ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ವತಿಯಿಂದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯ ಅಂಗವಾಗಿ ಇಂದು ಷುಗರ್ ಫ್ಯಾಕ್ಟರಿ ಸರ್ಕಲ್ ಹತ್ತಿರ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ ರಮಾ ಅವರು ಚಾಲನೆ ನೀಡಿದರು.
ಜಾಥಾದಲ್ಲಿ ಶಾಲಾ ಮಕ್ಕಳು “ಬಾಲ ಕರ್ಮಿಕ ಪದ್ಧತಿ ಶಿಕ್ಷಾರ್ಹ ಅಪರಾಧ”, ಬಾಲಕಾರ್ಮಿಕತೆ ಅಳಿಯಲಿ, ಮಾನವೀಯತೆ ಬೆಳೆಯಲಿ, ಬಾಲಕಾರ್ಮಿಕತೆಗೆ 20,000/- ರೂ ದಂಡ ಹಾಗೂ ಸೆರೆವಾಸ, ಮುಗ್ದತೆ ರಕ್ಷಿಸಿ, ಬಾಲಕಾರ್ಮಿಕತೆ ಶಿಕ್ಷಿಸಿ ಎಂಬ ಘೋಷವಾಕ್ಯ ಹಾಗೂ ಪ್ರಚಾರ ಪಲಕದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಜಾಥಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಉಪಸ್ಥಿತರಿದ್ದರು.