Views: 0
ಕಲಬುರಗಿ,ಮೇ:31
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ-2024 ಹಿನ್ನೆಲೆಯಲ್ಲಿ 2024ರ ಜೂನ್ 3 ರಂದು ಮತದಾನ ನಡೆಯಲಿದೆ. ಸಂಬಂಧಪಟ್ಟ ಮತದಾರರು ಹತ್ತಿರದ ತಹಸಿಲ್ದಾರ ಕಚೇರಿ ಹಾಗೂ ಕಲಬುರಗಿ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕಲಬುರಗಿ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಇದಲ್ಲದೇ ಸಂಬಂಧಪಟ್ಟ ಮತದಾರರು ಮತದಾರರ ಸಹಾಯಕ್ಕಾಗಿ ಜಿಲ್ಲಾ/ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾದ ಮತದಾರರ ಸಹಾಯವಾಣಿ ಕೇಂದ್ರಗಳಿಗೆ (ಗಿoಣeಡಿ ಈಚಿಛಿiಟiಣಚಿಣioಟಿ ಅeಟಿಣಡಿe) ಗಳ ದೂರವಾಣಿಗೆ ಕರೆ ಮಾಡಿ ಮತದಾನ ಮಾಡಬೇಕಾದ ಮತಗಟ್ಟೆ ಸಂಖ್ಯೆ ಹಾಗೂ ಮತದಾರರ ಕ್ರಮ ಸಂಖ್ಯೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ತಾಲೂಕುವಾರು ಸಹಾಯವಾಣಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ ವಿವರ ಇಂತಿದೆ. ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ 1950 ಇರುತ್ತದೆ.
ಅಫಜಲಪೂರ ತಹಸೀಲ್ದಾರ ಕಚೇರಿ-ಸಹಾಯವಾಣಿ ಸಂಖ್ಯೆ 08470-282020,
ಆಳಂದ ತಹಸೀಲ್ದಾರ ಕಚೇರಿ-08477-202428, ಚಿಂಚೋಳಿ ತಹಶೀಲ್ದಾರ ಕಚೇರಿ-ಸಹಾಯವಾಣಿ ಸಂಖ್ಯೆ-08475-200127, ಚಿತ್ತಾಪೂರ ತಹಸಿಲ್ದಾರ ಕಛೇರಿ-ಸಹಾಯವಾಣಿ ಸಂಖ್ಯೆ-08474-236250, ಶಹಾಬಾದ್ ತಹಶೀಲ್ದಾರ ಕಚೇರಿ-ಸಹಾಯವಾಣಿ ಸಂಖ್ಯೆ-08474-200145, ಕಲಬುರಗಿ ನಗರಕ್ಕೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ-ಸಹಾಯವಾಣಿ ಸಂಖ್ಯೆ-08472-241364, ಕಲಬುರಗಿ ಗ್ರಾಮೀಣಕ್ಕೆ ಸಂಬಂಧಿಸಿದಂತೆ ಕಲಬುರಗಿ ತಹಶೀಲ್ದಾರ ಕಛೇರಿ-ಸಹಾಯವಾಣಿ ಸಂಖ್ಯೆ 08472-278636, ಕಮಲಾಪೂರ ತಹಶೀಲ್ದಾರ ಕಛೇರಿ-ಸಹಾಯವಾಣಿ ಸಂಖ್ಯೆ 08478-200144, ಜೇವರ್ಗಿ ತಹಶೀಲ್ದಾರ ಕಚೇರಿ-ಸಹಾಯವಾಣಿ ಸಂಖ್ಯೆ 08442-236025, ಯಡ್ರಾಮಿ ತಹಶೀಲ್ದಾರ ಕಚೇರಿ-ಸಹಾಯವಾಣಿ ಸಂಖ್ಯೆ-8310770063, ಸೇಡಂ ತಹಶೀಲ್ದಾರ ಕಚೇರಿ-ಸಹಾಯವಾಣಿ ಸಂಖ್ಯೆ-08441-276184 ಹಾಗೂ ಕಾಳಗಿ ತಹಶೀಲ್ದಾರ ಕಚೇರಿ-ಸಹಾಯವಾಣಿ ಸಂಖ್ಯೆ-7483334202
ಸಂಬಂಧಪಟ್ಟ ಮತದಾರರು ಈ ಸಹಾಯವಾಣಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.