ಬೆಂಗಳೂರು, ಜೂನ್ 11:
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 13, 16, 19 ಮತ್ತು 23ರಂದು ನಡೆಯಲಿರುವ ಅಂತರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಗೆ ಬಂದು ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಬೇಡಿಕೆಗನುಗುಣವಾಗಿ ಬೆಂ.ಮ.ಸಾ.ಸಂಸ್ಥೆಯಿಂದ ವ್ಯವಸ್ಥಿತ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (ಹೆಚ್.ಎ.ಎಲ್ ರಸ್ತೆ)ಕ್ಕೆ ಎಸ್.ಬಿ. ಎಸ್-1ಕೆ, ಸರ್ಜಾಪುರಕ್ಕೆ ಜಿ-2, ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ)ಗೆ ಜಿ-3, ಬನ್ನೇರುಘಟ್ಟ ಮೃಗಾಲಯಕ್ಕೆ ಜಿ-4, ಜನಪ್ರಿಯ ಟೌನ್‍ಷಿಪ್ (ಮಾಗಡಿ ರಸ್ತೆ)ಗೆ ಜಿ-7, ಆರ್.ಕೆ. ಹೆಗಡೆ ನಗರ (ನಾಗವಾರ, ಟ್ಯಾನರಿ ರಸ್ತೆ)ಗೆ ಜಿ-10, ಹೊಸಕೋಟೆಗೆ 317 ಜಿ ಹಾಗೂ ಬನಶಂಕರಿಗೆ ಬಸ್ ಸಂ 13 ಸಂಚಾರಿಸಲಿವೆ ಎಂದು ಬಿ.ಎಂ.ಟಿ.ಸಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.