ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಸಿ.ಇ.ಎನ್ ಪೊಲೀಸ್ ಠಾಣೆಯ ತಂಡ ಮಹತ್ವದ ದಾಳಿಯಲ್ಲಿ ₹7.2 ಲಕ್ಷ ಮೌಲ್ಯದ 12 ಕೆ.ಜಿ. ಗಾಂಜಾ, ಎರಡು ಮೊಬೈಲ್ ಫೋನ್‌ಗಳು, ಮತ್ತು ಬಲೇನೋ ಕಾರು ವಶಕ್ಕೆ ಪಡೆದುಕೊಂಡಿದೆ. ಅಕ್ರಮ ಗಾಂಜಾ ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರ ಕಾರ್ಯಾಚರಣೆ:
ಪೊಲೀಸ್ ಅಧೀಕ್ಷಕರಾದ ಶ್ರೀ. ಕುಶಾಲ್ ಚೌಕ್ಸ್ (ಐ.ಪಿ.ಎಸ್) ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ರಾಜಾ ಇಮಾಮ್ ಕಾಸಿಂ.ಪಿ ಅವರ ಮಾರ್ಗದರ್ಶನದಲ್ಲಿ, ಸಿ.ಇ.ಎನ್ ಠಾಣಾ ಪೊಲೀಸ್ ಉಪಾದೀಕ್ಷಕರಾದ ಶ್ರೀ. ರವಿಕುಮಾರ್.ಕೆ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬೆಳಿಗ್ಗೆ 5:45ಕ್ಕೆ ಚಿಕ್ಕಬಳ್ಳಾಪುರ-ಬೆಂಗಳೂರು ಮುಖ್ಯ ರಸ್ತೆಯ ಕೆ.ವಿ. ಕ್ಯಾಂಪಸ್ ಕ್ರಾಸ್ ಬಳಿ ವಾಹನ ತಪಾಸಣೆ ವೇಳೆ, ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಸಾಗಿಸುತ್ತಿದ್ದ AP-02-BU-8487 ನಂಬರಿನ ಬಲೇನೋ ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ.
ಆರೋಪಿಗಳ ವಿವರ:
• ಎಜಾಜ್ ಖಾನ್ (32) – ಆಟೋ ಚಾಲಕ, ಚಿಕ್ಕಬಳ್ಳಾಪುರ ನಿವಾಸಿ.
• ರುಸನ್ ಅಲಿ (28) – ಚಾಲಕ, ತ್ರಿಪುರ ಮೂಲದವರು, ಚಿಕ್ಕಬಳ್ಳಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ವಶಪಡಿಸಿಕೊಂಡ ವಸ್ತುಗಳು:
• 1: 12 8.2. (₹7,20,000).
• 2 : (22: AP-02-BU-8487).
• ಎರಡು ಮೊಬೈಲ್ ಫೋನ್‌ಗಳು.
ಬಂಧಿತರಿಗೆ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆಯ 20(ಬಿ) ಕಲಂನಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗಾಂಜಾ ಜಾಲದ ಹಿಂದಿನ ತಂತ್ರಜಾಲವನ್ನು ತನಿಖೆ ನಡೆಸಲಾಗುತ್ತಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಕುಶಾಲ್ ಚೌಕ್ಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಜಾ ಇಮಾಮ್ ಕಾಸಿಂ.ಪಿ ಅವರು ತಂಡದ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ. ಅಕ್ರಮ ಮಾದಕ ವಸ್ತುಗಳ ತಡೆಗೆ ಈ ಕಾರ್ಯಾಚರಣೆ ದೊಡ್ಡ ಹಂತವಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ, ಸಾರ್ವಜನಿಕರಿಗೆ ಯಾವುದೇ ರೀತಿಯ ಅಕ್ರಮ ಮಾದಕ ವಸ್ತು ಚಟುವಟಿಕೆಗಳ ಮಾಹಿತಿ ದೊರೆತಲ್ಲಿ ತಕ್ಷಣ ಸ್ಥಳೀಯ ಠಾಣೆಗೆ ಅಥವಾ ವಿಶೇಷ ತಂಡಕ್ಕೆ ಮಾಹಿತಿ ನೀಡುವಂತೆ ವಿನಂತಿಸಿದರು.