಗಳಲ್ಲಿ ದಾಖಲಾದ್ರು ಸರಿ ಆಗಲಿಲ್ಲ ಅಂದ್ರು ಸರಿ ಯಾವುದೇ ತರಹ ಷರತ್ತುಗಳಿಲ್ಲ. 5 ರೂಪಾಯಿ ಮೌಲ್ಯದ ಔಷಧಗಳಿಂದ ಹಿಡಿದು 1 ಕೋಟಿ ರೂಪಾಯಿ ಮೌಲ್ಯದ ಆಪರೇಷನ್‌ವರೆಗೆ ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲವೂ ಉಚಿತವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ ಆದರೆ ದೆಹಲಿ ಸರ್ಕಾರದ ವ್ಯವಸ್ಥೆಯಲ್ಲಿ ಅಂತಹ ಯಾವುದೇ ಒತ್ತಾಯವಿಲ್ಲ.
ಉಧಾಹರಣೆಗೆ: ಕಾರ್ಮಿಕರ ಕಾಲಿಗೆ ಇಟ್ಟಿಗೆ ಬಿದ್ದರೆ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯುವಂತಿಲ್ಲ. ಆದರೆ ಆತ ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗೆ ಹೋಗಿ ಯಾವಾಗ ಬೇಕಾದರೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
ಆರೋಗ್ಯವು ಈ ದೇಶದ ಪ್ರಮುಖ ವಿಷಯವಾಗಿದೆ ಮತ್ತು ಆಮ್ ಆದ್ಮಿ ಪಾರ್ಟಿ ಅದನ್ನು ಸೂಕ್ಷ್ಮವಾಗಿ ಪರಿಗಣಿಸುತ್ತದೆ. ಅದಕ್ಕಾಗಿಯೇ ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರ ದೆಹಲಿಯಲ್ಲಿ ಆರೋಗ್ಯಕ್ಕಾಗಿ ಒಟ್ಟು ಬಜೆಟ್‌ನ 16% ಅನ್ನು ಖರ್ಚು ಮಾಡುತ್ತದೆ. ಮೋದಿ ಅವರು ‘ಆಯುಷ್ಮಾನ್ ಭಾರತ್ ಯೋಜನೆ’ಯ ಹಗರಣವನ್ನು ಬಿಟ್ಟು ದೆಹಲಿಯ ಆರೋಗ್ಯ ನೀತಿಯನ್ನು ಅಧ್ಯಯನ ಮಾಡಿ ಇಡೀ ದೇಶದಲ್ಲಿ ಜಾರಿಗೆ ತರಬೇಕು ಎಂದು ಪ್ರಧಾನಿಗೆ ಭೋಗೇಶ್ ಸೋಲಾಪುರ್ ಕರೆ ಕೊಟ್ಟರು.
ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಹೆಂತಹ ಆರೋಗ್ಯ ಮಾದರಿಯನ್ನು ರಚಿಸಿದ್ದಾರೆ ಅಂದರೆ ಕೋಫಿ ಅನ್ನನ್ ಅವರು ಕೂಡ ಪ್ರಶಂಸಿಸಬೇಕಾಯಿತು. ಅದೇ ಸಮಯದಲ್ಲಿ ಸಿಎಜಿಯಿಂದ ತನಿಖೆಗೆ ಒಳಪಟ್ಟ ‘ಆಯುಷ್ಮಾನ್ ಭಾರತ್ ಯೋಜನೆ’ ಹೆಸರಿನಲ್ಲಿ ಇಂತಹ ಹಗರಣವನ್ನು ಮೋದಿ ಅವರು ದೇಶಕ್ಕೆ ಪ್ರಸ್ತುತಪಡಿಸಲು ಹೊರಟಿದ್ದಾರೆ.
ಮೃತ ಹಾಗೂ ನಕಲಿ ರೋಗಿಗಳ ಹೆಸರಲ್ಲಿ ಬಿಜೆಪಿ ಕಾರ್ಯಕರ್ತರು ಹೇಗೆ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂಬುದು ಸಿಎಜಿ ವರದಿಯಿಂದ ಬಹಿರಂಗವಾಗಿದೆ. ಜನರ ಆರೋಗ್ಯದ ವಿಚಾರದಲ್ಲಿ ಪ್ರಧಾನಿ ಮೋದಿ ತಪ್ಪು ಮಾತನಾಡುವುದು ಸರಿಯಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ದೆಹಲಿ ಸರ್ಕಾರದ ಯೋಜನೆಯಡಿ, ದೆಹಲಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಎಷ್ಟೇ ಖರ್ಚಾದರೂ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ಪಡೆಯುತ್ತಾನೆ. 5 ರೂಪಾಯಿ ವೆಚ್ಚದ ಮಾತ್ರೆಯಿಂದ ಹಿಡಿದು 1 ಕೋಟಿ ರೂಪಾಯಿ ಮೌಲ್ಯದ ಚಿಕಿತ್ಸೆವರೆಗೆ, ದೆಹಲಿ ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಗೆ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತದೆ.
ಬಿಜೆಪಿ ಆಡಳಿತ ಇರುವ ಮಧ್ಯಪ್ರದೇಶದಲ್ಲಿ ಆಯುಶ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಶವಗಳ ಚಿಕಿತ್ಸೆ ನಡೀತಾ ಇತ್ತು ಎಂದು ಸಿಎಜಿ ವರದಿ ಮಾಡಿದೆ.
ಅದೇ ರೀತಿಯಲ್ಲಿ, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ 5 ಗಂಟೆವರೆಗೂ ರೋಗಿಯನ್ನು ಸಾಯಲು ಬಿಟ್ಟು, ಆಯುಶ್ಮಾನ್ ಭಾರತ್ ಯೋಜನೆಯಲ್ಲಿ ಸಂಬಂಧಿಗರ ಕೈಯಲ್ಲಿ ರೂ.30,000 ಬಿಲ್ ಇಟ್ಟರು.ಬಿಜೆಪಿ ಆಡಳಿತ ಇರುವ ಉತ್ತರಾಖಂಡ್ ದಲ್ಲಿ ಆಯುಶ್ಮಾನ್ ಯೋಜನೆ ಅಡಿಯಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಆಡಿಟ್ ವರದಿ ಹೇಳಿದೆ.
ಆಯುಷ್ಮಾನ್ ಭಾರತ್ ಯೋಜನೆಯಿಂದ ಜನರು ಪ್ರಯೋಜನ ಪಡೆದಿದ್ದಾರೆಯೇ? ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಹಲವು ಅಕ್ರಮಗಳನ್ನು ಸಿಎಜಿ ತನಿಖೆಯಲ್ಲಿ ಪತ್ತೆ ಮಾಡಿದೆ. ಇಲ್ಲಿಯವರೆಗೆ, ಆಯುಷ್ಮಾನ್ ಭಾರತ್ ಯೋಜನೆ ಜಾರಿಯಲ್ಲಿರುವ ರಾಜ್ಯಗಳಲ್ಲಿ, ಆಯುಷ್ಮಾನ್ ಭಾರತ್ ಅಡಿಯಲ್ಲಿ ಚಿಕಿತ್ಸೆ ಪಡೆದ ಒಬ್ಬ ವ್ಯಕ್ತಿಯನ್ನು ತೋರಿಸಿ ಎಂದು ಸವಾಲು ಹಾಕಿದರು. ದೆಹಲಿ ಮಾದರಿಯನ್ನು ಅಧ್ಯಯನ ಮಾಡಲು ಮತ್ತು ಆಯುಷ್ಮಾನ್ ಭಾರತ್ ಯೋಜನೆಗೆ ಬದಲಾಗಿ ದೆಹಲಿ ಮಾದರಿಯನ್ನು ಭಾರತದಾದ್ಯಂತ ಜಾರಿಗೆ ತರಲು ಪ್ರಧಾನಿ ಅವರನ್ನು ಭೋಗೇಶ್ ಸೋಲಾಪುರ್ ವಿನಂತಿಸಿದ್ದಾರೆ.