ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಉತ್ಪನ್ನಗಳ ಸಂತೆ

0
41
Share this Article
0
(0)
Views: 2

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಉತ್ಪನ್ನಗಳ ಸಂತೆ” ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ –ಕೃಷಿ ಸಚಿವ ಎನ್ ಚೆಲುವರಯಸ್ವಾಮಿ

ಬೆಂಗಳೂರು, ಜೂನ್ 22 

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಲಾದ ವಿವಿಧ ತಾಂತ್ರಿಕತೆಗಳ ಉತ್ಪನ್ನ / ಕೃಷಿ ಪರಿಕರಗಳನ್ನು ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ “ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಉತ್ಪನ್ನಗಳ ಸಂತೆ” ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ ಎಂದು ಕೃಷಿ ಸಚಿವ ಎನ್ ಚೆಲುವರಯಸ್ವಾಮಿ ತಿಳಿಸಿದರು.

  ಇಂದು ಕೃಷಿ ಸಚಿವ ಎನ್ ಚೆಲುವರಯಸ್ವಾಮಿ ಅವರು  ಜಿ.ಕೆ.ವಿ.ಕೆ ಆವರಣದಲ್ಲಿ ಆಯೋಜಿಸಿದ್ದ“ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಉತ್ಪನ್ನಗಳ ಸಂತೆ” ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಸಚಿವರು, ಸದರಿ ಕೃಷಿ ಸಂತೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ, ವಿಸ್ತರಣೆ ಹಾಗೂ ಕೃಷಿ ಮಹಾವಿದ್ಯಾನಿಲಯಗಳಲ್ಲಿ ಉತ್ಪಾದಿಸಲಾದ ಕೃಷಿ ಉತ್ಪನ್ನಗಳು ಹಾಗೂ ಕೃಷಿ ತಂತ್ರಜ್ಞಾನ / ತಾಂತ್ರಿಕತೆಗಳನ್ನು ಪರಿಚಯ ಮಾಡಿಸುವ ನಿಟ್ಟಿನಲ್ಲಿ ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು ಸಾವಯವ ಉತ್ಪನ್ನಗಳು. ವಿವಿಧ ಸಸ್ಯಾಭಿವೃದ್ಧಿ ಸಾಮಗ್ರಿಗಳು (ಪ್ರಮುಖವಾಗಿತೋಟಗಾರಿಕಾ ಬೆಳಗಳಾದ ಹಣ್ಣುಗಳು, ಸುಗಂಧ ಮತ್ತುಔಷಧೀಯ ಸಸ್ಯಗಳು) ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣಾಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಅಡಿಕೆ ಉತ್ಪನ್ನಗಳು, ರೇಷ್ಮೆಕೃಷಿಯ ಉಪ ಉತ್ಪನ್ನಗಳು, ಅಣಬೆ ಮತ್ತು ಜೇನುಕೃಷಿ, ವಾಣಿಜ್ಯೀಕರಣ ಉತ್ಪನ್ನಗಳು, ಪಶುಸಂಗೋಪನೆ, ಕೇಕ್ ಪ್ರದರ್ಶನ, ರಾಜಮುಡಿ ಅಕ್ಕಿ, ರಾಸಾಯನಿಕ ಮುಕ್ತ ಬೆಲ್ಲ, ಕೃಷಿ ಪ್ರಕಟಣೆಗಳು ಹಾಗೂ ಇನ್ನೂ ಮುಂತಾದÀವುಗಳನ್ನು ಈ ಸಂತೆಯನ್ನು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನುಅಚÀ್ಟುಕಟ್ಟಾಗಿ ವ್ಯವಸ್ಥೆಮಾಡಲಾಗಿದೆ, ಪ್ರಸ್ತುತ ದಿನಗಳಲ್ಲಿ ಮೌಲ್ಯವರ್ಧನೆಗೆ ಸಾಕಷ್ಟು ಒತ್ತುಕೊಟ್ಟಿದ್ದು ವಿವಿಧ ಬೆಳೆಗಳಲ್ಲಿ ಸಿರಿಧಾನ್ಯಗಳಲ್ಲಿನ ಸಮರ್ಥ ಬೆಳೆಗಳಲ್ಲಿ (ಕಿನೋವ, ರಾಜಗೀರಇತ್ಯಾದಿ) ಮೌಲ್ಯವರ್ಧಿತ ಪದಾರ್ಥಗಳಿಗೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ರೈತ ಬಾಂಧವರು ಈ ವಿನೂತನಕಾರ್ಯಕ್ರಮದಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಅವರು ಮಾತನಾಡಿ ಕೃಷಿ ವಿಶ್ವವಿದ್ಯಾನಿಲಯವು ತನ್ನ ಆರು ದಶಕಗಳ ಸುಧೀರ್ಘ ಅವಧಿಯಲ್ಲಿ 485 ತಂತ್ರಜ್ಞಾನಗಳು ಹಾಗೂ 328 ತಳಿಗಳನ್ನು ಅಭಿವೃದ್ಧಿಪಡಿಸಿದೆ. ಈ ಎಲ್ಲಾ ತಳಿಗಳು ಇಂದಿಗೂ ನಾಡಿನ ಕೃಷಿಕರಲ್ಲಿ ಜನಪ್ರಿಯವಾಗಿದ್ದು ರಾಜ್ಯದ ಒಟ್ಟಾರೆ ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆÉÉ. ಇದಲ್ಲದೆ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಹಲವು ಸುಧಾರಿತ ತಳಿಗಳು ರಾಜ್ಯ ಮತ್ತು ರಾಷ್ಟ್ರದ ಗಡಿದಾಟಿದ್ದು 400 ಕ್ವಿಂಟಾಲ್‍ಗಿಂತ ಹೆಚ್ಚು ಸೂರ್ಯಕಾಂತಿ ಬೀಜಗಳನ್ನು ಈಸ್ಟ್‍ಆಫ್ರಿಕನ್ ಸೀಡ್ ಲಿಮಿಟೆಡ್ ಕಂಪನಿ ಮೂಲಕ ಆಫ್ರಿಕಾ ದೇಶಗಳಿಗೆ ವಿಶೇಷವಾಗಿ ಉಗಾಂಡಾ ದೇಶಕ್ಕೆ ರಫÀ್ತು ಮಾಡಲಾಗುತ್ತಿದೆ. ಜೋಳ, ಭತ್ತ, ರಾಗಿ, ತೊಗರಿ, ಕಿರುಧಾನ್ಯಗಳ ಬೀಜವನ್ನು ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಮಧ್ಯಪ್ರದೇಶ, ಆಂದ್ರಪ್ರದೇಶ, ಛತ್ತೀಸ್‍ಘಡ, ತಮಿಳುನಾಡು, ಒಡಿಸ್ಸಾ, ಬಿಹಾರ್, ಪಶ್ಚಿಮ ಬಂಗಾಳ ಮತ್ತುತ್ರಿಪುರ ಸೇರಿದಂತೆಇನ್ನೂ ಹಲವು ರಾಜ್ಯಗಳಿಗೆ ಒದಗಿಸಲಾಗಿದ್ದು ಅಲ್ಲಿಯೂ ಸಹ ಈ ತಳಿಗಳು ಉತ್ತಮ ಫಸಲು ನೀಡುವ ಮೂಲಕ ವಿಶ್ವವಿದ್ಯಾನಿಲಯವು ರಾಷ್ಟ್ರವ್ಯಾಪ್ತಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ. ಕೃಷಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿಯೇ ಮೊಟ್ಟಮೊದಲಿಗೆ ಬಾರಿಗೆ ಉತ್ಪನ್ನಗಳ ಸಂತೆಯನ್ನು ಆಯೋಜಿಸಿದ್ದು, ಕೃಷಿಕರ / ಸಾರ್ವಜನಿಕರಿಗೆ ವಿಶ್ವವಿದ್ಯಾನಿಲಯದ ತಾಂತ್ರಜ್ಞಾನಗಳು, ತಾಂತ್ರಿಕತೆಗಳು ಹಾಗೂ ಉತ್ಪನ್ನಗಳು ಏಕಗವಾಕ್ಷಿಯಡಿಯಲ್ಲಿ ತಲುಪಿಸಲು ಸಹಾಯಕಾರಿಯಾಗಿದೆ ಎಂದರು.

ಸಂತೆಯಲ್ಲಿ ತರಕಾರಿಗಳ ಸೆಲ್ಫಿ ಪಾಯಿಂಟ್ ವಿಶೇಷ ಆಕರ್ಷಣೆಯಾಗಿತ್ತು. ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here