ಅಹಂಕಾರದ ಕಿಚ್ಚು ಎದೆಯಲಿ ಹಚ್ಚಿ, ಹೊರಗೆ ದೀಪ ಹಚ್ಚಿದರೆ, ಹೊರಾಂಗಣದ ಬೆಳಕು – ನಮ್ಮಾತ್ಮವ ಹೇಗೆ ಬೆಳಗಿತು? ರಾಮನ ಗೆಲುವಿನ ಸಂಕೇತವೇ, ರಾವಣನ ಸಂಹಾರ! ನಮ್ಮ ಮನಸಿನ ರಾವಣನೇ, ನಮ್ಮಲಿನ ಅಹಂ.. ಅದನ ಸುಡದೆ, ರಾಮನ ಪೂಜಿಸಿದರೆ ಏನು ಫಲ?
ಆಸೆ ದುರಾಸೆ, ಮೋಹಗಳ ನಡುವೆ ನಮ್ಮಂತರಂಗದಲೇ ಯುದ್ಧ ನಡೆದಿರುವಾಗ, ಹೊರಗಿನ ಶತ್ರುಗಳ ಭಾದೆ ಏಕೆ? ಕೈ ಯಲ್ಲಿ ಕೆಂಡವಿಡಿದು, ಪರರ ಸುಡುವೆನೆಂದರೆ ಅದು ಮೊದಲು ನಮ್ಮನೇ ಸುಡುವುದಲವೇ? ನಾವೇ ಶಾಶ್ವತ ಇಲ್ಲದಿರುವಾಗ, ದ್ವೇಷ ಅಸೂಯೆಗಳನ್ನೇಕೆ ಅಮರಗೊಳಿಸುವುದು?
ಮಣ್ಣಿನ ಹಣತೆಯೊಳಗೆ ದೀಪ ಬೆಳಗುತ್ತೇವೆ ; ಮನದ ಅಂಗಳದಲ್ಲೇಕೆ ಕೋಪ ಬೆಳಸುತ್ತೇವೆ? ಸುಖ ನೆಮ್ಮದಿ ಕಳೆದುಕೊಂಡು,ಅನ್ಯರಿಂದ ಬಯಸುತ್ತೇವೆ…ಸಿಗದಾಗ ಮರುಗುತ್ತೇವೆ. ದ್ವೇಷವೇ ನಮ್ಮ ಜೀವನದ ಕಗ್ಗತ್ತಲಿನ ರಾತ್ರಿ!! ಅದ ಹೊಡದೋಡಿಸಲು ಹಚ್ಚೋಣವೇ ಪ್ರೀತಿ, ಸ್ನೇಹಗಳ ಜ್ಯೋತಿ… ಬೆಳಗಿ ದೀಪ ದೀಪಗಳ, ದೀಪಾವಳಿ ಆಚರಿಸಿ!!
-ಜ್ಯೋತಿ,
ರಾಮಾಮೂರ್ತಿ ನಗರ,ಬೆಂಗಳೂರು