ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ (2020ರ ಕರ್ನಾಟಕ ಅಧಿನಿಯಮ 53)ರ ಕಲಂ 157 ಹಾಗೂ 319ನೇ ಪ್ರಕರಣಗಳೊಂದಿಗೆ ಓದಿಕೊಂಡು 318ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಉಪವಿಧಿಗಳು, 2024ರ ಕರಡು ಅಧಿಸೂಚನೆಗೆ ಸರ್ಕಾರವು ಅನುಮೋದನೆ ನೀಡಿರುತ್ತದೆ.
ಮುಂದುವರಿದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಉಪವಿಧಿಗಳು, 2024ರ ಕರಡು ಆವೃತ್ತಿಯನ್ನು ದಿನಾಂಕ:19.07.2024 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಅಧಿಸೂಚನೆಯ ದಿನಾಂಕದಿಂದ 30 ದಿನಗಳ ಒಳಗಾಗಿ ಪ್ರಸ್ತಾವಿತ ಉಪವಿಧಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆ/ಸಲಹೆಗಳು ಇದ್ದಲ್ಲಿ, ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ನರಸಿಂಹರಾಜ ಚೌಕ, ಬೆಂಗಳೂರು-560002 ರವರಿಗೆ ಸಲ್ಲಿಸಲು ಜಾಹೀರಾತು ವಿಭಾಗದ ಉಪ ಆಯುಕ್ತರು ಕೋರಿರುತ್ತಾರೆ.
*ಹೆಚ್ಚಿನ ಮಾಹಿತಿಗಾಗಿ ಜಾಹೀರಾತು ಕರಡು ಅಧಿಸೂಚನೆ ಪ್ರತಿಯನ್ನು ಲಗತ್ತಿಸಲಾಗಿದೆ.*