ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ

0
685
Share this Article
5
(23)
Views: 622

ಬೆಂಗಳೂರು ನಗರ ಜಿಲ್ಲೆ, ಸೆಪ್ಟೆಂಬರ್ 20

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ “2024-25ನೇ ಸಾಲಿನ ಸಂಗೀತ  ಮತ್ತು ನೃತ್ಯ  ಕ್ಷೇತ್ರಗಳಲ್ಲಿ  ಅನುಪಮ ಸೇವೆ ಸಲ್ಲಿಸಿದ  ಹಿರಿಯ ಕಲಾವಿದರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ”  ಪುರಸ್ಕೃತರ ಆಯ್ಕೆ  ಪಟ್ಟಿಯನ್ನು ಪ್ರಕಟಿಸಿದೆ.

ಗೌರವ ಪ್ರಶಸ್ತಿ ವಿಭಾಗ: (ಕರ್ನಾಟಕ ಸಂಗೀತ)- ಗಾಯನದಲ್ಲಿ ಬೆಂಗಳೂರಿನ ಭಾನುಮತಿ ನರಸಿಂಹನ್‍ ಮತ್ತು ನೃತ್ಯದಲ್ಲಿ ಹಾಸನದ ಗಾಯತ್ರಿ ಕೇಶವನ್‍.

ವಾರ್ಷಿಕ ಪ್ರಶಸ್ತಿ ವಿಭಾಗ: (ಕರ್ನಾಟಕ ಸಂಗೀತದಲ್ಲಿ)- ಬೆಂಗಳೂರಿನ ವಾನರಾಶಿ ಬಾಲಕೃಷ್ಣ ಭಾಗವತರ್‍, ಬೆಂಗಳೂರಿನ ಎಸ್‍.ವಿ.ಗಿರಿಧರ್‍- ಮೃದಂಗ, ಆನೇಕಲ್‍ ನ ನಾಗಭೂಷಣ-ಪಿಟೀಲು.

ಹಿಂದೂಸ್ಥಾನಿ ಸಂಗೀತ: ಗುಲಬರ್ಗಾದ ಮಹದೇವಪ್ಪ ಪೂಜಾರ, ಬೆಳಗಾಂನ ರವೀಂದ್ರ ಕಾಟೋಟಿ-ಹಾರ್ಮೋನಿಯಂ, ಉತ್ತರ ಕನ್ನಡದ ಅನಂತ ಭಾಗವತ್-ಗಾಯನ .

ನೃತ್ಯ ವಿಭಾಗ : ಬೆಳಗಾಂನ ಟಿ.ರವೀಂದ್ರಶರ್ಮ, ಬೆಂಗಳೂರಿನ ಅನುರಾಧ ವಿಕ್ರಾಂತ್, ಬೆಂಗಳೂರಿನ ಸುಗ್ಗನಹಳ್ಳಿ ಷಡಾಕ್ಷರಿ ಮತ್ತು ಬೆಂಗಳೂರಿನ ಬಿ.ಆರ್.ಹೇಮಂತ ಕುಮಾರ್‍-ನೃತ್ಯಕ್ಕೆ ಪಿಟೀಲು.

ಸುಗಮ ಸಂಗೀತ ವಿಭಾಗ:  ರಾಯಚೂರಿನ ಸೂಗೂರೇಶ ಆಸ್ಕಿಹಾಳ್‍ ಮತ್ತು ಬೆಂಗಳೂರಿನ ಎನ್‍.ಎಲ್‍.ಶಿವಶಂಕರ್‍-ಪಕ್ಕವಾದ್ಯ-ತಬಲಾ

ಕಥಾ ಕೀರ್ತನೆ ವಿಭಾಗ: ಕೋಲಾರದ ಕೆ.ಎನ್‍.ಕೃಷ್ಣಪ್ಪ. ಗಮಕ ವಿಭಾಗ: ಹಾಸನದ ರತ್ನಾಮೂರ್ತಿ-ವ್ಯಾಖ್ಯಾನ

ಸಂಘ ಸಂಸ್ಥೆ ವಿಭಾಗ: ಗದಗಿನ ವೀರೇಶ್ವರ ಪುಣ್ಯಾಶ್ರಮ ಮತ್ತು ಬೆಂಗಳೂರಿನ ಸುನಾದ ನಾದ ಕಲ್ಚರಲ್‍ ಸೆಂಟರ್‍ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

How useful was this post?

Click on a star to rate it!

Average rating 5 / 5. Vote count: 23

No votes so far! Be the first to rate this post.

Leave a reply

Please enter your comment!
Please enter your name here