Views: 0
ಬೆಂಗಳೂರು, ಡಿಸೆಂಬರ್ 06:
ಉದ್ಯಮಶೀಲತೆ ಕೇವಲ ದೊಡ್ಡ ಉದ್ದಿಮೆದಾರರಿಗೆ ಮಾತ್ರ ಮೀಸಲಾಗಿಲ್ಲ ಬದಲಾಗಿ ಗ್ರಾಮೀಣ ಯುವಕರು ಮತ್ತು ಮಹಿಳೆಯರು ಸೂಕ್ತ ಉದ್ದಿಮೆಗಳನ್ನು ಆಯೋಜಿಸಿ ಹೆಚ್ಚಿನ ಲಾಭಗಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ತರಬೇತಿಯಲ್ಲಿ ಹೊಸ ಹೊಸ ಉದ್ದಿಮೆಗಳಿಗೆ ತಿಳಿಸಿಕೊಡಲು ನೆರವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ತಿಳಿಸಿದರು.
ಇಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಭಾರತ ಸರ್ಕಾರ, ನವದೆಹಲಿ ರವರ ಸಂಯುಕ್ತ ಆಶ್ರಯದಲ್ಲಿ ಜಿಕೆವಿಕೆ ಆವರಣದಲ್ಲಿ ಡಿಸೆಂಬರ್ 2 ರಿಂದ 6 ರವರೆಗೆ ಹಮ್ಮಿಕೊಂಡಿದ್ದ “ಮಹಿಳಾ ಉದ್ಯಮಿಗಳಿಗೆ ಕೃಷಿ ನವೋದ್ಯಮಗಳು ಹಾಗೂ ಅವಕಾಶದ ಬಗ್ಗೆ ತರಬೇತಿ ಕಾರ್ಯಕ್ರಮ”ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಇದ್ದು ಅದರಲ್ಲೂ ವಿಶೇಷವಾಗಿ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯು ಮಹಿಳೆಯರಿಗೆ ವಿಫುಲ ಉದ್ಯೋಗವಕಾಶಗಳನ್ನು ಒದಗಿಸುತ್ತಿದೆ, ಆದರೆ ಕೃಷಿ ಚಟುವಟಿಕೆಗಳಲ್ಲಿ ಶೇಕಡಾ 46 ರಷ್ಟು ತೊಡಗಿಸಿಕೊಂಡಿರುವ ಇವರು ಕೃಷಿ ಉದ್ದಿಮೆಗಳಲ್ಲಿ ಶೇಕಡಾ 13 ರಷ್ಟಿರುವುದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸದೃಡರನ್ನಾಗಿಸಲು ಕೃಷಿ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತಷ್ಟು ರೂಪುರೇಷೆಗಳನ್ನು ಸಿದ್ದಪಡಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ: ವೈ.ಎನ್. ಶಿವಲಿಂಗಯ್ಯ, ವಿಸ್ತರಣಾ ನಿರ್ದೇಶಕರು, ಡಾ: ಕೆ.ಪಿ. ರಘುಪ್ರಸಾದ್, ಸಹ ವಿಸ್ತರಣಾ ನಿರ್ದೇಶಕರು, ಡಾ: ಸಿದ್ದಯ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ವ್ಯವಹಾರ ನಿರ್ವಹಣಾ ಸಂಸ್ಥೆ, ಡಾ.ವೇಣುಗೋಪಾಲ್, ಸಮಾಲೋಚಕರು, ಎ.ವಿ. ಟ್ರೇಡರ್ಸ್, ಅಗಿ ಕ್ಲಿನಿಕ್ ಬಿಸಿನೆಸ್, ದೊಡ್ಡಬಳ್ಳಾಪುರ ಹಾಗೂ ಡಾ: ಹೆಚ್.ಕೆ. ಪಂಕಜ, ಕಾರ್ಯಕ್ರಮದ ಸಂಯೋಜಕರು ಉಪಸ್ಥಿತರಿದ್ದರು.