ಮುಖ್ಯಮಂತ್ರಿಗಳ ಕಚೇರಿಯಿಂದ
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸೀನಪ್ಪನ ಹಳ್ಳಿ ಗ್ರಾಮದ ಅಂಬಾಭವಾನಿ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ ನಂತರ ಅಸ್ವಸ್ಥಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಂಡಿರುತ್ತಾರೆ.
ಶಾಲೆಯ ಸಮೀಪದ ಮಾವಿನ ತೋಟದಲ್ಲಿ ವಿದ್ಯುತ್ ಜೆಟ್ ಮೂಲಕ ಕೀಟನಾಶಕ ಮದ್ದು ಸಿಂಪಡಿಸಿದ್ದರ ಪರಿಣಾಮ ಅದರ ವಾಸನೆ ಸೇವಿಸಿದ್ದರ ಪರಿಣಾಮ ಹಾಗೂ ಬಿಸಿಯೂಟದಲ್ಲಿ ಹಾಲಿನ ಪೌಡರ್‌ನಿಂದ ತಯಾರಿಸಿದ ಮೊಸರನ್ನು ಸೇವಿಸಿದ್ದರಿಂದ ಮಕ್ಕಳು ಹಾಗೂ ಶಿಕ್ಷಕರಿಗೆ ಹೊಟ್ಟೆನೋವು, ತಲೆಸುತ್ತು ಕಂಡುಬಂದಿರುತ್ತದೆ. ಈ ಪೈಕಿ ಇಬ್ಬರು ಮಕ್ಕಳಿಗೆ ಜೀರ್ಣಾಂಗವ್ಯೂಹದ ಸೋಂಕು ಇರುವುದು ದೃಢಪಟ್ಟಿರುತ್ತದೆ.
ಶಾಲೆಯ ಮುಖ್ಯ ಶಿಕ್ಷಕರಿಗೆ ಸದರಿ ವಿಷಯವಾಗಿ ನೋಟಿಸ್ ನೀಡಲಾಗಿದೆ ಹಾಗೂ ಶಾಲೆಯ ಅಡುಗೆ ಕೋಣೆಯ ಸ್ವಚ್ಛತೆ ಕಾಯ್ದುಕೊಂಡು, ಮಕ್ಕಳಿಗೆ ಶುದ್ಧ ಆಹಾರ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವಂತೆ ಸೂಚಿಸಲಾಗಿದೆ.
ಸ್ಥಳೀಯವಾಗಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳ
@osd_cmkarnataka `ಎಕ್ಸ್ʼ ಖಾತೆಗೆ ಟ್ಯಾಗ್ ಮಾಡಿ.