ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಮಾಗಡಿ ತಾಲ್ಲೂಕು ರಾಮನಗರದಲ್ಲಿ ಆರು ದಿನಗಳ “ವೈಜ್ಞಾನಿಕವಾಗಿ ಜೇನು ಸಾಕಾಣಿಕೆ” ತರಬೇತಿಯನ್ನು ದಿನಾಂಕ ೦೫.೦೮.೨೦೨೪ ರಿಂದ ೧೦.೦೮.೨೦೨೪ರವರೆಗೆ ಏರ್ಪಡಿಸಲಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಲತಾ ಆರ್. ಕುಲಕರ್ಣಿ ತಿಳಿಸಿದ್ದಾರೆ. ಮೊದಲು ನೋಂದಾಯಿಸಿದ ೧೫ ಜನ ರೈತರಿಗೆ ಮಾತ್ರ ಅವಕಾಶವಿದ್ದು ಆಸಕ್ತ ರೈತರು ಹೆಸರನ್ನು ನೊಂದಾಯಿಸಿಕೊಳ್ಳಲು ಕೇಂದ್ರದ ಸಸ್ಯಸಂರಕ್ಷಣಾ ವಿಜ್ಞಾನಿಗಳಾದ ಡಾ. ರಾಜೇಂದ್ರ ಪ್ರಸಾದ್. ಬಿ.ಎಸ್.(೯೮೪೪೩ ೦೫೦೦೨) ಮತ್ತು ಕೃಷಿ ವಿಸ್ತರಣಾ ವಿಜ್ಞಾನಿಗಳಾದ ಡಾ. ಸೌಜನ್ಯ, ಎಸ್.(೮೩೧೦೦೪೪೬೮೧) ರವರನ್ನು ಸಂಪರ್ಕಿಸಲು ಕೋರಲಾಗಿದೆ.