ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ಹಾಗೂ ನರ್ಸರಿ ಮಾಲಿಕರು ಅನುಸರಿಸಬೇಕಾದ ಕ್ರಮಗಳು

0
42
Share this Article
0
(0)
Views: 1

ಬಳ್ಳಾರಿ,ಜೂ.19:

ಜಿಲ್ಲೆಯ ಮೆಣಸಿನಕಾಯಿ ಬೆಲೆಗಾರರು ಹಾಗೂ ನರ್ಸರಿ ಮಾಲೀಕರು ಉತ್ತಮ ಬೆಳೆಗಳನ್ನು ಪಡೆಯಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರಾದ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ.

*ಮೆಣಸಿನಕಾಯಿ ಬೆಳೆಗಾರರು ಹಾಗೂ ನರ್ಸರಿ ಮಾಲಿಕರಿಗೆ ಸೂಚನೆಗಳು*:

ರೈತರು ಪ್ರಸಕ್ತ ಸಾಲಿಗೆ ಮೆಣಸಿನಕಾಯಿ ಸಸಿಯನ್ನು ಜಿ.ಎಸ್.ಟಿ ನೊಂದಣಿಯನ್ನು ಹೊಂದಿರುವ ನರ್ಸರಿಗಳಿಂದಲೇ ಖರೀದಿಸಿ ನಾಟಿ ಮಾಡಿ, ಬಿಲ್ಲನ್ನು ಪಹಣಿಯಲ್ಲಿರುವ ರೈತರ ಹೆಸರಿಗೆ ಪಡೆಯುವುದು ಕಡ್ಡಾಯವಾಗಿದೆ.

ರೈತ ಬಾಂಧವರು ಒಂದೇ ಕಂಪನಿಯ ಬೀಜಗಳ ಮೇಲೆ ಅವಲಂಭಿತವಾಗದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಧಿಕ ಇಳುವರಿಯ ಇತರೆ ಕಂಪನಿಯ ಬೀಜಗಳನ್ನು ಸಹ ಖರೀದಿಸಿ ನಾಟಿ ಮಾಡಬಹುದು.

ರೈತರು ಸ್ವೀಕರಿಸಿದ ರಸೀದಿಯನ್ನು ಬೆಳೆ ಮಾರಾಟ ಆಗುವವರೆಗೂ ಜೋಪಾನವಾಗಿ ಇಟ್ಟುಕೊಳ್ಳುವುದು. ಬೀಜಗಳನ್ನು ನೇರವಾಗಿ ನಾಟಿ ಮಾಡುವ ಮುನ್ನ ಬೀಜೋಪಚಾರಗೊಳಿಸಬೇಕು.

ರೈತ ಬಾಂಧವರಿಗೆ ಮೆಣಸಿನಕಾಯಿ ಸಸಿಯನ್ನು ಮಾರಾಟಮಾಡುವ ನರ್ಸರಿ ಮಾಲಿಕರುಗಳು ತಮ್ಮ ನರ್ಸರಿಯ ಜಿ.ಎಸ್.ಟಿ ನೊಂದಣಿಯನ್ನು ಮಾಡಿಕೊಂಡ ನಂತರವೇ ತರಕಾರಿ ಸಸಿ ತಯಾರಿಸಲು ಮುಂದಾಗಬೇಕು. ನರ್ಸರಿಗಳಲ್ಲಿ ತಾವು ಉಪಯೋಗಿಸುವ ಬೀಜ, ಗೊಬ್ಬರ, ರೋಗ ಮತ್ತು ಕೀಟನಾಶಕಗಳ ವಿವರಗಳನ್ನು ವಹಿಯಲ್ಲಿ ನಮೂದಿಸಿ ಕಟ್ಟು ನಿಟ್ಟಾಗಿ ನಿರ್ವಹಿ¸ಬೇಕು.

ನರ್ಸರಿಗಳಲ್ಲಿ ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕಗಳ ವಹಿಯನ್ನು ಸಹ ನಿರ್ವಹಿಸಬೇಕು. ಹಾಗೂ ನರ್ಸರಿಗಳಲ್ಲಿ ಸಸಿಗಳನ್ನು ಉತ್ಪಾದಿಸಲು Sಣeಡಿiಟizeಜ ಕೋಕೋ ಪಿಟ್ ಅನ್ನು ಖರೀದಿಸಿ, ಉಪಯೋಗಿಸಿ ಸದರಿ ಬಿಲ್ಲುಗಳ ವಿವರವನ್ನು ವಹಿಗಳಲ್ಲಿ ನಿರ್ವಹಿಸುವುದು.

ರೈತರ ಹಿಂದಿನ ವರ್ಷದಲ್ಲಿ ಇಳುವರಿ ತೀರ ಕುಂಠಿತವಾಗಿದ್ದು, ಆರ್ಥಿಕವಾಗಿ ನಷ್ಟ ಅನುಭವಿಸಿರುವುದರಿಂದ ಪ್ರಸಕ್ತ ಸಾಲಿಗೆ ನರ್ಸರಿ ಮಾಲಿಕರು ಈ ಹಿಂದಿನ ಸಾಲಿನಂತಯೇ ರೈತರಿಗೆ ರೂ.40 ಪೈಸೆ ಧರದಲ್ಲಿಯೇ ಉತ್ತಮ ಗುಣಮಟ್ಟದ ಸಸಿಗಳನ್ನು ತಯಾರಿಸಿ ಪೂರೈಸಬೇಕು.

ನರ್ಸರಿ ಮಾಲಿಕರು ಸಸಿಗಳನ್ನು ಉತ್ಪಾದಿಸುವ ಸಮಯದಲ್ಲಿ ರೈತರಿಂದ ಯಾವ ಕಂಪನಿಯ ಬೀಜ ಖರಿದಿಸಿರುತ್ತಾರೆ ಎಂಬುವುದರ ಬಗ್ಗೆ ಖತರಿಪಡಿಸಿಕೊಳ್ಳಲು ಬೀಜ ಖರಿದಿಸಿರುವ ಜಿ.ಎಸ್.ಟಿ ಸಂಖ್ಯೆ ಹೊಂದಿರುವ ಖಿಚಿx iಟಿvoiಛಿe ಬಿಲ್ಲುಗಳ ಜಿರಾಕ್ಸ್ ಪ್ರತಿಯನ್ನು ಪಡೆದ ನಂತರವೇ ತಮ್ಮ ನರ್ಸರಿಯಲ್ಲಿ ಬೀಜವನ್ನು ಸಸಿ ತಯಾರಿಸಲು ನಾಟಿಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

——–

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here