ಮಾನಸಿಕ ಆರೋಗ್ಯ ಸಮಾಲೋಚಕರ ಹುದ್ಧೆಗೆ ಅರ್ಜಿ ಆಹ್ವಾನ

0
522
Share this Article
0
(0)
Views: 478
   ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್. 24
 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ 2024-25ನೇ ಸಾಲಿನ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ(ಎನ್.ಎಂ.ಹೆಚ್.ಪಿ) ಅಡಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರನ್ನು ಗೌರವಧನದ ಮೇರೆಗೆ ನಿಯೋಜಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 
    ವಿದ್ಯಾರ್ಹತೆ: Clinical Psychologist/Master of arts in psychologist/Master of science in psychology
ಕರ್ತವ್ಯ: ಸಮಾಲೋಚಕರಾಗಿ ಕಾಲೇಜು, ನಗರ ಕೋಳಗೇರಿಗಳಲ್ಲಿ ಮಾನಸಿಕ ಅಸ್ವಸ್ತರನ್ನು ಸಮಾಲೋಚನೆ ಮಾಡುವುದು. ವಾರಕ್ಕೋಮ್ಮೆ ಪ್ರತಿವಾರ ತಿಂಗಳ ಒಟ್ಟು 2 ದಿನಗಳಲ್ಲಿ ಮತ್ತು ನಗರ ಕೋಳಗೇರಿಗಳಲ್ಲಿ ವಾರಕ್ಕೊಮ್ಮೆ ತಿಂಗಳ ಒಟ್ಟು 4 ದಿನಗಳಲ್ಲಿ ಇಡೀ ಒಂದು ಕೆಲಸದ ದಿನಕ್ಕೆ ರೂ.1000/-(ಒಂದು ಸಾವಿರ ಮಾತ್ರ) ಕೆಳಗಿನ ಷರತ್ತುಗಳೊಂದಿಗೆ(ಎನ್.ಎಂ.ಹೆಚ್.ಪಿ)ಅಡಿಯಲ್ಲಿ ಸಮಾಲೋಚಕರಾಗಿ ಕೆಲಸ ಮಾಡಬೇಕಾಗಿರುತ್ತದೆ.
 
      ಈ ಕೆಲಸವು ಎನ್.ಎಂ.ಹೆಚ್.ಪಿ ಅಡಿಯಲ್ಲಿ ನಿಗದಿತ ದಿನಗಳು ಮತ್ತು ನಿಗದಿತ        ರೂ.1000/- ಗೌರವಧನದೊಂದಿಗೆ ತಾತ್ಕಾಲಿಕ ನಿಯೋಜನೆಯಾಗಿರುತ್ತದೆ. ಈ ಹುದ್ದೆಯಲ್ಲಿ ಬಡ್ತಿ ಶಾಶ್ವತ ಕೆಲಸ ಬದಲಾವಣೆ ಹಕ್ಕು ಪಡೆದಿರುವುದಿಲ್ಲ. ಈ ಹುದ್ದೆಯು ಒಂದು ಹಣಕಾಸು ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಶಾಶ್ವತ ಹುದ್ದೆಯನ್ನಾಗಿ ಮಾಡಲು ಯಾವುದೇ ಹಕ್ಕು ಪಡೆದಿರುವುದಿಲ್ಲ. ಎನ್.ಎಂ.ಹೆಚ್.ಪಿ ಕೌನ್ಸಿಲಿಂಗ್ ಕೆಲಸ ಮಾಡುವ ದಿನಗಳಂದು ಬೇರೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಿಲ್ಲ. ಈ ಹುದ್ದೆಯು ತಾತ್ಕಾಲಿಕ ನಿಯೋಜನೆಯಾಗಿರುವುದರಿಂದ ಯಾವುದೇ ಟಿ.ಎ ಮತ್ತು ಡಿ,ಎಯನ್ನು ನೀಡುವುದಿಲ್ಲ. ಫಲಾನುಭವಿಯ ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿರುತ್ತದೆ. ಕೆಲಸ ಮಾಡುವಾಗ ಯಾವುದೇ ಅಹಿತಕರ ಘಟನೆ ಸಂಭಂವಿಸಿದ್ದಲ್ಲಿ ಸರ್ಕಾರ ಜವಾಬ್ದಾರಿಯಾರುವುದಿಲ್ಲ. ಕೌನ್ಸಿಲಿಂಗ್ ಸಮಯದಲ್ಲಿ (Medical Ethics) ಕಟ್ಟುನಿಟ್ಟಾಗಿ ಅನುಸರಿಸಬೇಕು. ಪ್ರತಿ ತಿಂಗಳು ಕೆಲಸದ ಪ್ರಗತಿ ವರದಿಯನ್ನು ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಜಿಲ್ಲಾ  ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಜಿಲ್ಲಾಡಳಿತ ಭವನ, ಬೀರಸಂದ್ರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಇಲ್ಲಿಗೆ ಸಲ್ಲಿಸಬಹುದು.
 
ಆಸಕ್ತಿಯುಳ್ಳವರು 2024 ಸೆಪ್ಟೆಂಬರ್ 25 ರಿಂದ 2024 ಆಕ್ಟೋಬರ್ 08ರ ವರೆಗೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಕೊಠಡಿ ಸಂಖ್ಯೆ: 207 2ನೇ ಮಹಡಿ ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here