ಬೆಂಗಳೂರು, ಸೆಪ್ಟೆಂಬರ್ 22
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಕೃತಿ, ವನ್ಯಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ವನ್ಯಜೀವಿ ಹಾಗೂ ಪ್ರಕೃತಿಯ ಸಂರಕ್ಷಣೆಗಾಗಿ ಕೆಲಸ ಮಾಡಲು ಯುವ ಮನಸ್ಸುಗಳನ್ನು ಪ್ರೇರೇಪಿಸಲು “ಜೂ ಕ್ಲಬ್” ನ್ನು ಆಯೋಜಿಸುತ್ತಿದೆ. ವನಸಿರಿ ಮತ್ತು ವನ್ಯಜೀವಿ ಸಂಕುಲನಗಳನ್ನು ಸಂರಕ್ಷಿಸಲು ಯುವ ಮನಸ್ಸನ್ನು ಪ್ರೇರೇಪಿಸುವ ಉದ್ದೇಶದಿಂದ ಸದರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು 15 ವಾರಗಳ ಕಾರ್ಯಕ್ರಮವಾಗಿದ್ದು, 13 ನೇ ಅಕ್ಟೋಬರ್, 2024 ರಿಂದ ಭಾನುವಾರದಂದು ನಡೆಸಲಾಗುತ್ತದೆ. ಕಾರ್ಯಕ್ರಮವು ಪ್ರತಿ ಭಾನುವಾರ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಇರುತ್ತದೆ. ಸದರಿ ಕಾರ್ಯಕ್ರಮದಲ್ಲಿ 10 ರಿಂದ 18 ವರ್ಷ ಪ್ರಾಯದ ಮಕ್ಕಳು ಭಾಗವಹಿಸಬಹುದಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣೆ, ನಿರ್ವಹಣೆ, ಪೆÇೀಷಣೆ, ನಡವಳಿಕೆ, ಜಾಗೃತಿ ಮೊದಲಾದವುಗಳ ಬಗ್ಗೆ ತಿಳಿಸಿಕೊಡಲಾಗುವುದು ಹಾಗೂ ಕ್ಷೇತ್ರ ಭೇಟಿಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಈ ವಿಷಯದಲ್ಲಿ ತಜ್ಞರೊಂದಿಗೆ ಸಮಾಲೋಚನೆ ಹಾಗೂ ಚರ್ಚೆ ನಡೆಸಲು ಅವಕಾಶ ಮಾಡಿಕೊಡಲಾಗುವುದು.
ಆಸಕ್ತರು ಅಕ್ಟೋಬರ್ 06ರ ಒಳಗೆ
https://bannerughattabiopark.org/education.html ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಅರ್ಜಿಯ ಮೂಲಕ ನೋಂದಾಯಿಸಿಕೊಳ್ಳಬಹುದು. ನೋಂದಣಿಯನ್ನು ಪೂರ್ಣಗೊಳಿಸಲು ಅಗತ್ಯವಿರುವ ದಾಖಲೆಗಳು, ಜೂ ಕ್ಲಬ್ ಶುಲ್ಕ ಹಾಗೂ ಅವಶ್ಯ ಹೆಚ್ಚಿನ ವಿವರಗಳೊಂದಿಗೆ ದೃಡೀಕರಣ ಇಮೇಲ್‍ನ್ನು ಕಳುಹಿಸಲಾಗುವುದು. ಸದರಿ ಕಾರ್ಯಕ್ರಮದಲ್ಲಿ ಗರಿಷ್ಠ 60 ವಿದ್ಯಾರ್ಥಿಗಳನ್ನು ಪರಿಗಣಿಸಲಾಗುತ್ತಿದ್ದು, ಮೊದಲು ಬಂದವರಿಗೆ ಆಧ್ಯತೆ ನೀಡಲಾಗುವುದು. ನೋಂದಣಿ ಶುಲ್ಕ ರೂ. 1000/- ಆಗಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಯಾವುದೇ ನೊಂದಣಿ ಶುಲ್ಕವಿರುವುದಿಲ್ಲ