ಬೆಂಗಳೂರು ನಗರ ಜಿಲ್ಲೆ, ಜೂನ್ 25:
ಚಿಕ್ಕಬಾಣಾವರ ಪುರಸಭೆ ಕಾರ್ಯಾಲಯ ವತಿಯಿಂದ 2024-25ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಡಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್ )ಅಡಿಯಲ್ಲಿ ನಗರ ವ್ಯಾಪ್ತಿಯಲ್ಲಿ ಇರುವ ಬಡತನ ರೇಖೆಗಿಂತ ಕೆಳಗಿರುವವರ ಕುಟುಂಬಗಳ ಮಹಿಳಾ ಸದಸ್ಯರುಗಳು ಗುಂಪು ರಚನೆ ಹಾಗೂ ಪುರುಷರು ಮತ್ತು ಮಹಿಳೆಯರಿಗೆ “ಸ್ವಯಂ ಉದ್ಯೋಗ ಕಾರ್ಯಕ್ರಮ ಮತ್ತು ಇ.ಡಿ.ಪಿ.ತರಬೇತಿ, ಸ್ವ ಸಹಾಯ ಗುಂಪು ರಚನೆ (ಮಹಿಳೆಯರು), ಪ್ರದೇಶ ಮಟ್ಟದ ಒಕ್ಕೂಟ ರಚನೆ ಮತ್ತು ಗುಂಪು ಉದ್ದಿಮೆಗಳಿಗೆ (ಕ್ರೆಡಿಟ್ ಲಿಂಕೇಜ್) ವಿವಿಧ ಕಾರ್ಯಕ್ರಮಗಳ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
18 ರಿಂದ 45 ವರ್ಷದೊಳಗಿರುವವರು ಆಸಕ್ತ ಫಲಾನುಭವಿಗಳು ಪುರಸಭೆ ಕಾರ್ಯಾಲಯ ಚಿಕ್ಕಬಾಣಾವರ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇಲ್ಲಿಗೆ ಅರ್ಜಿ ಜೊತೆಗೆ ಪ್ರಸಕ್ತ ಸಾಲಿನ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಚೀಟಿ, ರೇಷನ್ ಕಾರ್ಡ್, ವಿದ್ಯಾರ್ಹತೆ ಪ್ರಮಾಣ ಪತ್ರ, ರೂ.20 ಛಾಪಾ ಕಾಗದ ಮೇಲೆ ಡೇ-ನಲ್ಮ್ ಯೋಜನೆಯ ಘೋಷಣಾ ಪ್ರಮಾಣ ಪತ್ರವನ್ನು ನೋಟರಿಯಿಂದ ದೃಢೀಕರಿಸಿ ಅರ್ಜಿಯನ್ನು ಜುಲೈ 15ರೊಳಗೆ ಸಲ್ಲಿಸಬಹುದು ಎಂದು ಚಿಕ್ಕಬಾಣಾವರ ಪುರಸಭೆ ಕಾರ್ಯಾಲಯದ ಡೇ-ನಲ್ಮ್ ಶಾಖೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.