ಬೆಂಗಳೂರು, ಆಗಸ್ಟ್ 30
ಕರ್ನಾಟಕ ಲೋಕಸೇವ ಆಯೋಗದ ಅಧಿಸೂಚನೆ ಸಂಖ್ಯೆ. ಇ(2)1170/2017-18 ಪಿಎಸ್‍ಸಿ ದಿನಾಂಕ: 01-09-2017 ಹಾಗೂ ಸೇರ್ಪಡೆ ಅಧಿಸೂಚನೆ ಸಂಖ್ಯೆ ಇ(2)1534/2017-18 ದಿನಾಂಕ: 24-11-2017 ಮತ್ತು ತಿದ್ದುಪಡಿ ಅಧಿಸೂಚನೆ ಸಂಖ್ಯೆ ಇ(3)731/2019-20/ಪಿ.ಎಸ್.ಸಿ ದಿನಾಂಕ: 18-12-2019ರನ್ವಯ ಅಧಿಸೂಚಿಸಿರುವ ರಾಜ್ಯದ ವಿವಿಧ ಇಲಾಖೆ ಹಾಗೂ ನ್ಯಾಯಾಂಗ ಘಟಕಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಎರಡನೇ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಸೆಪ್ಟೆಂಬರ್ 30 ರಂದು ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಅಯೋಗದ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.