ಐತಿಹಾಸಿಕ ತಾಜ್‌ಬಾವಡಿ ಸ್ಮಾರಕ ಸಂರಕ್ಷಣೆ-ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ

0
47
Share this Article
0
(0)
Views: 2

ಐತಿಹಾಸಿಕ ತಾಜ್‌ಬಾವಡಿ ಸ್ಮಾರಕ ಸಂರಕ್ಷಣೆ-ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ವಿಜಯಪುರದ ಐತಿಹಾಸಿಕ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿ ಸೇರ್ಪಡೆಗೆ ಕ್ರಮ -ಸಚಿವ ಡಾ.ಎಂ.ಬಿ.ಪಾಟೀಲ

ವಿಜಯಪುರ, ಜುಲೈ 28

ವಿಜಯಪುರ ನಗರದ ತಾಜ್‌ಬಾವಡಿಯ ಪುನರುಜ್ಜೀವನಗೊಳಿಸುವುದು ಮತ್ತು ಸಂರಕ್ಷಿಸುವುದಷ್ಟೇ ಅಲ್ಲದೇ, ನಗರದಲ್ಲಿರುವ ಐತಿಹಾಸಿಕ ಗೋಲಗುಂಬಜ್, ತಾಜ್‌ಬಾವಡಿ, ಇಬ್ರಾಹಿಂರೋಜಾ ಮತ್ತು ಇತರೆ ಸ್ಮಾರಕಗಳನ್ನು ಸೇರಿಸಿ ಪ್ರತ್ಯೇಕವಾಗಿ ಬಿಜಾಪುರ ಸ್ಮಾರಕಗಳ ಸಮೂಹ ಮಾಡಿ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಡಾ.ಎಂ.ಬಿ.ಪಾಟೀಲ ಹೇಳಿದರು.

ಜಿಲ್ಲಾಡಳಿತ,ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಹಾಗೂ ವರ್ಡ ಹೇರಿಟೇಜ್ ಮಾನ್ಯುಮೆಂಟ ಅಸೋಸಿಯೇಷನ್ ಆಪ್ ಇಂಡಿಯಾ (ಡಬ್ಲೂಎಂಫ್) ವಿಶ್ವ ಸ್ಮಾರಕಗಳ ನಿಧಿ ಇವರ ಸಹಭಾಗಿತ್ವದಲ್ಲಿ ಮತ್ತು ಟಿಸಿಎಸ್ ಫೌಂಡೇಶನ್‌ರವರ ಸಿಎಸ್‌ಆರ್ ಅನುದಾನದಡಿ ಸ್ಮಾರಕ ದತ್ತು ಯೋಜನೆಯಡಿಯಲ್ಲಿ ವಿಜಯಪುರ ನಗರದ ಐತಿಹಾಸಿಕ ತಾಜಬಾವಡಿ ಸ್ಮಾರಕ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ,

1620ರಲ್ಲಿ ನಿರ್ಮಿಸಿದ 224 ಚದರ ಅಡಿ ವಿಸ್ತಿçÃರ್ಣದಲ್ಲಿ 35ಚದರ ಅಡಿ ಹೊರ ಪ್ರದೇಶ ಮತ್ತು ಸುಮಾರು 52 ಅಡಿ ಎತ್ತರದಲ್ಲಿರುವ ಐತಿಹಾಸಿಕ ತಾಜ್‌ಬಾವಡಿಯನ್ನು ಸಂರಕ್ಷಣೆ ಮಾಡಿ, ಅಭಿವೃದ್ದಿಗೊಳಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸ್ಮಾರಕದ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಸಾಂಸ್ಕೃತಿಕ ಕಲ್ಯಾಣಿ- ಪುಸ್ಕರಣಿಯನ್ನು ನಿರ್ಮಿಸಲಾಗುವುದು, ಹಾಳಾಗಿರುವ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಹಮಾಮ್ ಪ್ರದೇಶದ ಮತ್ತು ಸೆರಾಯ್‌ನ ಪೂರ್ವ ದಿಕ್ಕಿನಲ್ಲಿರುವ ಹಾಳಾಗಿರುವ ವಾಸ್ತುಶಿಲ್ಪದ ಅವಶೇಷಗಳನ್ನು ಪುನ:ಸ್ಥಾಪನೆಗಳಿಸಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ಈ ಹಿಂದೆಯೂ ನಗರ ಸಂಚಾರ ಸಂದರ್ಭದಲ್ಲಿ ತಾಜ್‌ಬಾವಡಿ ಪುನರುಜ್ಜೀವನ ಸಂಕಲ್ಪ ತೊಟ್ಟು ಪುನರುಜ್ಜೀವನಗೊಳಿಸಲಾಗಿದೆ. ಹತ್ತಾರು ಬೃಹತ್ ಜೆಸಿಬಿ ಹಿಟಾಚಿ ಮಾದರಿಯ ಯಂತ್ರಗಳನ್ನು ಬಳಸಿ, ಬೃಹತ್ ಮೋಟಾರುಗಳನ್ನು ನೀರಿನ ಆಳಕ್ಕೆ ಇಳಿಸಿ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಭಿವೃದ್ದಿಗೊಳಿಸಲಾಗುವುದು. ತಾಜ್‌ಬಾವಡಿಯನ್ನು ಅಭಿವೃದ್ದಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿ ಹೆಚ್ಚೆಚ್ಚು ಪ್ರವಾಸಿಗರನ್ನು ವಿಜಯಪುರಕ್ಕೆ ಆಕರ್ಷಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಮಹೇಜಬಿನ್ ಹೊರ್ತಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ,ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here