ನಗರದಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ವಿಭಾಗವು ನಾಗರೀಕರು ಹಾಗೂ ವಿದ್ಯಾರ್ಥಿಗಳಿಗೆ *“ಡೆಂಘೀ ವಾರಿಯರ್”* ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ.
ಡೆಂಘೀ ವಿರುದ್ಧ ಹೋರಾಡಲು ಪಾಲಿಕೆ ಆರೋಗ್ಯ ವಿಭಾಗದ ಜೊತೆ ನಾಗರೀಕರು ಹಾಗೂ ವಿದ್ಯಾರ್ಥಿಗಳು ಕೈ ಜೋಡಿಸುವ ನಿಟ್ಟಿನಲ್ಲಿ ಈ ವಿನೂತನ ಕ್ರಮವನ್ನು ಕೈಗೊಳ್ಳಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಎ.ಎನ್.ಎಂಗಳು ಮನೆ-ಮನೆಗಳಿಗೆ ಭೇಟಿ ನೀಡಿ ನಾಗರೀಕರಲ್ಲಿ ಡೆಂಘೀ ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತಾರೆ. ಇನ್ನೂ ಆರೋಗ್ಯ ವೈದ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಡೆಂಘೀ ನಿಯಂತ್ರಣದ ಕುರಿತು ವಿಧ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಪಾಲಿಕೆಯು ಡೆಂಘೀ ನಿಯಂತ್ರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಡೆಂಘೀ ನಿಯಂತ್ರಣಕ್ಕಾಗಿ ನಾಗರೀಕರು ಅಥವಾ ವಿದ್ಯಾರ್ಥಿಗಳು ತಮ್ಮ ಮನೆ(@nammahomes)ಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಯಾವ ರೀತಿ ಇತರರಿಗೆ ಅರಿವು ಮೂಡಿಸಲಾಗಿದೆ ಎಂಬುದರ ಕುರಿತು ಕಿರು ಚಿತ್ರಗಳನ್ನು ಮಾಡಿ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಟ್ ಮಾಡಿ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರ ಸಾಮಾಜಿಕ ಜಾಲತಾಣವಾದ *Facebook ಮತ್ತು Twitter ಖಾತೆ(@BBMPSplHealth)ಗೆ ಟ್ಯಾಗ್* ಮಾಡಬೇಕು. ಅದರ ಜೊತೆಗೆ ಈ https://drive.google.com/drive/folders/1ePawzLcQO6aAGP2AxszxsbYtsHvbGGMO ಲಿಂಕ್ ಅಥವಾ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಾಗರೀಕರು ಹಾಗೂ ವಿದ್ಯಾರ್ಥಿಗಳು ವೀಡಿಯೊಗಳನ್ನು ಅಪ್‌ಲೋಡ್ ಮಾಡಬೇಕು.
ಸಾಮಾಜಿಕ ಜಾಲತಾಣ ಹಾಗೂ ಲಿಂಕ್/ಕ್ಯೂ.ಆರ್ ಕೋಡ್ ನಲ್ಲಿ ವೀಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನಾಗರೀಕರಾದರೆ ಹೆಸರು, ದೂರವಾಣಿ ಸಂಖ್ಯೆ, ವಾರ್ಡ್, ಸ್ಥಳವನ್ನು ನಮೂದಿಸಿರಬೇಕು. ವಿದ್ಯಾರ್ಥಿಗಳಾದರೆ ಹೆಸರು, ದೂರವಾಣಿ ಸಂಖ್ಯೆ, ಯಾವ ತರಗತಿ, ಯಾವ ಶಾಲೆ ಹಾಗೂ ಸ್ಥಳ ನಮೂದಿಸಿ ವೀಡಿಯೋ ಅಪ್ಲೋಡ್ ಮಾಡಬೇಕು.
ಜುಲೈ 25ರೊಳಗೆ ವೀಡಿಯೋ ಅಪ್ಲೋಡ್ ಮಾಡಲು ಅವಕಾಶ:
ಡೆಂಘೀ ನಿಯಂತ್ರಿಸುವ ಕುರಿತು ಅತ್ಯುತ್ತಮ ವಿಡಿಯೋ ಮಾಡಿದ 5 ವಿದ್ಯಾರ್ಥಿಗಳಿಗೆ “ಡೆಂಘೀ ವಾರಿಯರ್” ಎಂಬ ಸಂಖ್ಯೆಗಳನ್ನು ನೀಡಲಾಗುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಜುಲೈ 25 ರವರೆಗೆ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಪ್ಲೋಡ್ ಮಾಡಿದ ವೀಡಿಯೋಗಳಲ್ಲಿ ಹೆಚ್ಚು ಲೈಕ್ಸ್ ಬಂದಿರುವ 5 ವೀಡಿಯೋಗಳು ಹಾಗೂ ಯಾವ ಶಾಲೆಗಳಲ್ಲಿ ಹೆಚ್ಚು ಡೆಂಗೀ ವಾರಿಯರ್ಸ್ ಆಗುತ್ತಾರೆ ಅಂತಹ ಶಾಲೆಗಳನ್ನು ಆಯ್ಕೆ ಮಾಡಿ ಪಶಸ್ತಿ ನೀಡಲಾಗುವುದೆಂದು *ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್* ರವರು ತಿಳಿಸಿರುತ್ತಾರೆ.