ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆದು 2047ಕ್ಕೆ ಶತಮಾನೋತ್ಸವ ಅಚರಿಸಲಿದ್ದು, ಈ ಹೊತ್ತಿಗೆ ದೇಶ ಸಾಕ್ಷರತೆ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಬೇಕಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಅವರು ಕರೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜರುಗಿದ ವಿ.ವಿ.ಯ 42ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ಪುರುಷರು ಶೇ. 75ರಷ್ಟು ಸಾಕ್ಷರತೆ ಹೊಂದಿದ್ದರೆ, ಮಹಿಳೆಯರಲ್ಲಿ ಇದರ ಪ್ರಮಾಣ ಇನ್ನು ಕಡಿಮೆ ಇದೆ. ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯವಿದ್ದು, ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ನಳಂದಾ, ತಕ್ಷಶಿಲಾದಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಇತಿಹಾಸ ನಾವು ಹೊಂದಿದ್ದೇವೆ. ಹಿಂದೆ ದೇಶವನ್ನು ಸೋನೆ ಕೀ ಚಿಡಿಯಾ ಎಂದು ಕರೆಯಲಾಗಿತ್ತು. ಇದೀಗ ಮತ್ತೆ ಭಾರತವನ್ನು ವಿಶ್ವಗುರು ಮಾಡಬೇಕಿದೆ. ಸಮಾನತೆ, ನ್ಯಾಯಕ್ಕಾಗಿ ಗುಲಬರ್ಗಾ ವಿ.ವಿ. ಶ್ರಮಿಸುತ್ತಿದೆ. ವಸುದೈ ಕುಟುಂಬಕ್ಕಂ ಪರಿಕಲ್ಪನೆ ನಮ್ಮದಾಗಿದ್ದು, ಸರ್ವಜನರು ಸುಖದಿಂದ ಬಾಳುವಂತೆ ಮತ್ತು ಜನರು ನಿರೋಗಿಯಾಗಿ ಬದುಕುವ ನಮ್ಮ ಚಿಂತನೆ ಎಲ್ಲೆಡೆ ಪಸರಿಸಬೇಕಿದೆ ಎಂದರು.
ವಿಶ್ವದ ಅರ್ಥಿಕ ಪ್ರಗತಿಯಲ್ಲಿ ಭಾರತವು 5ನೇ ಸ್ಥಾನದಲ್ಲಿದ್ದು, ಇದನ್ನು ಮೂರನೇ ಸ್ಥಾನಕ್ಕೆ ತರಲು ಪ್ರಧಾನಮಂತ್ರಿಗಳು ಪಣ ತೊಟ್ಟಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಇದು ಸಾಧ್ಯವಾದಲ್ಲಿ ಮಾತ್ರ ದೇಶ ವಿಕಸಿತ್ ಭಾರತವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಏಕ್ ಪೇಡ್ ಮಾ ಕೇ ನಾಮ್ ಅಭಿಯಾನ ಆಯೋಜಿಸಿ: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಏಕ್ ಪೇಡ್ ಮಾ ಕೇ ನಾಮ್ ಹೆಸರಿನಡಿ ಗಿಡ ನೆಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದು, ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿ.ವಿ. ಗಳು ಮುಂದಿನ ವಾರದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಗಿಡ ನೆಡಬೇಕು. ತಾಯಿ ಮಕ್ಕಳನ್ನು ರಕ್ಷಿಸುವ ರೀತಿಯಲ್ಲಿ ಗಿಡಗಳನ್ನು ಸಂರಕ್ಷಿಸಬೇಕು ಎಂದು ವಿ.ವಿ.ಗಳಿಗೆ ಸಲಹೆ ನೀಡಿದರು.
ಮೂವರಿಗೆ ಗೌಡಾ ಪದವಿ ಪ್ರಧಾನ: ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ನ್ಯಾಯವಾದಿ ಅರ್ಚನಾ ಪ್ರದೀಪ ತಿವಾರಿ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಕೃಷಿ ತಜ್ಞ ಮತ್ತು ಶಿಕ್ಷಣ ಉದ್ಯಮಿ ಲಿಂಗರಾಜ ಬಸವರಾಜಪ್ಪ ಅಪ್ಪ ಅವರಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಮ ಕುಲಾಧಿಪತಿಗಳಾಗಿರುವ ಡಾ.ಎಂ.ಸಿ.ಸುಧಾಕರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
74 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ: ಘಟಿಕೋತ್ಸವದಲ್ಲಿ ವಿವಿಧ ವಿಭಾಗದಲ್ಕಿ ಹೆಚ್ಚಿನ ಅಂಕ ಗಳಿಸಿದ 74 ಅಭ್ಯರ್ಥಿಗಳಿಗೆ 168 ಚಿನ್ನದ ಪದಕ ಪ್ರದಾನ ಮಾಡಲಾಯಿತು. 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
113 ಅಭ್ಯರ್ಥಿಗಳಿಗೆ ಪಿ.ಎಚ್.ಡಿ ಪದವಿ: ಕಲಾ ನಿಕಾಯದ 38, ಸಮಾಜ ವಿಜ್ಞಾನ ನಿಕಾಯದ 29, ವಿಜ್ಞಾನ ಮತ್ತು ತಮತ್ರಜ್ಞಾನ ನಿಕಾಯದ 26, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ 11 ಹಾಗೂ ಶಿಕ್ಷಣ ನಿಕಾಯದ 9 ಜನ ಸೇರಿದಂತೆ 113 ಅಭ್ಯರ್ಥಿಗಳಿಗೆ ಗಣ್ಯರು ಪಿ.ಎಚ್.ಡಿ.ಪದವಿ ಪ್ರದಾನ ಮಾಡಿದರು. ಇದರಲ್ಲಿ 67 ಪುರುಷ ಮತ್ತು 46 ಮಹಿಳಾ ಸಂಶೋಧನಾ ಅಭ್ಯರ್ಥಿಗಳಿದ್ದಾರೆ. ಘಟಿಕೋತ್ಸವ ಅಂಗವಾಗಿ ಒಟ್ಟಾರೆ 29,307 ಅಭ್ಯರ್ಥಿಗಳು ಪದವಿ ಹಾಗೂ ಸ್ನಾತಕ್ಕೋತ್ತರ ಪದವಿ ಪಡೆದರು.
ಘಟಿಕೋತ್ಸವದಲ್ಲಿ ಸಚಿವರಾದ ಡಾ ಎಂ ಸಿ ಸುಧಾಕರ್, ಗೋವಾದ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯಯ (ಸಿ.ಎಸ್.ಐ.ಆರ್) ನಿರ್ದೇಶಕ ಪೆÇ್ರ. ಸುನೀಲ ಕುಮಾರ್ ಸಿಂಗ್, ಗುಲಬರ್ಗಾ ವಿ.ವಿ.ಕುಲಪತಿ ಪೆÇ್ರ. ದಯಾನಂದ ಅಗಸರ್ ಅವರು ಉಪಸ್ಥಿತರಿದ್ದರು.