ವಿಜಯಪುರ: ಹಲವಾರು ಮಹನೀಯರ ತ್ಯಾಗ, ಬಲಿದಾನ.ಹೋರಾಟದ ಪ್ರತಿಫಲವಾಗಿ ಅಖಂಡ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು.ಕನ್ನಡನಾಡು.ನುಡಿ.ನೆಲ.ಜಲ.ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇದೆ.ಆದರೆ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ಎಪ್ಪತ್ತು ವರ್ಷ ಗತಿಸಲು ಬಂದಿದ್ದರು ಪ್ರಾದೇಶಿಕ ಅಸಮಾನತೆಯಿಂದ ಉತ್ತರ ಕರ್ನಾಟಕ ಭಾಗ ಎಲ್ಲ ರಂಗದಲ್ಲೂ ಹಿಂದುಳಿದಿದ್ದು ದುರದೃಷ್ಟಕರ ಕಾರಣ ಆಳುವ ಸರ್ಕಾರ.ಜನಪ್ರತಿನಿಧಿಗಳು.
ಮತ್ತು ಅಧಿಕಾರಿ ವರ್ಗ ಉತ್ತರ ಕರ್ನಾಟಕದ ಸಮಗ್ರ ಅಭಿವದ್ಧಿಗೆ ಆದ್ಯತೆ ನೀಡಬೇಕು ಇಲ್ಲದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಅನಿವಾರ್ಯ ಎಂದು ನ್ಯಾಯವಾದಿ ದಾನೇಶ ಅವಟಿ ಆಗ್ರಹಿಸಿದರು.
ನಗರದ ಸಿಂದಗಿ ರಸ್ತೆಯ ಜೈ ಕರ್ನಾಟಕ ಕಾಲೋನಿಯ ಇಮ್ಮಡಿ ಪುಲಿಕೇಶಿ ಯುವಕ ಸಂಘಟನೆಯ ಮಿತ್ರರೊಂದಿಗೆ ತಾಯಿ ಶ್ರೀ ಭುವನೇಶ್ವರಿ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಜ್ಯೋತಿ ಪ್ರಜ್ವಲಿಸಿ ಮಾತನಾಡಿದ ಅವರು ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ.ಮಹಾಜನ್.ಸರೋಜನಿ ಮಹಿಷಿ. ಬರಗೂರು ವರದಿಯನoತಹ ಮಹತ್ವದ ವರದಿಗಳ ಶಿಫಾರಸುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರು ಅವಗಳನ್ನು ಇಸ್ಟೂ ದಿನ ರಾಜ್ಯಭಾರ ಮಾಡಿದ ಸರ್ಕಾರಗಳು. ಜನಪ್ರತಿನಿಧಿಗಳು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿಲ್ಲ.ಕೇವಲ ಉತ್ತರ ಕರ್ನಾಟಕ.ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಿ.ಕೆಲವೊಂದಿಷ್ಟು ಜಾತ್ರೆ ಉತ್ಸವ ಮಾಡಲು ಅನುದಾನ ನೋಡಿದರಷ್ಟೇ ಸಾಲದು. ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿ.ನಗರಗಳ ಜನರ ಜೀವನಮಟ್ಟ ಸುಧಾರಣೆಗೆ ಸರ್ವರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಆಳುವ ಸರ್ಕಾರಗಳು ಮಾಡಬೇಕು.ಇಲ್ಲದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶರಣು ಜೋಗುರ.ಮೋಹನಕುಮಾರ ಬಣ್ಣದ. ಪರಶುರಾಮ ರಜಪೂತ.ಡಾ.ಸಂಜು ಸಿಳ್ಳಿನ. ಡಾ.ವಾಸು ಢಗೆ.ಶಿವಲಿಂಗಯ್ಯ ತೆಗ್ಗಳ್ಳಿ.ಕರಣ ಸಿಂಗ ಹಜೇರಿ. ಶಿವು ಲೋಗಾವೀ.ಅಪ್ಪು
ಗುನ್ನಾಪುರ.ಪ್ರಭು ಮಠ. ರಾಚಯ್ಯ ಚೌಕಿಮಠ.ಶ್ರೀಶೈಲ ಯಾದವಾಡಮಠ.ನಾಗೇಶ ನಿರ್ವಾಣಶೆಟ್ಟಿ.ರುದ್ರು ಪಾಟೀಲ.ಸಂತೋಷ ನಾವಿ. ಮಹಾದೇವ ನಾವಿ. ಬಸವರಾಜ ಇಂಡಿ.ಹರೀಶ ಚೌಕಿಮಠ.ಗಿರೀಶ ಚೌಕಿಮಠ. ಅನೀಲ ಇಂಡಿ. ರಮೇಶ ಹಜೇರಿ. ಜೈ ಕರ್ನಾಟಕ ಕಾಲೋನಿ.ಅಲ್ಲಾಪುರ ಅಗಸಿ. ಸ್ಟೇಟ್ ಬ್ಯಾಂಕ್ ಕಾಲೋನಿ. ನಾಗೇಶ ಕಾಲೋನಿಯ ಅನೇಕ ಜನ ನಾಗರಿಕರು ಉಪಸ್ಥಿತರಿದ್ದರು