ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

0
37
Share this Article
0
(0)
Views: 0

ಬೆಂಗಳೂರು, ಜೂನ್ 05:

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಅರಣ್ಯ ಹಾಗೂ ಪರಿಸರ ವಿಜ್ಞಾನ ವಿಭಾಗ ಮತ್ತು ಯು.ಎ.ಎಸ್.ಕ್ಯಾಪಸ್ ಶಾಲೆ, ಹೆಬ್ಬಾಳದ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ–2024” ಅಂಗವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ.ಸುರೇಶ್, ಅವರು ಗಿಡ ನೆಡುವುದರ ಮೂಲಕ ಪರಿಸರ ದಿನಚಾರಣೆಗೆ ಚಾಲನೆ ನೀಡಿದರು.

 ಈ ವೇಳೆ ಮಾತನಾಡಿ ಅವರು,ಈ ಸುಡು ಬಿಸಿಲಿನಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಈಗಾಗಲೇ ಪರಿಸರದ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ, ಹವಾಮಾನ ವೈಪರಿತ್ಯವನ್ನು ಕಡಿಮೆ ಮಾಡಲು ಪರಿಸರವನ್ನು ಕಾಪಾಡಿ, ಉಳಿಸಿ ಅದನ್ನು ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು. ಶಾಲಾ ಶಿಕ್ಷಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಪ್ರತಿ ತರಗತಿಯಲ್ಲಿ ಒಂದು ಗಂಟೆ ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ ಮತ್ತು ನÀಮ್ಮ ಸುತ್ತಮುತ್ತಲಿರುವ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಪಾಠಮಾಡುವುದು ಅವಶ್ಯಕ. ಇದನ್ನು ವಿದ್ಯಾರ್ಥಿಗಳು ಅರಿತುಕೊಂಡು ತಮ್ಮ ಮನೆ ಮತ್ತು ತಮ್ಮ ಸುತ್ತಮುತ್ತಲಿರುವ ಜನಗಳಿಗೂ ಸಹ ಪರಿಸರದ ಅರಿವನ್ನು ಮೂಡಿಸಲು ಇಂತಹ ಪರಿಸರದ ದಿನಾಚರಣೆ ಆಚರಿಸುವ ಮೂಲಕ ತಮ್ಮದೇ ಆದಕೊಡುಗೆಯನ್ನು ಈ ಪರಿಸರದ ಒಳಿತಿಗೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಬಿ.ಎಲ್.ಜಿ.ಸ್ವಾಮಿ, ಉಪ ಅರಣ್ಯ ಸಂಪಕ್ಷಣಾಧಿಕಾರಿ, ಬಿ.ಬಿ.ಎಂ.ಪಿ, ಬೆಂಗಳೂರು ರವರು, ಮಕ್ಕಳಲ್ಲಿ ಅವರಿಗೇ ಗೊತ್ತಿಲ್ಲದ ಕೆಲವು ಕಾಯಿಲೆಗಳು ಬರುತ್ತಿರುವುದಕ್ಕೆ ಕಾರಣ ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು. ನಿಮ್ಮ ಶಾಲೆಯು ಕೃಷಿ ಪರಿಸರದಲ್ಲಿರುವುದರಿಂದ ನಿಮಗೆ ಸದ್ಯಕ್ಕೆ ದೊರೆತಿರುವ ಶಾಲೆಯ ಪರಿಸರ ಮತ್ತು ಸ್ಥಳವು ಅತ್ಯುತ್ತವಾಗಿದೆ. ಆದರೆ, ಈ ಸೌಲಭ್ಯಗಳು ಇತರೆ ಶಾಲಾ ಮಕ್ಕಳಿಗೆ ಸಿಗುತ್ತಿಲ್ಲ ಅದ್ದರಿಂದ ನೀವು ತುಂಬಾ ಅದೃಷ್ಟಶಾಲಿಗಳಾಗಿರುವಿರಿ. ನಮ್ಮ ದೇಶದಲ್ಲಿ ಅಧಿಕ ಜನ ಸಂಖ್ಯೆಯಿದ್ದರೂ ಸಹ ನಾವು ನಮ್ಮ ಸುತ್ತಮುತ್ತಲಿರುವ ಪರಿಸರವನ್ನು ಕಾಪಾಡಿಕೊಂಡು ಅಭಿವೃದ್ಧಿ ಕಡೆ ಸಾಗುತ್ತಾ ಇಂತಹ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಭಾರತದಲ್ಲಿ ಪರಿಸರ ಉಳಿಸುವುದಕ್ಕೆ ಶಾಲಾಮಕ್ಕಳ ಕೊಡುಗೆ ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸಂಜೆ ಮನೆಗೆ ಹೋಗುವಾಗ ತಾವು ತಂದಿರುವ ನೀರಿನಲ್ಲಿ ಉಳಿದ ಭಾಗವನ್ನು ಪೋಲು ಮಾಡದೆ ಆ ನೀರನ್ನು ಮರಗಳಿಗೆ ಹಾಕುವುದರಿಂದ ಸಹ ಪರಿಸರವನ್ನು ಸಂರಕ್ಷಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಾ. ಕೆ.ಸಿ ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು,ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ರವರುಮುಖ್ಯ ಅತಿಥಿಗಳಾಗಿ ಭಾಗವಸಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here