ಶಿವಮೊಗ್ಗ ಆ.29
ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ‘ಪ್ಲಾಂಟ್ ಫಾರ್ ಮದರ್’ ಅಭಿಯಾದ ಅಂಗವಾಗಿ ಆ.29 ರಂದು ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಭಾರತದ ಪ್ರಧಾನ ಮಂತ್ರಿಗಳು 2024 ರ ಜೂನ್ 5 ರಂದು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಜಾಗತಿಕವಾಗಿ ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಸಲುವಾಗಿ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವ ಪ್ಲಾಂಟ್ ಫಾರ್ ಮದರ್ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಈ ಅಭಿಯಾನದಡಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗಾಗಿ 2024 ರ ಸೆಪ್ಟೆಂಬರ್ ವೇಳೆಗೆ ದೇಶದಾದ್ಯಂತ 80 ಕೋಟಿ ಸಸಿಗಳನ್ನು ಮತ್ತು 2025 ರ ಮಾರ್ಚ್ ವೇಳೆಗೆ 140 ಕೋಟಿ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದೆ. ಈ ಅಭಿಯಾನದ ಒಂದು ಭಾಗವಾಗಿ ಆಗಸ್ಟ್ 29 ರಂದು ಭಾರತ ಸರ್ಕಾರದ ಕೃಷಿ ಸಚಿವರು, ಕೃಷಿ ಅನುಸಂಧಾನ ಪರಿಷತ್‌ನ ಕ್ಯಾಂಪಸ್‌ನಲ್ಲಿ ಒಂದು ಎಕರೆ ಪ್ರದೇಶದಲ್ಲಿಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಭಾಗವಾಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆ.29 ರಂದು ರೈತರೊಡಗೂಡಿ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಪ್ಲಾಂಟ್ ಫಾರ್ ಮದರ್ ಅಭಿಯಾನವನ್ನು ಕೈಗೊಂಡು 100 ಸಸಿಗಳನ್ನು ನೆಡಲಾಯಿತು. ಸೊರಬದ ಪ್ರಗತಿಪರ ರೈತರಾದ ವೀರಪ್ಪನಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಬಿ.ಸಿ.ಹನುಮಂತಸ್ವಾಮಿ, ಡಾ.ಸಿ.ಸುನಿಲ್, ಡಾ.ಎನ್.ಸುಧಾರಾಣಿ, ವಿಜ್ಞಾನಿ ಭರತ್ ಕುಮಾರ್, ತಾಂತ್ರಿಕ ಸಿಬ್ಬಂದಿಗಳು, ವಿದ್ಯಾರ್ಥಿಗಳು, 30 ಜನರೈತ ಮಹಿಳೆಯರು ಪಾಲ್ಗೊಂಡಿದ್ದರು.