ಮೈಸೂರು ದಸರಾ ಮಹೋತ್ಸವ – ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಅಹ್ವಾನ

0
483
Share this Article
0
(0)
Views: 433

ಬೆಂಗಳೂರು, ಸೆಪ್ಟೆಂಬರ್ 21 

ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2024 ರ ಅಂಗವಾಗಿ, ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ದಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ  ಅಕ್ಟೋಬರ್ 04 ರಿಂದ 07 ರ ವರೆಗೆ ನಡೆಯುವ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಅಹ್ವಾನಿಸಲಾಗಿದೆ.

ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಛಾಯಾಚಿತ್ರ, ಅನ್ವಯ ಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳಿರುತ್ತದೆ. ಸಾಂಪ್ರದಾಯಕ ಚಿತ್ರಕಲೆ, ಸಾಂಪ್ರದಾಯಕ ಶಿಲ್ಪಕಲೆ, ಕರಕುಶಲ ಕಲೆ/ಇನ್ಲೇ ವಿಭಾಗಗಳಲ್ಲಿ ಹವ್ಯಾಸಿ ವಿಭಾಗವಿರುವುದಿಲ್ಲ, ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನಗಳನ್ನು ನೀಡಲಾಗುವುದು. ಕಲಾಕೃತಿಗಳನ್ನು ಸೆಪ್ಟೆಂಬರ್ 17 ರಿಂದ 30  ರೊಳಗೆ ಬೆಳಗ್ಗೆ 10.30 ರಿಂದ ಸಂಜೆ 5.30 ರವರೆಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು-570011, ಸಂಸ್ಥೆಯ ಕಚೇರಿಗೆ, ಕಚೇರಿ  ಅವಧಿಯಲ್ಲಿ ಸಲ್ಲಿಸುವುದು. ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು ಸಂಪೂರ್ಣ ವಿವರವನ್ನು ಸ್ವಯಂ ದೃಢೀಕರಣದೊಂದಿಗೆ ಉಪಸಮಿತಿಗೆ ತಲುಪಿಸುವುದು.

ವಿಶೇಷ ಸೂಚನೆ:
ಕಲಾಕೃತಿಯು ಅಕ್ಟೋಬರ್ 2023ರ ನಂತರ ರಚಿಸಿರಬೇಕು ಹಾಗೂ ಬಹುಮಾನ ಪಡೆದ ಕಲಾಕೃತಿ ಯಾಗಿರಬಾರದು. ಒಂದು ವಿಭಾಗಕ್ಕೆ ಎರಡು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಕಳುಹಿಸಬಹುದು. ಯಾವುದೇ ಒಂದು ವಿಭಾಗದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಯ್ಕೆಯಾದ ಕಲಾಕೃತಿಯನ್ನು ಮಾತ್ರ ಪ್ರದರ್ಶಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.

ಕಲಾಕೃತಿಯು 1 x 1 ಅಡಿಗಿಂತ ಚಿಕ್ಕದು, 3 x 3 ಅಡಿಗಿಂತ ದೊಡ್ಡದು ಇರಬಾರದು. ಶಿಲ್ಪವು 20 ಕಿ.ಜಿ ಗಿಂತ ಕಡಿಮೆ ಭಾರವಾಗಿರಬೇಕು. ಚಿತ್ರಕಲಾಕೃತಿಯನ್ನು ಫೋಟೋ ನೊಂದಿಗೆ ಮತ್ತು ಶಿಲ್ಪಕೃತಿಯನ್ನು ಪೀಠದೊಂದಿಗೆ ಕಳುಹಿಸುವುದು. ಶಿಲ್ಪವು ದುರ್ಬಲ ಮಾಧ್ಯಮದಿಂದ ನಿರ್ಮಿತವಾಗಿರಬಾರದು.

ಕಲಾಕೃತಿಗಳನ್ನು ಸಮಿತಿಯು ಹಾನಿಗೊಳಗಾಗದಂತೆ ಸಂರಕ್ಷಿಸಲು ಬಯಸುತ್ತದೆ. ಆದಾಗ್ಯೂ ಕೈ ಮೀರಿದ ಪರಿಸ್ಥಿತಿಗೆ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಜವಾಬ್ದಾರಿಯಾಗುವುದಿಲ್ಲ.

ಕಲಾ ಪ್ರದರ್ಶನ ಮುಗಿದ ನಂತರ ಅಕ್ಟೋಬರ್ 07 ರಿಂದ 14  ರೊಳಗೆ ಕಲಾಕೃತಿಗಳನ್ನು ಹಿಂಪಡೆಯುವುದು. ಈ ಅವಧಿಯೊಳಗೆ ಹಿಂಪಡೆಯದ ಕಲಾಕೃತಿಗಳಿಗೆ ಉಪಸಮಿತಿಯು ಹೊಣೆಯಲ್ಲ, ಕಲಾಕೃತಿಯನ್ನು ಸಲ್ಲಿಸುವುದು ಮತ್ತು ಹಿಂದಕ್ಕೆ ಪಡೆಯುವುದು ಕಲಾವಿದರ ಸ್ವಂತ ಜವಾಬ್ದಾರಿಯಾಗಿದೆ.
ಅರ್ಜಿ ನಮೂನೆಯನ್ನು https://cavamysore.karnataka.gov.in & https://mysore.nic.in ವೆಬ್ ಸೈಟ್ ಮೂಲಕ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಚಂದ್ರಶೇಖರ ಎ.ಪಿ. ಮೊಬೈಲ್ ಸಂಖ್ಯೆ 9844595568 ಮತ್ತು ರವಿಮೂರ್ತಿ.ಕೆ ಮೊಬೈಲ್ ಸಂಖ್ಯೆ: 9844082579 ರವರನ್ನು ಸಂರ್ಪಕಿಸಬಹುದಾಗಿರುತ್ತದೆ ಎಂದು ಮೈಸೂರು ದಸರಾ ಮಹೋತ್ಸವ-2024ರ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಕಾರ್ಯಾಧ್ಯಕ್ಷರಾದ ಬಿಂದುರಾಯ ಆರ್ ಬಿರಾದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here