Views: 0
ಬೆಂಗಳೂರು: ಡಿ.06:
ಬಿವಿಕೆ ಅಯ್ಯಂಗರ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಶ್ವಿಮ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಬಿವಿಕೆ ಅಯ್ಯಂಗರ್ ರಸ್ತೆ ಚಿಕ್ಕಪೇಟೆ ಜಂಕ್ಷನ್ ನಿಂದ ಸುಲ್ತಾನ್ ಪೇಟೆ ಜಂಕ್ಷನ್ ವರೆಗಿನ 190 ಮೀಟರ್ ಉದ್ದದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿ, ಈಗಾಗಲೇ ಒಂದು ಬದಿಯ ಕಾಮಗಾರಿ ಪೂರ್ಣಗೊಂಡಿರುತ್ತದೆ. ಇನ್ನೊಂದು ಬದಿಯಲ್ಲಿ ಈಗಾಗಲೇ ಕಾಂಕ್ರೀಟ್ ಹಾಕಿದ್ದು, ಕ್ಯೂರಿಂಗ್ ಆಗುತ್ತಿರುತ್ತದೆ. ಡಿಸೆಂಬರ್ 15 ರೊಳಗಾಗಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚನೆ ನೀಡಿದರು.
ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಮಧ್ಯೆಯಿರುವ ಹಳೆಯ ಮೀಡಿಯನ್ ಗಳನ್ನು ತೆಗೆದು, ಹೊಸದಾಗಿ ಫ್ರೀಕಾಸ್ಟ್ ಮೀಡಿಯನ್ಸ್ ಗಳನ್ನು ಹಾಕಬೇಕು. ಪಾದಚಾರಿ ಮಾರ್ಗ ಒಂದೇ ಸಮನಾಗಿರುವಂತೆ ಮಾಡಬೇಕು. ಸುಲ್ತಾನ್ ಪೇಟೆ ಜಂಕ್ಷನ್ ಭಾಗ ತುಂಬಾ ಅದಗೆಟ್ಟಿದ್ದು, ಅದನ್ನು ಕೂಡಲೆ ದುರಸ್ತಿಪಡಿಸಲು ಸೂಚನೆ ನೀಡಿದರು.
ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ:
ಚಾಮರಾಜಪೇಟೆ ಜೆಜೆಆರ್ ನಗರ ಜನರಲ್ ಆಸ್ಪತ್ರೆಯ ಆವರಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಜನರಲ್ ಹಾಗೂ ಹೆರಿಗೆ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, 100 ಹಾಸಿಗೆಗಳ ವ್ಯವಸ್ಥೆಯಿರಲಿದೆ. ಕಟ್ಟಡದ ಕಾಮಗಾರಿಗೆ ವೇಗ ನೀಡಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಜೆಜೆಆರ್ ನಗರ ಜನರಲ್ ಆಸ್ಪತ್ರೆಯಲ್ಲಿ ನಾಗರೀಕರಿಗೆ ಸಿಗುವ ಸೌಲಭ್ಯಗಳ ಕುರಿತು ವೈದ್ಯರ ಬಳಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಜನರಲ್ ಹಾಗೂ ಹೆರಿಗೆಗಾಗಿ 30 ಹಾಸಿಗೆಗಳ ವ್ಯವಸ್ಥೆಯಿದ್ದು, ಹೆಚ್ಚಿನ ವೈದ್ಯರ ಅವಶ್ಯಕತೆಯಿದ್ದಲ್ಲಿ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು.
ಆಸ್ಪತ್ರೆ ಆವರಣದಲ್ಲಿ ಮ್ಯಾನ್ ಹೋಲ್ ನಿಂದ ಸೀವೇಜ್ ನೀರು ಬರುವುದನ್ನು ಗಮನಿಸಿ ಕೂಡಲೆ ಸರಿಪಡಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಬಿನ್ನಿಮಿಲ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪರಿಶೀಲನೆ:
ಬಿನ್ನಿಮಿಲ್ ರಸ್ತೆಯ 220 ಮೀಟರ್ ಉದ್ದದ ರಸ್ತೆಗೆ 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇದರಲ್ಲಿ ಪಾದಚಾರಿ ಮಾರ್ಗ, ಬೀದಿ ದೀಪ, ಡಕ್ಟ್ ಅಳವಡಿಸಲಾಗಿರುವುದನ್ನು ಪರಿಶೀಲಿಸಿ, ರಸ್ತೆಯಲ್ಲಿ ನೀರು ನಿಲ್ಲದಂತೆ ರಸ್ತೆ ಬದಿಯ ಚರಂಡಿಗಳಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಗ್ರೇಟಿಂಗ್ಸ್ ಗಳ ವ್ಯವಸ್ಥೆ ಸರಿಯಾಗಿರುವಂತೆ ಸೂಚಿಸಿದರು.
ನಿರಾಶ್ರಿತರ ಕೇಂದ್ರ ಸರಿಯಾಗಿ ನಡೆಸಲು ಸೂಚನೆ:
ಗೂಡ್ ಶೆಡ್ ರಸ್ತೆಯಲ್ಲಿ ನಿರ್ಗತಿಕರ ರಾತ್ರಿ ವಸತಿ ರಹಿತ ತಂಗುದಾಣ ಪರಿಶೀಲಿಸಿ, ಅಲ್ಲಿದ್ದ ನಿರಾಶ್ರಿತರೊಟ್ಟಿಗೆ ಮಾತನಾಡಿ, 30 ನಿರಾಶ್ರಿತರು ತಂಗಲು ವ್ಯವಸ್ಥೆಯಿದ್ದು, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಸತಿಯಿಲ್ಲದಿರುವ ನಿರಾಶ್ರಿತರನ್ನು ಹುಡಿಕಿ ಇಲ್ಲಿ ಆಶ್ರಯ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೆಜೆಸ್ಟೆಕ್ ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಿ:
ಮೆಜೆಸ್ಟಿಕ್ ನಲ್ಲಿ 350 ಮೀಟರ್ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ರಸ್ತೆ ನಿರ್ಮಾಣ ಮಾಡುತ್ತಿದ್ದು, ರಸ್ತೆಯ ಅರ್ಧ ಭಾಗಗಕ್ಕೆ ಈಗಾಗಲೇ ವೈಟ್ ಟಾಪಿಂಗ್ ಮಾಡಲಾಗಿದ್ದು, ಇನ್ನು ಅರ್ಧಭಾಗವನ್ನು ಶೀಘ್ರ ಪೂರ್ಣಗೊಳಿಸಿ ತಿಂಗಳಾಂತ್ಯದೊಳಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಷ್ಟಪತ ಕಾರಿಡಾರ್ ಕಾಮಗಾರಿ ಪರಿಶೀಲನೆ:
ನಗರದ ಅಷ್ಟಪತ ಕಾರಿಡಾರ್ ನಲ್ಲಿ ರೈಲ್ವೆ ಇಲಾಖೆಯಿಂದ ರೈಲ್ವೆ ಹಳಿ ಕೆಳಗೆ ಫ್ರೀಕಾಸ್ಟ್ ಬಾಕ್ಸ್ ಅಳವಡಿಸಿದ್ದು, ರಿಟೈನಿಂಗ್ ವಾಲ್ ಹಾಗೂ ಸ್ಥಳದಲ್ಲಿರುವ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯತ್ತಿದೆ. ಈ ಸಂಬಂಧ ರೈಲ್ವೆ ಇಲಾಖೆ ಜೊತೆ ಸಮನ್ವಯ ಸಾಧಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಂಟಿ ಆಯುಕ್ತರಾದ ಸಂಗಪ್ಪ, ಮುಖ್ಯ ಅಭಿಯಂತರರಾದ ಶಶಿ ಕುಮಾರ್, ಲೋಕೇಶ್, ಉಪ ಆಯುಕ್ತರಾದ ಶ್ರೀನಿವಾಸ್ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.