ಜ್ಞಾನಾಭಿವೃದ್ದಿಗೆ ಗ್ರಂಥಾಲಯ ಅವಶ್ಯ ಮತ್ತು ಪರಿಸರ ಪ್ರೇಮಿ, ಕ್ರೀಯಾಶೀಲ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ

0
124
Share this Article
0
(0)
Views: 55

ಮನುಷ್ಯನ ಜೀವನದಲ್ಲಿ ಗ್ರಂಥಗಳು ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಜ್ಞಾನ ಸಂಪಾದನೆಗೆ ಗ್ರಂಥಾಲಯಗಳಲ್ಲಿ ಸಮಯ ಕಳೆಯುವುದು, ಓದುವುದು ಅವಶ್ಯವಾಗಿದೆ. ಗ್ರಂಥಗಳು ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಮನುಷ್ಯ ಬುದ್ದಿಯಲ್ಲಿ ವಿಕಸನ ಆಗುವುದಕ್ಕೆ ಗ್ರಂಥಗಳ ಓದು ಬಹುಮುಖ್ಯವಾಗಿದೆ. ಮನುಷ್ಯರನ್ನು ಮಾನವರನ್ನಾಗಿ, ನಾಗರಿಕರನ್ನಾಗಿ, ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸುವ ಜಾತ್ಯಾತೀತ ಪರಮ ಪವಿತ್ರ ಸಂಪರ್ಕಸಾಧನಗಳೆoದರೆ  ಗ್ರಂಥಭAಡಾರ. ವೈಚಾರಿಕ ಪ್ರಜ್ಞೆ, ಮಾನವೀಯ ಕುಶಲತೆ ಮತ್ತು ವಿಶ್ವ ಪಥ ಸರ್ವಸಮತೆಯ ವಿಶ್ವ ಮಾನವ ಮತದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಚೈತನ್ಯಶೀಲ ಸೆಲೆಗಳೆ ಪುಸ್ತಕಗಳು. ಅಂಥಹ ವೈವಿಧ್ಯಮಯ ಮಾಹಿತಿಯ ಎಲ್ಲ ಪುಸ್ತಕಗಳನ್ನು ವಿದ್ಯಾರ್ಥಿಗಳು ವ ಸಾರ್ವಜನಿಕರು ಖರೀದಿಸುವುದು ಅಸಾಧ್ಯ. ಆದರೆ ಅವುಗಳನ್ನು ಸುಲಭ ಸಾಧ್ಯವಾಗಿ ಲಭ್ಯವಾಗುವಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ದೊಡ್ಡದು. ಗ್ರಂಥಗಳನ್ನು ವಿಷಯವಾರು ವಿಭಾಗವಾರು ಜೋಡಿಸಿ ಓದುಗ ದೊರೆಗಳಿಗೆ ಸರಳವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡುವುದು ಗ್ರಂಥಪಾಲಕರ ಕರ್ತವ್ಯಪಾಲನೆಯಲ್ಲಿ ಯಶಸ್ವಿಯಾಗುತ್ತದೆ.  ಓದುಗರ ಭಿನ್ನ ವಿಭಿನ್ನ ರುಚಿಗನುಗುಣವಾಗಿ ಅವರ ಜ್ಞಾನತೃಷೆಯನ್ನು ತಣುಸುವ ಸಂವೇದನಾಶೀಲ ಗ್ರಂಥಪಾಲಕರು ಸಿಗುವುದು ಸಾರ್ವಜನಿಕ ಓದುಗರ ಪಾಲಿಗೆ ಸೌಭಾಗ್ಯವೆ ಸರಿ. ಅಂಥ ಸೃಜನಶೀಲ ಸೌಜನ್ಯಶೀಲ ಗ್ರಂಥಪಾಲಕರ ಸಾಲಿನಲ್ಲಿ ಅನ್ವರ್ಥವಾಗಬಲ್ಲ  ನಡೆದಾಡುವ ಗ್ರಂಥಪಾಲಕ, ಹಲವಾರು ವಿಶೇಷತೆ ಹೊಂದಿರುವ ಶ್ರೇಷ್ಠ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿಯವರನ್ನು ಬಹು ಹತ್ತಿರದಿಂದ ನಾನು  ಕಂಡಿದ್ದು ಮತ್ತು ಆ ಕುರಿತು ಅಗಷ್ಟ 12 ರಂದು ಗ್ರಂಥಾಲಯ ಪಿತಾಮಹ, ವಿಜ್ಞಾನಿ ಡಾ. ಎಸ್.ಆರ್.ರಂಗನಾಥನ್‌ರವರ ಜನ್ಮದಿನ ನಿಮಿತ್ತ ಆಚರಿಸುವ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಂದು ಡಾ. ಹೊರಕೇರಿಯವರ ಬಹು ವ್ಯಕ್ತಿತ್ವದ ಬಗ್ಗೆ ಲೇಖನ ಬರೆಯುವಲ್ಲಿ ಆಗುವ ಖುಷಿಗೆ ಎಣೆಯಿಲ್ಲ.

ಡಾ. ಹೊರಕೇರಿಯವರು ವೃತ್ತಿಯಿಂದ ಸೃಜನಶೀಲ ಗ್ರಂಥಪಾಲಕರು ಮತ್ತು ಪ್ರವೃತ್ತಿಗಳಿಂದ ಸಮಾಜ ಸೇವಕರು.  ಜಾತ್ಯಾತೀತ ಮನೋವೃತ್ತಿಯಿಂದ ಎಲ್ಲರನ್ನೂ ಅಪ್ಪಿ ಸಮಾನ ಮನಸ್ಕರಾಗಿ ಸಹೃದಯತೆಯಿಂದ ಉತ್ತರಕರ್ನಾಟಕದಲ್ಲಿ ಹಲವಾರು ಸಮಾಜ ಮುಖಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಮೂಲಕ ಸಮಾಜ ಸೇವಾ ಕಾರ್ಯ ಮಾಡುತ್ತಿರುವ ಶ್ರೀಯುತರು ಹೊರಕೇರಿ ಮಾಸ್ತರ ಪ್ರತಿಷ್ಟಾನದ ಸಂಚಾಲಕರಾಗಿ, ರಾಣ  ಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿಯಾಗಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಬಹು ಆಯಾಮಗಳಲ್ಲಿ ನಾಡನ್ನು -ಮನುಷ್ಯರಲ್ಲಿ ಐಕ್ಯತೆಯನ್ನು ಮೂಡಿಸುವ ಡಾ. ಸುರೇಶ ಡಿ. ಹೊರಕೇರಿಯವರ ವ್ಯಕ್ತಿತ್ವ ಧರ್ಮಾತೀತವಾಗಿ ಅನಾವರಣಗೊಳ್ಳುತ್ತದೆ.

ಕೆ.ಎಲ್.ಇ ಸಂಸ್ಥೆಯ ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಗ್ರಂಥಪಾಲಕರಾಗಿ, ಸದ್ಯ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾಮಾಣ ಕ ಸೇವೆ ಸಲ್ಲಿಸುತ್ತಿರುವ ಡಾ. ಸುರೇಶರವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ಇಂಗಿಸುವಲ್ಲಿ ಶಿಸ್ತು, ಶ್ರದ್ಧೆ, ತಾಳ್ಮೆ, ಮತ್ತು ಶುದ್ಧ ಕಾಯಕದ ಜೊತೆಗೆ ಪರಿಶ್ರಮವನ್ನು ಮೈಗೂಡಿಸಿಕೊಂಡಿದ್ದಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ, ಗೋಷ್ಟಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರಲ್ಲದೆ ಸಂಪನ್ಮೂಲ ವ್ಯಕ್ತಿಯಾಗಿ ಗ್ರಂಥಾಲಯ ಸಂಬoಧಿ ವಿಷಯಗಳನ್ನು ಮಂಡಿಸಿ ಜನರಲ್ಲಿ ಅರಿವು ಮೂಡಿಸಿದ್ದಾರೆ.  

ತಂದೆ ಧರ್ಮಪ್ಪ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. 2022ರಲ್ಲಿ ಲಿಂಗೈಕ್ಯರಾಗಿದ್ದು ತುಂಬಾ ನೋವಿನೊಂದಿಗೆ ಅವರ ನೆನಪಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ತಾಯಿ ರತ್ನವ್ವ ಹಾಗೂ ಒಡಹುಟ್ಟಿದ ಸಹೋದರ ಸಹೋದರಿಯರ, ಪತ್ನಿಯ ಸಹಕಾರ ಮತ್ತು ತಮ್ಮ ಮಕ್ಕಳ ಸೇವಾ ಗುಣಗಳನ್ನು, ಸಹಾಯವನ್ನು ಸದಾ ನೆನೆಯುವ ಇವರು ಸಮಾಜದ ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣವನ್ನು ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಂಡರೆ ಅವರನ್ನು ಪ್ರೋತಾಹಿಸುವ ಅವರನ್ನು ಮುದ್ದು ಮಾಡುವ ಅವರ ಕಲೆಗೆ, ಪ್ರತಿಭೆಗೆ ಸನ್ಮಾನಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಸಾಧಕರನ್ನು, ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಿಸ್ವಾರ್ಥ ಹೃದಯಿಯಾಗಿ ಗೌರವಿಸುತ್ತಾರೆ. ಅವರ ಸಾಧನೆಗೆ ಬೆಂಗಾವಲಾಗಿ ನಿಲ್ಲುತ್ತಾರೆ. ಶ್ರೇಷ್ಠೋತ್ತಮ ಗ್ರಂಥಗಳನ್ನು ಅಧ್ಯಯನ ಮಾಡಿ ಜ್ಞಾನಶೀಲರಾದ ಇವರು ಸಂಚಾರಿ ಗ್ರಂಥಾಲಯದoತೆ ಅನೇಕರಿಗೆ ವೈವಿಧ್ಯಮಯ ಮಾಹಿತಿಯನ್ನು ನೀಡಿದ್ದಾರೆ.

ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುವ ಜ್ಞಾನ ವೃದ್ಧಿಸುವ ಪುಸ್ತಕಗಳನ್ನು ಕಾಣ ಕೆಯಾಗಿ ನೀಡಿದರೆ ನಾಡಿನ ಸಂಸ್ಕೃತಿಯ ವಾಹಕವಾಗಿ ಗ್ರಂಥಗಳು ಅಮರತ್ವ ನೀಡುತ್ತವೆ ಎಂಬ ವಾಕ್ಯಕ್ಕೆ ಅನ್ವರ್ಥದಂತಿರುವ ಡಾ. ಹೊರಕೇರಿಯವರು ಎಲ್ಲಿ ಹೋದರು ಪುಸ್ತಕಗಳನ್ನು ನೀಡಿ ಅತಿಥಿ ಸತ್ಕಾರ ಮಾಡುತ್ತಾರೆ. 

ಗ್ರಂಥಪಾಲಕರ ದಿನಾಚರಣೆ ಶುಭ ಸಂದರ್ಭದಲ್ಲಿ ಈ ಘನತೆಗೆ ಕಾರಣರಾದ, ಗ್ರಂಥಪಾಲಕರ ಶ್ರೇಷ್ಠತೆಗೆ ಮುನ್ನುಡಿ ಬರೆದಿರುವ ಶಿಯಾಳಿ ರಾಮಾಮೃತ ರಂಗನಾಥನ್ (12 ಅಗಷ್ಟ 1892 -ಸೆಪ್ಟೆಂಬರ್ 1972) ರವರ ಬಗ್ಗೆ ನಾಲ್ಕು ವಾಕ್ಯ ಬರೆಯದಿದ್ದರೆ ತಪ್ಪಾದಿತು. ಡಾ. ಎಸ್.ಆರ್.ರಂಗನಾಥನ್‌ರವರು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನವನ್ನು ಕುರಿತು 60ಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ಹಾಗೂ ಸುಮಾರು 2500 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲಯದ ಪಂಚ ಸೂತ್ರಗಳು, ರಾಮಾನುಜನ್ -ದಿ ಮ್ಯಾನ್ ಆಂಡ್ ಮ್ಯಾತಮೆಟೀಷಿಯನ್, ಕ್ಲಾಸಿಫೈಡ್ ಕೆಟ್ಲಾಗ್, ಡಿಕ್ಷನರಿ ಕೆಟ್ಲಾಗ್, ಲೈಬ್ರರಿ ಅಡ್ಮೀನಿಸ್ಟೇಷನ್, ಇಂಡಿಯನ್ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮಾನುವಲ್ ಫಾರ್ ಲೈಬ್ರರಿ ಅಥಾರಿಟೀಸ್, ಲೈಬ್ರರಿಯನ್ಸ ಆಂಡ್ ಲೈಬ್ರರಿ ವರ್ಕರ್ಸ, ಕೊಲನ್ ಕ್ಲಾಸಿಫಿಕೇಷನ್ -ಕಮ್ಯುನಿಕೇಷನ್, ಕಂಪಾರಿಟಿವ್ ಸ್ಟಡಿ ಆಫ್ ಫೈವ್ ಕ್ಯಾಟಲಾಗ್ಸ, ಹೀಗೆ ಹತ್ತು ಹಲವಾರು ಗ್ರಂಥಗಳನ್ನು ಬರೆದಿದ್ದು ಡಾ. ರಂಗನಾಥನ್ ಅವರಿಗಿದ್ದ ಗ್ರಂಥಾಲಯದ ಆಳವಾದ ವಿದ್ವತ್ತನ್ನು ಮತ್ತು ಅನುಭವವನ್ನು ಎತ್ತಿ ತೋರಿಸುತ್ತವೆ. ವಿದ್ಯಾರ್ಥಿಗಳು ಓದಲೇಬೇಕಾದ ಎಲ್ಲ ಪುಸ್ತಕಗಳನ್ನು ಕೊಂಡು ಓದಲಾಗುವುದಿಲ್ಲ ಹಾಗಾಗಿ ಶಿಕ್ಷಣ ಸಂಸ್ಥೆಗಳಲ್ಲಿ  ಶೈಕ್ಷಣ ಕ ಗ್ರಂಥಾಲಯ ಸ್ಥಾಪಿಸಲಾಯಿತು. ಗ್ರಂಥಾಲಯಕ್ಕೆ ವೈಜ್ಞಾಣ ಕ ಸ್ವರೂಪ ನೀಡಿದವರು ಗ್ರಂಥ ವಿಜ್ಞಾನಿ ಡಾ. ರಂಗನಾಥನ್. 

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್.ಆರ್.ರಂಗನಾಥನ್‌ವರೇ ಪ್ರಮುಖ ಕಾರಣ. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಕಾನೂನು 1965ರಲ್ಲಿ ಸರಕಾರದಿಂದ ಸ್ವೀಕೃತವಾಗಿ 1966ರಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಅವರೇ ಮೂಲ ಪುರುಷರು. ಇವರು ಭಾರತ ದೇಶದ ಗ್ರಂಥಾಲಯ ವಿಜ್ಞಾನಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಅದ್ವಿತೀಯ ಸೇವೆಯನ್ನು ಪರಿಗಣ ಸಿ ಸರಕಾರವು 2007ರಿಂದ ಅವರ ಹುಟ್ಟು ಹಬ್ಬದ ದಿನವಾದ ಅಗಷ್ಟ 12ರಂದು  ಗ್ರಂಥಪಾಲಕರ ದಿನಾಚರಣೆಯಾಗಿ ಆಚರಿಸಬೇಕು ಎಂದು ಆದೇಶ ಹೊರಡಿಸಿ ಇಂದಿಗೆ 17ವರ್ಷ ಸಂದಿದ್ದು; ಪ್ರತಿ ವರ್ಷ ದೇಶದ ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಯತಾವತ್ತಾಗಿ ಗ್ರಂಥಪಾಲಕರ ದಿನಾಚರಣೆ ನಡೆಯುತ್ತಿದ್ದು ಡಾ. ಸುರೇಶ ಡಿ. ಹೊರಕೇರಿಯವರಂತಹ ಸೌಜನ್ಯಪೂರ್ಣ ಗ್ರಂಥಪಾಲಕರಿoದ ಜ್ಞಾನಾರ್ಥಿಗಳಿಗೆ ಸಿಗಬೇಕಾದ ವಿದ್ವತ್ಪೂರ್ಣ ಹೊತ್ತಿಗೆ, ಗ್ರಂಥಗಳು, ಕೃತಿಗಳು, ಪುಸ್ತಕಗಳು ಮಸ್ತಕ್ ಬೆಳಗಿ ಸಾಮರಸ್ಯದ ನಾಡ ನಿರ್ಮಾಣಕ್ಕೆ ಕೊಡುಗೆ ನೀಡುವಂತಾಗಿವೆ. 

ಸುಖ ಹಂಚುವ ಧ್ಯಾನ ಕೇಂದ್ರವೇ ಗ್ರಂಥಾಲಯ, ಗ್ರಂಥಾಲಯದ ದಿವ್ಯ ಮೌನದ ಕಂಪನ ವ್ಯಕ್ತಿಯ ಮನಸ್ಸನ್ನು ವಿಕಸನಗೊಳಿಸುತ್ತದೆ. ಆದ್ದರಿಂದ ಪ್ರತಿಯೊಂದು ಮಾಹಿತಿಗಾಗಿ ಜ್ಞಾನದಾಹಿಗಳು ಗ್ರಂಥಾಲಯಕ್ಕೆ ಮೊರೆ ಹೋಗುವುದು ಅನಾದಿಕಾಲದಿಂದಲೂ ಬೆಳೆದು ಬಂದಿದ್ದು; ಈಗ ಡಿಜಿಟಲ್ ಲೈಬ್ರರಿ, ಗೂಗಲ್ ಸರ್ಚಎಂಜಿನ್, ಆನ್‌ಲೈನ್, ವರ್ಚುವಲ್ ಲೈಬ್ರರಿ, ಸಂಚಾರಿ ಗ್ರಂಥಾಲಯವು ಮಾರ್ಗದರ್ಶಿಯಾಗಿವೆ. ಯಾವುದೇ ಕರಾರು ಹಾಕದೆ ಪುಸ್ತಕಗಳು ಖುಷಿ ಕೊಟ್ಟರೆ, ವ್ಯಕ್ತಿಗಳು ಹಲವಾರು ಕಂಡಿಷನ್ ಹಾಕಿಯು ಖುಷಿ ಕೊಡಲು ವಿಫಲರಾಗುತ್ತಾರೆ ಎಂಬುದೆ ವಿಪರ್ಯಾಸ ಅಲ್ಲವೇ?

ಪುಸ್ತಕ ಪ್ರೇಮಿ ಡಾ.ಬಿ,ಆರ್.ಅಂಬೇಡ್ಕರರವರು ಸತತ ಅಧ್ಯಯನದಿಂದ ವಿಶ್ವಜ್ಞಾನಿಯಾಗಿ ನಮಗೆ ಸರ್ವ ಸಮತೆ ಭಾರತ ಸಂವಿಧಾನ ಗ್ರಂಥ ಬರೆದುಕೊಟ್ಟಿದ್ದಾರೆ ಸತ್ಯ ಹರಿಶ್ವಂದ್ರ ಜೀವನ ಚರಿತ್ರೆ ಗ್ರಂಥ ಮಹಾತ್ಮ ಗಾಂಧಿಜೀಯವರನ್ನು ಶ್ರೇಷ್ಠ ಶಕ್ತಿಯಾಗಿ ರೂಪಿಸಿ ಭಾರತ ಸ್ವತಂತ್ರ ಪಡೆಯುವಲ್ಲಿ ಪ್ರೇರಣೆ ನೀಡಿದೆ.   ಗ್ರಂಥಾಲಯಗಳೆoದರೆ ಬೆಳಕಿನ ಆಲಯ ಅದು ಧ್ಯಾನ ಮಂದಿರ ಜ್ಞಾನದೇಗುಲ, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ. ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ ಎಂಬ ಬಸವಣ್ಣನವರ ಸಾಲುಗಳು ಮನದ ಕತ್ತಲೆಯನ್ನು ಕಳೆಯುತ್ತವೆ. ಅಸಂಖ್ಯಾತ ಕೃತಿ ಪುಷ್ಪಗಳಿಂದ  ನಮ್ಮ ಕಣ್ಣು ತೆರಸಿದ ಸಾಹಿತಿಗಳಿಗೆ ಸಾವಿರದ ಶರಣು.ಪ್ರತಿಯೊಬ್ಬರೂ ಸಾಧ್ಯವಾದಷ್ಟು ಓದಿ ತಮ್ಮ ಜೀವನದ ದೃಷ್ಟಾಂತವನ್ನು ಕಂಡುಕೊಳ್ಳಬೇಕು ಎಂದು ಹೇಳಿದ ಕವಿ ಕುವೆಂಪುರವರ ಮಾತಿನಂಗೆ ಜೀವದ್ವನಿಗಳಾಗೋಣ.

ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾದ್ಯಾಪಕ ಡಾ.ಗುರುರಾಜ ಹಡಗಲಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ. ಇವರ ಇಡೀ ಕುಟುಂಬವೇ ಶಿಕ್ಷಣರಂಗದಲ್ಲಿ ಅಪಾರವಾದ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರರಾದ ಕೆಎಲ್‌ಇ ಸಂಸ್ಥೆಯ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಲಿಂಗರಾಜ ಡಿ. ಹೊರಕೇರಿ, ಕಲಘಟಗಿ ಗುಡ್ ನ್ಯೂಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಹೇಶ ಡಿ. ಹೊರಕೇರಿ,  ಸಹೋದರಿಯರಾದ ಲ್ಯಾಮಿಂಗ್ಟನ್ ಬಾಲಕರ ಫ್ರೌಡ ಶಾಲೆಯ ಶಿಕ್ಷಕಿ ಶಕುಂತಲಾ ಶಾಂತಪ್ಪ ಹೂಗಾರ, ಮತ್ತು ಬಿಜಾಪುರ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ಪ್ರೊ ಜಯಶ್ರೀ ಬಸವರಾಜ ಅಳ್ಳಗಿ, ಅವರ ಮಾರ್ಗದರ್ಶನ ಮತ್ತು ಪತ್ನಿ ಸುಪ್ರಿಯಾ, ಮಕ್ಕಳಾದ ಸಹನಾ, ಸೋಹನ, ಸುಜಯ ಅವರ ಸಹಕಾರವನ್ನು ಸದಾ ನೆನೆಯುವ ಸುರೇಶ ಸರಳತೆ ಮತ್ತು ಸೇವಾ ಮನೋಭಾವನೆಯನ್ನು ರೂಢಿಸಿಕೊಂಡಿದ್ದಾರೆ.

ಶಿಸ್ತು, ಪ್ರಾಮಾಣ ಕತೆ, ಶ್ರದ್ಧೆ, ತಾಳ್ಮೆಯಿಂದ ಕಾಯಕವನ್ನು ಮಾಡುವ ಸುರೇಶ ಅವರು ಎಲ್ಲರನ್ನು ಪ್ರೀತಿಸುವ, ಗೌರವಿಸುವ ಗುಣವನ್ನು ಹೊಂದಿದ್ದಾರೆ. ಅಶಿಸ್ತು ಹಾಗೂ ಅನ್ಯಾಯವನ್ನು ಎಂದೂ ಸಹಿಸಿಕೊಳ್ಳುವುದಿಲ್ಲ. ಪ್ರಾಮಾಣ ಕರಿಗೆ ತೊಂದರೆ ತಪ್ಪಿದ್ದಲ್ಲ ಎಂಬ ಮಾತಿನಂತೆ ಸುರೇಶ ಅವರು ಅಶಿಸ್ತು ಹಾಗೂ ಅನ್ಯಾಯದಿಂದ ವರ್ತಿಸುವ ಜನರೊಂದಿಗೆ ಬಹಳ ಅಂತರ ಕಾಯ್ದುಕೊಳ್ಳುವ ಸ್ವಭಾವ ಹೊಂದಿರುವುದರಿoದ ತೀವ್ರ ಪ್ರತಿರೋಧ, ನೋವು, ಹಿಂಸೆಯನ್ನು ಅನುಭವಿಸುವುದರೊಂದಿಗೆ ಹಿನ್ನಡೆಗೂ ಒಳಗಾಗಿದ್ದಾರೆ. ಆದರೂ ಹಸನ್ನಮುಖಿ ಸದಾ ಸುಖಿ ಅನ್ನುವ ಹಾಗೆ ಸದಾ ನಗ ನಗುತ್ತಾ ಛಲ ಬಿಡದೆ ತಮ್ಮ ಕಾರ್ಯದಲ್ಲಿ ಕ್ಷಮತೆ, ಬದ್ದತೆ, ಪ್ರಾಮಾಣ ಕತೆಗೆ ಕುಂದು ಉಂಟಾಗದoತೆ ಹೆಚ್ಚರ ವಹಿಸಿದ್ದಾರೆ. ಸುರೇಶ ಅವರ ತಾಳ್ಮೆ, ಸಹನೆಯನ್ನು ದೌರ್ಬಲ್ಯ ಎಂದು ತಿಳಿದುಕೊಂಡವರು ಉಂಟು. ಯಾರು ಏನೇ ಅಂದರೂ ತಮ್ಮ ಕಾಯಕವನ್ನು ನಿಷ್ಟೆಯಿಂದ ಮುಂದುವರಿಸಿಕೊoಡು ಸಾಗಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯದೊಂದಿಗೆ ಪಠ್ಯೇತರ  ಚಟುವಟಿಕೆಯಲ್ಲೂ ಉತ್ಸಾಹದಿಂದ ಭಾಗವಹಿಸುತ್ತಿದ್ದ ಶ್ರೀಯುತರು ಎನ್‌ಸಿಸಿ ಯಲ್ಲಿ ಸಿ ಸರ್ಟಿಪಿಕೇಟ್ ಪಡೆದಿದ್ದಾರಲ್ಲದೆ ಅತ್ಯುತ್ತಮ ಎನ್‌ಸಿಸಿ ಕೆಡೆಟ್ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲಿ ಅಭ್ಯಾಸಿಸುವಾಗ ಪ್ರಥಮ ವರ್ಷದ ವಿದ್ಯಾರ್ಥಿಗಳು ಸುರೇಶ ಅವರಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಿದ್ದರು. 2008ರಲ್ಲಿ ಹುಬ್ಬಳ್ಳಿಯಲ್ಲಿ ಕೆ.ಎಲ್.ಇ ಸಂಸ್ಥೆ, ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯವನ್ನು ಪ್ರಾರಂಭಿಸಿದಾಗ ಗ್ರಂಥಾಲಯ ಅಭಿವೃದ್ಧಿಯ ಸಂಪೂರ್ಣ ಜವಾಬ್ಧಾರಿಯನ್ನು ಸುರೇಶ ಅವರಿಗೆ ವಹಿಸಿದ್ದರು. ಸುರೇಶ ಆ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು ಅವರ ಸಾಮರ್ಥಕ್ಕೆ ಇನ್ನೂ ಹೆಚ್ಚು ಬಲಬಂದoತಾಗಿದೆ.

ಸಮಾಜಮುಖಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು, ರಾಣ ಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಕರ್ನಾಟಕ ಇಂಜನೀಯರಿAಗ್ ಕಾಲೇಜ ಲೈಬ್ರರಿ ಪ್ರೊಫೆಷನಲ್ ಅಸೋಸಿಯೆಷನದ ಉಪಾಧ್ಯಕ್ಷರಾಗಿಯೂ, ಬಸವ ಕೇಂದ್ರ, ಕರ್ನಾಟಕ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹುಬ್ಬಳ್ಳಿ ಘಟಕ, ಶಿವರುದ್ರ ಟ್ರಸ್ಟ, ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ.

ಶ್ರೀಯುತರನ್ನು ಬಸವ ಜಯಂತಿ ಅಂಗವಾಗಿ ಅಖಿಲ್ ಕರ್ನಾಟಕ ಬಸವ ಬಳಗವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಬಸವ ಪ್ರಶಸ್ತಿ, ವಿಶ್ವ ಕನ್ನಡ ಬಳಗ ಜಿಲ್ಲಾ ಮಟ್ಟದ ಅತ್ಯುತ್ತಮ ಗ್ರಂಥಪಾ¯ಕ ಪ್ರಶಸ್ತಿ, ಸ್ವ-ರಕ್ಷಾ ಶಿಕ್ಷಣ ಸಂಸ್ಥೆ ಉತ್ತಮ ಗ್ರಂಥಪಾ¯ಕ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಾತೋಶ್ರೀ ದಿವಂಗತ ಪಾರ್ವತೆಮ್ಮ ಬ. ಹೊಂಬಳ ದತ್ತಿ ಕರ‍್ಯಕ್ರಮದಲ್ಲಿ ಶ್ರೇಷ್ಠ ಗ್ರಂಥಪಾಲಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕರ್ನಾಟಕ ರಾಜ್ಯ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು, ಧಾರವಾಡ ಜಿಲ್ಲಾ ಘಟಕವು ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಜೀವನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಸುರೇಶ ಅವರಿಗೆ ಗ್ರಂಥಾಲಯ ತಜ್ಞರಾದ ಪ್ರೊ.ಕೆ.ಎಸ್.ದೇಶಪಾಂಡೆ ಅವರು ಪತ್ರ ಬರೆದು ಶ್ಲಾಘಿಸಿದ್ದಾರೆ. ರೋಟರಿ ಕ್ಲಬ್ ಉತ್ತರ ವಲಯ, ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಸಿಟಿ, ಬಸವ ಕೇಂದ್ರ, ಪ್ರೊಬಸ್ ಕ್ಲಬ್, ಹಿರಿಯರ ನಾಗರಿಕರ ವೇದಿಕೆ, ಚಿನ್ಮಯ ಪದವಿ ಮಹಾವಿದ್ಯಾಲಯ, ಇನ್ನರ್ ವೀಲ್ ಕ್ಲಬ್, ಶ್ರೀ ಕೃಷ್ಣ ಗುರುಕುಲ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೊತ್ಸವದಲ್ಲಿ ಅತ್ಯುತ್ತಮ ಪಾಲಕರು ಎಂದು ಸುರೇಶ ಡಿ. ಹೊರಕೇರಿ ಅವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಡಾ.ಅಶೋಕ ಶೆಟ್ಟರ, ಕುಲಪತಿ ಪಿ.ಜಿ.ತೇವರಿ, ಕಾರ್ಯನಿರ್ವಾಹÀ ಡೀನ್ ಡಾ.ಬಿ.ಎಲ್ ದೇಸಾಯಿ, ರಜಿಸ್ಟಾçರ ಡಾ.ಬಿ.ಎಸ್.ಅನಾಮಿ, ಭಾರತೀಯ ಗ್ರಂಥಾಲಯ ಸಂಘ (ಇಂಡಿಯನ್ ಲೈಬ್ರರಿ ಅಸೋಸಿಯೇಶನ್, ಐ.ಎಲ್.ಎ,), ನವದೆಹಲಿ, ಮಾಜಿ ಅಧ್ಯಕ್ಷರು, ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ನಿವೃತ್ ಪ್ರಾದ್ಯಾಪಕ, ದಾವಣಗೇರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಡಿ.ಕುಂಬಾರ, ಬಸವ ಕೇಂದ್ರದ ಮಾಜಿ ಅಧ್ಯಕ್ಷ ಡಾ.ಬಿ.ವ್ಹಿ.ಶಿರೂರ, ಪ್ರೊ.ಎಸ್.ವಿ.ಪಟ್ಟಣಶೆಟ್ಟಿ, ಡಾ.ವಿ.ಬಿ.ನಿಟಾಲಿ, ಜಿ.ಬಿ.ಹೊಂಬಳ, ಪ್ರೊ ಗುರುರಾಜ ಎಸ್.ಹಡಗಲಿ, ಡಾ. ಮಲ್ಲಿಕಾರ್ಜುನ ಎನ್. ಮೂಲಿಮನಿ, ಅವರ ಪ್ರೇರಣೆಯಿಂದಾಗಿ ಶೈಕ್ಷಣ ಕ ಮತ್ತು ಸಾಮಾಜಿಕ ರಂಗಗಳಲ್ಲಿ ಕರ‍್ಯ ಮಾಡಲು ಸಾಧ್ಯವಾಗಿದೆ ಎಂದು ಸುರೇಶ ಅವರು ಸೌಜನ್ಯದಿಂದ ನುಡಿಯುತ್ತಾರೆ.

ಸದಾ ಕ್ರೀಯಾಶೀಲರಾಗಿರುವ ಡಾ. ಸುರೇಶ ಡಿ. ಹೊರಕೇರಿ ಯವರು ಒಳ್ಳೆಯ ಕಾರ್ಯಕ್ರಮ ನಿರೂಪಣೆ ಕೌಶಲ ಹೊಂದಿದ್ದಾರೆ.ಇಬ್ಬರು ಮುಖ್ಯಮಂತ್ರಿಗಳು ಭಾಗವಹಿಸಿದ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ.ಹಲವಾರು ಸಾಹಿತ್ಯ, ಸಂಗೀತ, ನಾಟಕ, ಸಂಸ್ಕೃತಿಕ ಮುಂತಾದ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. ಬಸವ ಪರಿಸರ ಸರಂಕ್ಷಣಾ ಸಮಿತಿಯ ಮೂಲಕ ಜಲ ಸಂಕ್ಷರಣೆ, ಪರಿಸರ ಜಾಗೃತಿ, ಸಸಿಗಳನ್ನು ನೆಡುವ ಮುಂತಾದ ಕಾರ್ಯಕ್ರಮಗಳನ್ನು ನಿರಂತರ ಮಾಡುತ್ತಾ ಬಂದಿದ್ದಾರೆ. ಬ.ಪ.ಸಂ.ಸಮಿತಿ ವತಿಯಿಂದ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಿ,ಗೌರವಿಸಿದ್ದಾರೆ.ಬಸವ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್, ಗ್ರಂಥಪಾಲಕರ ಸಂಘ ಮುಂತಾದ ಸಂಘಟನೆಗಳೊoದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಇವರು ಬರೆದ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಡಾ. ಸುರೇಶ ಡಿ. ಹೊರಕೇರಿ ಅವರಿಂದ ಸಮಾಜಕ್ಕೆ, ಗ್ರಂಥಾಲಯಕ್ಕೆ ಇನ್ನೂ ಹೆಚ್ಚು-ಹೆಚ್ಚು ಸೇವೆ ಸಲ್ಲಿಸುವಂತಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸೋಣ. 

ಸಹೋದರರಾದ ಡಾ. ಲಿಂಗರಾಜ ಧರಮಪ್ಪ ಹೊರಕೇರಿ ಅವರು ಕೆ.ಎಲ್.ಇ. ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾಗಿದ್ದಾರೆ. ಡಾ. ಮಹೇಶ ಧರಮಪ್ಪ ಹೊರಕೇರಿ ಅವರು ಕಲಘಟಗಿಯ ಗುಡ್ ನ್ಯೂಜ್ ಪ್ರಥಮ ದರ್ಜೆ ಮಹಾವಿದ್ಯಾಲಯದ  ಪ್ರಾಚಾರ್ಯರಾಗಿದ್ದು,  ಉತ್ತಮ ಭಾಷಣಕಾರರು, ಹಾಸ್ಯ ಕಲಾವಿಧರು, ನಾಟಕ, ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಸಂಘಟನೆಯಲ್ಲಿದ್ದಾರೆ. ಡಾ. ಸುರೇಶ ಧರಮಪ್ಪ ಹೊರಕೇರಿ ಅವರು ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿದ್ದಾರೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ವೃತ್ತಿಪರ ಸಂಘಟನೆ, ಮುಂತಾದ ಚಟುವಟಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಸಹೋದರಿಯರಾದ ಶಕುಂತಲಾ ಧರಮಪ್ಪ ಹೊರಕೇರಿ (ಶಕುಂತಲಾ ಶಾಂತಪ್ಪ ಹೂಗಾರ) ಅವರು ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಶಿಕ್ಷಕಿ ಆಗಿದ್ದಾರೆ. ಜಯಶ್ರೀ ಧರಮಪ್ಪ ಹೊರಕೇರಿ (ಸುಮಂಗಲಾ ಬಸವರಾಜ ಅಳ್ಳಗಿ) ಅವರು ವಿಜಯಪುರ ಬಿ.ಎಲ್.ಡಿ.ಇ ಸಂಸ್ಥೆಯ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕದಿಂದ ಸೇವೆ ಸಲ್ಲಿಸುತ್ತಿರುವ ಹೊರಕೇರಿ ಕುಟುಂಬದ ಐವರು ಸದಸ್ಯರಾದ ಡಾ. ಲಿಂಗರಾಜ ಧರಮಪ್ಪ ಹೊರಕೇರಿ,  ಡಾ. ಮಹೇಶ ಧರಮಪ್ಪ ಹೊರಕೇರಿ,  ಶಕುಂತಲಾ ಧರಮಪ್ಪ ಹೊರಕೇರಿ (ಶಕುಂತಲಾ ಶಾಂತಪ್ಪ ಹೂಗಾರ), ಡಾ. ಸುರೇಶ ಧರಮಪ್ಪ ಹೊರಕೇರಿ,ಜಯಶ್ರೀ ಧರಮಪ್ಪ ಹೊರಕೇರಿ (ಸುಮಂಗಲಾ ಬಸವರಾಜ ಅಳ್ಳಗಿ) ಅವರನ್ನು  ಮಾಜಿ ಮುಖ್ಯಮಂತ್ರಿಗಳು, ಸಂಸದ ಜಗದೀಶ ಶೆಟ್ಟರ, ಶಾಸಕ ಮಹೇಶ ತೆಂಗಿನಕಾಯಿ, ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ, ರುದ್ರಾಕ್ಷೀಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಗೌರವಿಸಿದರು. ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಪ್ರಕಾಶ ಬೆಂಡಿಗೇರಿ ಸೇರಿದಂತೆ ಹಲವಾರು ಗಣ್ಯರು, ಬಂಧುಗಳು, ನಿಖಿಲ್, ನಿಕಿತಾ, ಅಭಿಷೇಕ, ಅಕ್ಷತಾ ಪ್ರಜ್ವಲ್, ಅಪೂರ್ವ, ಪ್ರಗತಿ, ಅನೂಷಾ,  ಸಹನಾ, ಸೋಹನ, ಸುಜಯ ಶಾಂತಪ್ಪ ವಿ. ಹೂಗಾg, ಸುಮನ್, ಮಮತಾ, ಸುಪ್ರೀಯಾ, ಸಾವಿರಾರು ಜನರು ಭಾಗವಹಿಸಿದ್ದರು. ಇದೊಂದು ಅದ್ಭುತ, ಮರೆಯಲಾರದ ಸಮಾರಂಭವಾಗಿತ್ತು ಎಂದು ಡಾ. ಸುರೇಶ ಸ್ಮರಿಸುತ್ತಾರೆ. 

ಸುಭಾಷ್ ಹೇ. ಚವ್ಹಾಣ,ಶಿಕ್ಷಕ ಸಾಹಿತಿಗಳು, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ   ಶಾಲೆ, ಮಂಜುನಾಥನಗರ, ಹುಬ್ಬಳ್ಳಿ ಶಹರ 7975026724

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here