ಜೂನ್ 29 ರಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ತೃತೀಯ ವಾರ್ಷಿಕ ಘಟಿಕೋತ್ಸವ
ಬೆಂಗಳೂರು, ಜೂನ್ 24:
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ತೃತೀಯ ವಾರ್ಷಿಕ ಘಟಿಕೋತ್ಸವವು ಜೂನ್ 29 ರಂದು ಬೆಳಿಗ್ಗೆ 11.30ರ ಘಂಟೆಗೆ ಜ್ಞಾನಜ್ಯೋತಿ ಸಭಾಂಗಣ, ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣ, ಅರಮನೆ ರಸ್ತೆ, ಬೆಂಗಳೂರು-01 ಇಲ್ಲಿ ನಡೆಯಲಿದೆ.
ಎಲ್ಲಾ ಚಿನ್ನದ ಪದಕ ವಿಜೇತ / ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ಪಿಹೆಚ್.ಡಿ. ಪದವಿ ಪಡೆಯಲಿರುವ ಸಂಶೋಧನಾ ವಿದ್ಯಾರ್ಥಿಗಳು ಪ್ರಾಂಶುಪಾಲರು ನೀಡಿರುವ ಗುರುತಿನ ಪತ್ರದೊಂದಿಗೆ, ಆಮಂತ್ರಣ ಪತ್ರಿಕೆ ಮತ್ತು ಬ್ಯಾಡ್ಜ್‍ಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಮೌಲ್ಯಮಾಪನ ಕುಲಸಚಿವರ ಕಛೇರಿ, ಪರೀಕ್ಷಾ ವಿಭಾಗ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಬೆಂಗಳೂರು-560001 ಇಲ್ಲಿ ಜೂನ್ 25 ರಂದು ಕಛೇರಿ ಕೆಲಸದ ಸಮಯದಲ್ಲಿ ಖುದ್ದಾಗಿ ಬಂದು ಪಡೆಯುವಂತೆ ಪ್ರಕಟಣೆ ತಿಳಿಸಿದೆ.