ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ರಾಮನಗರ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಅರಣ್ಯ ಇಲಾಖೆಗಳು, ಧಾನ್ ಫೌಂಡೇಶನ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ರಾಮನಗರ ಜಿಲ್ಲೆಯ ಕೃಷಿ ಸಖಿಯರು, ಸರ್ಕಾರೇತರ ಸಂಘ ಸಂಸ್ಥೆಗಳು, ರೈತ ಉತ್ಪಾದಕರ ಸಂಘಗಳು ಇವರ ಸಂಯುಕ್ತಾಶ್ರಯದಲ್ಲಿ ಮುಂಗಾರು ಹಂಗಾಮಿನ ತಾಂತ್ರಿಕ ಆಂದೋಲನವನ್ನು ಕೃಷಿ ವಿಜ್ಞಾನ ಕೇಂದ್ರ ಚಂದೂರಾಯನಹಳ್ಳಿ, ಮಾಗಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಗಣ್ಯರು ಉದ್ಘಾಟಿಸಿದರು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಮಾನ್ಯ ವಿಸ್ತರಣಾ ನಿರ್ದೇಶಕರಾದ ಡಾ. ವಿ. ಎಲ್. ಮಧುಪ್ರಸಾದ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹೊಸ ತಂತ್ರಜ್ಞಾನಗಳು ಹಾಗೂ ವಿವಿಧ ಬಿತ್ತನೆ ಬೀಜಗಳು ರೈತರು ಇರುವಲ್ಲಿಯೇ ಒದಗಿಸಬೇಕೆಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಇಲ್ಲಿ ದೊರೆತ ಮಾಹಿತಿ ಮತ್ತು ತಂತ್ರಜ್ಞಾನಗಳನ್ನ ರೈತರು ಅಳವಡಿಸಿಕೊಂಡಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾದಂತೆ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಅ.ಭಾ.ಸು.ಸಂ.ಪ್ರಾ.-ಬೀಜ ತಂತ್ರಜ್ಞಾನ ಸಂಶೋಧನಾ ಕೇಂದ್ರದ ಕೀಟಶಾಸ್ತçದ ಪ್ರಾಧ್ಯಾಪಕರಾದ ಡಾ. ಸಿ. ಮಂಜಾನಾಯ್ಕ ಮಾತನಾಡಿ ಬಿತ್ತನೆ ಬೀಜ ಖರೀದಿಸಲು ವಿಶ್ವವಿದ್ಯಾಲಯ ಬೆಂಗಳೂರಿನಿoದ ಅಭಿವೃದ್ದಿ ಪಡಿಸಿರುವ “ಬೀಜ ಮಾರಾಟ ಜಾಲತಾಣ” ಆನ್‌ಲೈನ್ ಆ್ಯಪ್ ಮತ್ತು ಸಾವಯವ ಜೈವಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ರಾಸಾಯನಿಕ ಕೀಟನಾಶಕಗಳ ಬಳಕೆಗಳನ್ನು ಕಡಿತಗೊಳಿಸಿ ರೈತರು ಕೀಟ ರೋಗ ನಿರ್ವಹಣೆಗಳನ್ನು ಮಾಡಬಹುದೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಲತಾ ಆರ್. ಕುಲಕಣ ðರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಉತ್ತಮವಾದ ಬೀಜ ಮತ್ತು ನವೀನ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ತಾಂತ್ರಿಕ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು ಹಾಗೂ ವಿವಿಧ ಇಲಾಖೆಗಳ ಯೋಜನೆಗಳನ್ನು ಪರಿಚಯ ಮಾಡಿಸಲು ರೈತರಿಗೆ ಒಂದೇ ಸೂರಿನಡಿ ಅನುವು ಮಾಡಿಕೊಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರೈತರು ಸೌಲಭ್ಯದ ಪ್ರಯೋಜನೆ ಪಡೆಯಬೇಕೆಂದು ತಿಳಿಸಿದರು.
ಶ್ರೀಮತಿ ಅಂಬಿಕಾ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ರಾಮನಗರರವರು ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಮಾಗಡಿಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ವಿಜಯ ಸವನೂರು ಕೃಷಿ ಇಲಾಖೆಯ ಪ್ರಸ್ತುತ ವರ್ಷ ದೊರೆಯುವ ಸೌಲಭ್ಯಗಳಾದ ಬಿತ್ತನೆ ಬೀಜ, ಮಣ್ಣು ಪರೀಕ್ಷೆ, ಸಾವಾಯವ ಇಂಗಾಲ ಕಾರ್ಯಕ್ರಮ, ಬೆಳೆ ಸಮೀಕ್ಷೆ, ಕೃಷಿ ಭಾಗ್ಯ ಯೋಜನೆ, ಬರ ನಿರ್ವಹಣೆ, ಕೃಷಿ ಯಂತ್ರೋಪಕರಣ ಯೋಜನೆ, ಕೃಷಿ ಸಂಸ್ಕರಣೆ, ನರೇಗ ಮತ್ತು ಆರ್.ಕೆ.ವಿ.ವೈ.-ರಫತಾರ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ. ಮಂಜುನಾಥ್, ವಲಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ, ಮಾಗಡಿ ರವರು ಹಸಿರೇ ಉಸಿರು, ಪರಿಸರ ಸಂರಕ್ಷಣೆಗಾಗಿ ನಾಡು ಬೆಳೆಸುವುದರ ಜೊತೆಗೆ ರೈತರು ಕಾಡನ್ನು ಬೆಳೆಸಬೇಕೆಂದು ಆರ್.ಎಸ್.ಪಿ.ಡಿ, ಆರ್.ಕೆ.ವಿ.ವೈ, ನರೇಗ ಯೋಜನೆಗಳ ಬಗ್ಗೆ ತಿಳಿಸಿದರು. ಶ್ರೀಮತಿ ಜಯಶ್ರೀ, ಪಶುವೈದ್ಯಾಧಿಕಾರಿಗಳು, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಮಾತನಾಡಿ ರಾಸುಗಳ ಆರೋಗ್ಯ, ಲಸಿಕೆ, ಅನುಗ್ರಹ ಯೋಜನೆ, ಎನ್.ಎಲ್.ಎಂ.-ಇ.ಡಿ.ಪಿ., ಕುರಿ ಮತ್ತು ಮೇಕೆ ನಿರ್ವಹಣೆಗೆ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಶ್ರೀ ಮಹಮ್ಮದ್ ನಜೀಮ್ ಮಾತನಾಡಿ ಪಿ.ಎಂ.ಕೆ.ಎಸ್.ವೈ. ರಾಷ್ಟ್ರೀಯ ತೋಟಗಾರಿಕಾ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಪುನಃಶ್ಚೇತನ ಯೋಜನೆ, ತೋಟಗಾರಿಕಾ ಬೆಳೆಗಳ ಸಹಾಯಧನ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಮಾಗಡಿಯ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ. ಶ್ರೀನಿವಾಸ್ ರವರು ರೈತರ ಪರಿಶ್ರಮಕ್ಕೆ ತಕ್ಕ ಫಲ ಸಿಗಬೇಕಾದರೆ ವೈಜ್ಞಾನಿಕ ಪದ್ಧತಿಗಳ ಅಳವಡಿಕೆ ಅತ್ಯಗತ್ಯ ಎಂದು ತಿಳಿಸಿ ರೇಷ್ಮೆ ಇಲಾಖೆಯ ಸೌಲಭ್ಯದ ಬಗ್ಗೆ ತಿಳಿಸಿದರು. ತಾಮತ್ರಿಕ ಅಧಿವೇಶನದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಪ್ರೀತು, ಡಿ.ಸಿ. ಮಾತನಾಡಿ ಜೀವ-ಜೀವಾಣುಗಳ ಉಗಮಕ್ಕೆ ಮೂಲವಾದ ಮಣ್ಣಿನ ಆರೋಗ್ಯ ನಿರ್ವಹಣೆ, ನೀರಿನ ನಿರ್ವಹಣೆ ಮತ್ತು ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ರಾಗಿ (ಎಂ.ಆರ್.-1, ಎಂ.ಆರ್.-6, ಕೆ.ಎಂ.ಆರ್.-301), ಭತ್ತ (ಕೆ.ಎಂ.ಪಿ.-220, ಕೆ.ಎಂ.ಪಿ.-175, ಎಂ.ಎಸ್.ಎನ್.-99, ಗಂಗಾವತಿ ಸೋನಾ, ಆರ್.ಎನ್,ಆರ್.-15048), ತೊಗರಿ (ಬಿ.ಆರ್,ಜಿ.-5, ಬಿ. ಆರ್,ಜಿ,-3), ಅವರೆ (ಹೆಚ್.ಎ.-5) ಮತ್ತು ಸಿರಿಧಾನ್ಯ ಬೆಳೆ, ಚಿಯಾ, ಹುಚ್ಚೆಳ್ಳು, ಬೆಳೆಗಳ ನೂತನ ತಳಿಗಳು ಹಾಗೂ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ದೀಪಾ ಪೂಜಾರ, ತೋಟಗಾರಿಕೆ ವಿಜ್ಞಾನಿಗಳು ಮಾತನಾಡಿ ರಾಜ್ಯಕ್ಕೆ ಪ್ರಥಮವಾಗಿ ದೊರೆಯುವ ರಾಮನಗರದ ಮಾವಿನ ಗುಣಮಟ್ಟವನ್ನ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳಾದ ಸವರುವಿಕೆ, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಜೊತೆಗೆ ತೆಂಗಿನ ತೋಟದ ನಿರ್ವಹಣೆಯತ್ತ ರೈತರು ಗಮನಹರಿಸಬೇಕೆಂದರು. ಶ್ರೀಮತಿ ಉಮಾ ರಾಣ , ಕೆ., ಕ್ಷೇತ್ರ ವ್ಯವಸ್ಥಾಪಕರು ಬೀಜೋಪಚಾರದ ಬಗ್ಗೆ ಮಾತನಾಡಿ ಪದ್ದತಿ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದÀ ವಸ್ತು ಪ್ರದರ್ಶನ ಹಾಗೂ ಮುಂಗಾರು ಹಂಗಾಮಿಗೆ ಸೂಕ್ತವಾದ ವಿವಿಧ ಬೆಳೆಗಳ ನೂತನ ತಳಿಗಳ ಬಿತ್ತನೆ ಬೀಜಗಳ ಮಾರಾಟವನ್ನು ಏರ್ಪಡಿಸಲಾಗಿತ್ತು.
ಇದೇ ಕಾರ್ಯಕ್ರಮದಲ್ಲಿ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಅಂಗವಾಗಿ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ತೊಡಗಿಸಿಕೊಂಡು ತಯಾರಿಸಲ್ಪಟ್ಟ ಯಾವುದೇ ವಸ್ತುವನ್ನು ಉಪಯೋಗಿಸುವುದಿಲ್ಲ ಮತ್ತು ಸೇವೆಯನ್ನು ಪಡೆಯುವುದಿಲ್ಲವೆಂದು ಪ್ರಮಾಣ ವಚನವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ರೈತರು/ ರೈತ ಮಹಿಳೆಯರು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಸೌಜನ್ಯ ಎಸ್. ತಾಂತ್ರಿಕ ಅಧಿಕಾರಿಗಳಾದ ಶ್ರೀಮತಿ ರೂಪಾ ಸಿ.ಹೆಚ್, ಶ್ರೀ. ನರಸಿಂಹಾಚಾರ್, ಸಹಾಯಕರು, ಕೇಂದ್ರದ ವಿವಿಧ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.